ಜಾತಿಸ್ಮರಣ ಪದ್ದತಿ
೧. ಮುನ್ನ ಪೂರ್ವದಲಾನು । ಪನ್ನಗಧರನಾಳು
ಎನ್ನಯ ಪೆಸರು ಪುಷ್ಪದತ್ತನು-ಎಂದು
ಮನ್ನಿಪರು ನೋಡ ಸರ್ವಜ್ಞ

೨. ಅಂದಿನಾ । ಪುಷ್ಪದತ್ತ ॥ ಬಂದ ವರರುಚಿಯಾಗಿ
ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ
ನಿಂದವನು ತಾನೇ ಸರ್ವಜ್ಞ

೩. ಮಕ್ಕಳಿಲ್ಲವು ಎಂದು । ಅಕ್ಕಮಲ್ಲಮ್ಮನು
ದುಕ್ಕದಿ ಬಸವ । ಗರಿಪಲ್ಲವ । - ಕಾಶಿಯ
ಮುಕ್ಕಣ್ಣಗೆ ಹೋದ ಸರ್ವಜ್ಞ

೪. ಮಾಸನೂರ ಬಸವರಸ । ಕೊಸನಿಶನ ಕೇಳಲು
ಕಾಶಿಯೀಶನೊಳು ಪಡೆದ ವರ - ವಧು ನಡುವೆ
ಸೂಸಿತೆಂತಲು ಸರ್ವಜ್ಞ

೫. ಗಂಡಾಗಬೇಕೆಂದು । ಪಿರಿಂಡವ ನುಂಗಲು
ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು
ಕಂಡುದನೆ ಪೇಳ್ವೆ ಸರ್ವಜ್ಞ

೬. ಗಡಿಗೆ-ಮಡಕೆಯ ಕೊಂಡು । ಅಡುವಡಾವಿಗೆಯೊಳಗೆ
ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು
ತಡೆ ಬಿಡಲಾಯ್ತು ಸರ್ವಜ್ಞ

೭. ಅಂಬಲೂರೊಳಗೆಸೆವ । ಕುಂಬಾರಸಾಲೆಯಲಿ
ಇಂದಿನ । ಕಳೆಯ । ಮಾಳಿಯೊಳು - ಬಸವರಸ
ನಿಂಬಿಟ್ಟನೆನ್ನ ಸರ್ವಜ್ಞ

೮. ಬಿಂದುವ ಬಿಟ್ಟು ಹೋ । ದಂದು ಬಸುರಾದಳವ
ಳಂದದಿಯಷ್ಟಾದಶ ಮಾಸ - ಉದರದಲಿ
ನಿಂದು ನಾ ಬೆಳೆದೆ ಸರ್ವಜ್ಞ

೯. ಹೆತ್ತವಳು ಮಾಳಿ ಎನ್ನ । ನೊತ್ತಿ ತೆಗೆದವಳು ಕೇಶಿ
ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ
ಬತ್ತಲಿರಿಸಿದಳು ಸರ್ವಜ್ಞ

೧೦. ಬೆಳೆದೆನವರಿಂದೆನ್ನ । ಕಳೆಯ ಕಂಡವರೆಲ್ಲ
ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ
ತಿಳಿದವರರೆಗು ಸರ್ವಜ್ಞ

೧೧. ಗಂಡ ತನ್ನಯದೆಂಬ । ಲಂಡೆ ತನ್ನಯದೆಂಬ
ಖಂಡಪರಶುವಿನ ವರಪುತ್ರ - ನಾನು ನೆರೆ
ಕಂಡುದೆನೆ ಪೇಳ್ವೆ ಸರ್ವಜ್ಞ

೧೨. ಮಾಳನು ಮಾಳಿಯು । ಕೊಳ್ ತಿಂದ ಹೆಮ್ಮೆಯಲಿ
ಕೇಳೆ ನೀನಾರ ಮಗನೆಂದು - ನಾ ಶಿವನ
ಮೇಳದಣುಗೆಂಬೆ ಸರ್ವಜ್ಞ

೧೩. ತಂದೆ ಹಾರುವನಲ್ಲ । ತಾಯಿ ಮಾಳಿಯು ಅಲ್ಲ
ಚಂದ್ರಶೇಖರನ ವರಪುತ್ರ - ನಾ ನಿಮ್ಮ
ಕಂದನಲ್ಲೆಂಬೆ ಸರ್ವಜ್ಞ

೧೪. ನೊಕಿದವರಾಗ । ಕುಕಟಿಯವನು
ಲೋಕದೊಳಗೆಲ್ಲ ಕಂಡುದ - ನುಡಿವುತ
ಏಕವಾಗಿಹೆನು ಸರ್ವಜ್ಞ

೧೫. ಮೀರಿ ಬೆಳೆಯಲ್ಕೆನಗೆ । ಅರಿ ಬಣ್ಣವನುಡಿಸಿ
ಮೂರು ರುಚಿದೋಳು ಶಿವ - ತನ್ನನು
ತೋರದೇ ಹೋದ ಸರ್ವಜ್ಞ

೧೬. ಕ್ಷೀರದೊಳು ಘೃತವಿದ್ದು । ನೀರೊಳು ಶಿಖಿಯಿದ್ದು
ಆರಿಗೆಯು ತೋರಿದಿಹುದಂತೆ - ಎನ್ನೊಳಗೆ
ಸಾರಿಹನು ಸಿವನು ಸರ್ವಜ್ಞ

೧೭. ಹೊಲಸು ಮಾಂಸದ ಹುತ್ತ । ಎಲುವಿನ ಹಂಜರವು
ಹೊಲೆ ಬಲಿದು ತನುವಿನೊಳಗಿರ್ದು - ಮತ್ತದರಿ
ಕುಲವನೆಣೆಸುವರೆ ಸರ್ವಜ್ಞ 	
	
೧೮. ಎಲುವಿನ ಕಾಯಕ್ಕೆ । ಸಲೆ ಚರ್ಮವನು ಹೊದಿಸಿ
ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ

೧೯. ಬೆಂದಾವಿಗೆಯ ಭಾಂಡ । ಒಂದೊಂದು ಭೋಗವನು
ಅಂದಂದಿಗುಂಡು ಒಡೆದು ಹಂಚಾದಂತೆ
ಬಿಂದುವಿನ ದೇಹ ಸರ್ವಜ್ಞ

೨೦. ಮಗಳಕ್ಕ ತಂಗಿಯು । ಮಿಗೆ ಸೊಸೊಯು ನಾದಿನಿಯು
ಜಗದ ವನಿತೆಯರು ಜನನಿ ಮಂತಾದವರು
ಜಗಕೊಬ್ಬಳೈಸೆ ಸರ್ವಜ್ಞ

೨೧. ಪಂಚವಿಂಶಶಿತತ್ವ । ಸಂಚದ ದೇಹವನು
ಹಂಚೆಂದು ಕಾಣಲರಿಳೆಯದೋಡೆ - ಭವ ಮುಂದೆ
ಗೊಂಚಲಾಗಿಹುದು ಸರ್ವಜ್ಞ

೨೨. ನೋಡಿರೇ ಎರಡೊರು । ಕೂಡಿದ ಮಧ್ಯದಲಿ
ಮೂಡಿಹ ಸ್ಮರನ ಮನೆಯಲ್ಲಿ - 
ನಾಡೆಯುದಯಿಸಿತು ಸರ್ವಜ್ಞ

೨೩. ಊರಗಳ ಮೂಲದಲಿ । ಮಾರನರಮನೆಯಲ್ಲಿ
ಭೋರಿಜೀವಿಗಳ ಹುಟ್ಟಿಸಿದ - ಅಜನಿಗಿ
ನ್ನಾರು ಸಾಯುಂಟೆ ಸರ್ವಜ್ಞ

೨೪. ಲಿಂಗಯಲ್ಲಿ । ಸಂಗಿಸಿ ಚರಿಸಲು
ಜಂಘೆಯಲಿ ನಡವ ಸರ್ವ ಜೀವಂಗಳು
ಲಿಂಗದಿಂ ಜನನ ಸರ್ವಜ್ಞ

೨೫. ಲಿಂಗ ಉಳ್ಳನೆ ಪುರುಷ । ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿಭೋಗ - ವತುಳಸುಖ
ಲಿಂಗದಿಂ ಜನನ ಸರ್ವಜ್ಞ

೨೬. ಮಾಸಿನೊಳು ಮುಸುಕಿರ್ದು । ಮೂಸಿ ಬರುತಾಸನವ
ಹೇಸಿಕೆಯ ಮಲವು ಸೂಸುವುದ - ಕಂಡು ಕಂ
ಡಾಸೆ ಬಿಡದು ಸರ್ವಜ್ಞ

೨೭. ಬ್ರಹ್ಮ ಗಡ । ಸ್ಥಿತಿಗೆ ಆ ವಿಷ್ಣು ಗಡ
ಹತವ ಮಾಡುವಡೆ ರುದ್ರ ಗಡ - ಎಂದೆಂಬ
ಸ್ಥಿತಿಯ ತಿಳಿಯೆಂದ ಸರ್ವಜ್ಞ

೨೮. ದಿಟವೆ ಪುಣ್ಯದ ಪುಂಜ । ಸಟೆಯೆ ಪಾಪದ ಬೀಜ
ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ
ಘಟವ ನೆಚ್ಚದಿರು ಸರ್ವಜ್ಞ 	

೨೯. ಪರಮನೈಮೊಗ ಉಳಿದು । ನೆರವಿಯನೊಲ್ಲದೆ
ನರರೊಪ ಧರಿಸಿ ಗುರುವಾಗಿ - ಬೋಧಿಪಗೆ
ಸರಿ ಯಾರ ಕಾಣೆ ಸರ್ವಜ್ಞ

೩೦. ಪರತತ್ವ ತನ್ನೊಳಗೆ । ಎರವಿಲ್ಲದಿರುತಿರಲು
ಪರದೇಶಿಯಾಗಿ ಇರುತಿರು - ವಾತನ
ಪರಮ ಗುರುವೆಂಬೆ ಸರ್ವಜ್ಞ

೩೧. ಸುರತರು ಮರನಲ್ಲ । ಸುರಭಿಯೊಂದಾವಲ್ಲ
ಪರುಷ ಪಾಷಾಣದೊಳಗಲ್ಲ - ಗುರುವು ತಾ
ನರರೊಳಗಲ್ಲ ಸರ್ವಜ್ಞ

೩೨. ದರುಶನವಾರಿರಃ । ಪುರುಷರು ಮೂವರಿಂ
ಪರತತ್ವದಿರವು ಬೇರೆಂದು - ತೋರಿದ
ಗುರು ತಾನೆ ದೈವ ಸರ್ವಜ್ಞ

೩೩. ಜ್ಯೋತಿಯಿಂದವೆ ನೇತ್ರ । ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರೆವಂತೆ - ಶಿವನ ಗುರು
ನಾಥನಿಂದರಿಗು ಸರ್ವಜ್ಞ

೩೪. ಬ್ರಹ್ಮವೆಂಬುದು ತಾನು । ಒಮ್ಮಾರು ನೀಳವೇ
ಒಮ್ಮೆ ಸದ್ಗುರುವಿನುಪದೇಶ - । ವಾಲಿಸಲು ।
ಗಮ್ಮನೆ ಮುಕ್ತಿ ಸರ್ವಜ್ಞ

೩೫. ಹರ ತನ್ನೊಳಿರ್ದುದ । ಗುರುತೋರಿ । ದಿರಲಹುದೆ ।
ಮರನೊಳಗ್ನಿ ಇರುತಿರ್ದು - ತನ್ನ ತಾ
ನುರಿವುದ ಕಂಡ ? ಸರ್ವಜ್ಞ

೩೬. ನರಕ ಪಾಪಿಷ್ಠರಿಗೆ । ಸುರಲೋಕ ( ದಿಟ್ಟರಿಗೆ )
ಗುರುಬೋಧೆಯಲ್ಲಿ ಜಗ ಉಳಿಗು - ಮಲ್ಲದೊಡೆ
ಉರಿದು ಹೋಗುವುದು ಸರ್ವಜ್ಞ

೩೭. ಮರಹುಳ್ಳ ಮನುಜರಿಗೆ । ತೆರನಾವುರೆವುದಕೆ
ಕರಿಗೊಂಡ ಭ್ರಮೆಯ ಪರೆವ - ಗುರುವಿನ ಭೋಧೆ
ಕರಿಗೊಳ್ಳಬೇಕು ಸರ್ವಜ್ಞ

೩೮. ಮಂಡೆ ಬೋಳಾದೊಡಂ । ದಂಡು ಕೋಲ್ವಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ
ಕಂಡಲ್ಲದಿಲ್ಲ ಸರ್ವಜ್ಞ

೩೯. ಮೂರುಕಣ್ಣೀಶ್ವರನ । ತೋರಿಕೊಡಬಲ್ಲ ಗುರು
ಬೇರರಿವುದೊಂದು ತೆರನಿಲ್ಲ - ಗುರುಕರಣ
ತೋರಿಸುಗು ಶಿವನ ಸರ್ವಜ್ಞ

೪೦. ಊರಿಗೆ ದಾರಿಯ । ನಾರು ತೋರಿದರೇನು
ಸಾರಾಯಮಪ್ಪ ಮತವನರಿಹಿಸುವ ಗುರು
ಆರಾದೊಡೇನು ಸರ್ವಜ್ಞ

೪೧. ಮನವು ಮುಟ್ಟಲು ಗಂಡು । ತನವು ಸೋಂಕಲು ಪಾಪ
ಮನವೇಕದಿಂದ ಗುರುಚರಣ - ಸೋಂಕಿದೊಡೆ
ತನು ಶುದ್ದವಯ್ಯ ಸರ್ವಜ್ಞ

೪೨. ತುಪ್ಪವಾದಾ ಬಳಿಕ । ಹೆಪ್ಪನೆರೆದವರುಂಟೆ
ನಿಃಪತಿಯಾದ ಗುರುವಿನುಪದೇಶದಿಂ
ತಪ್ಪದೇ ಮುಕ್ತಿ ಸರ್ವಜ್ಞ

೪೩. ಪರುಷ ಲೋಹವ ಮುಟ್ಟಿ । ವರುಷವಿರಬಲ್ಲುದೇ
ಪರಷವೆಂತಂತೆ ಶಿಷ್ಯಂಗೆ - ಗುರುವಿನ
ಸ್ಪರುಶನವೆ ಮೋಕ್ಷ ಸರ್ವಜ್ಞ

೪೪. ತಾಪದ ಸಂಸಾರ । ಕೊಪದಲಿ ಬಿಳ್ದವರು
ಆಪತ್ತನುಳಿದು ಪೊರಮಡಲು - ಗುರುಪಾದ
ಸೋಪಾನ ಕಂಡು ಸರ್ವಜ್ಞ

೪೫. ಮೊಸರ ಕಡೆಯಲು ಬೆಣ್ಣೆ । ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ
ವಶವಾಗದಿಹುದೆ ಸರ್ವಜ್ಞ      
 
೪೬. ಗುರುಪಾದಸೇವೆ ತಾ । ದೊರೆಕೊಂಡಿತಾದೊಡೆ
ಹರೆವುದು ಪಾಪವರಿದೆನಲು - ವಜ್ರಾಯುಧದಿ
ಗಿರಿಯ ಹೊಯ್ದಂತೆ ಸರ್ವಜ್ಞ

೪೭. ಗುರುವಿನ ಸೇವೆಯು । ದೊರಕೊಂಡಿತಾದೊಡೆ
ಹರೆವುದು ಪಾಪವರಿದೆನಲು - ವಜ್ರಾಯುಧದಿ
ಗಿರಿಯ ಹೊಯ್ದಂತೆ ಸರ್ವಜ್ಞ

೪೮. ಎತ್ತಾಗಿ ತೊತ್ತಾಗಿ । ಹಿತ್ತಿಲದ ಗಿಡವಾಗಿ
ಮತ್ತೆ ಪಾದದ ಕೆರವಾಗಿ - ಗುರುವಿನ
ಹತ್ತಿಲಿರು ಎಂದು ಸರ್ವಜ್ಞ

೪೯. ಸಾಣೆಕಲ್ಲೊಳು ಗಂಧ । ಮಾಣದೆ ಎಸೆವಂತೆ
ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ
ಕಾಣೆಸುತಿಹುದು ಸರ್ವಜ್ಞ

೫೦. ಬೆಟ್ಟ ಕರ್ಪುರ ಉರಿದು । ಬೊಟ್ಟಿಡಲು ಬೂದಿಲ್ಲ
ನೆಟ್ಟನೆ ಗುರುವನರಿದನ - ಕರ್ಮವು
ಮುಟ್ಟಲಂಜುವವು ಸರ್ವಜ್ಞ

೫೧.ದುರ್ಗಿ(ಮಾರಿಯ ಮುಂಡಿ) । ಯಗ್ಗದ ಶಕ್ತಿಗಳು
ಸದ್ಗುಣ ಸತ್ಯ ಮುಸುರಿಹರ - ಮುಟ್ಟವು
ಸದ್ಗುರುವಿನಾಜ್ಞೆ ಸರ್ವಜ್ಞ

೫೨. ವಿಷಯಕ್ಕೆ ಕುದಿಯದಿರು । ಆಶನಕ್ಕೆ ಹದೆಯದಿರು
ಅಸಮಾಕ್ಷನಡಿಯನಗಲದಿರು - ಗುರುಕರುಣ
ವಶವರ್ತಿಯಹುದು ಸರ್ವಜ್ಞ

೫೩. ತಂದೆಗೆ ಗುರುವಿಗೆ । ಒಂದು ಅಂತರವುಂಟು
ತಂದೆ ತೋರಿವನು ಶ್ರೀಗುರುವ - ಗುರುರಾಯ
ಬಂಧನವ ಕಳೆವ ಸರ್ವಜ್ಞ

೫೪. ಹುಸಿವನ ಬೇಹಾರ । ಕಸ ಹತ್ತಿದಾರಂಬ
ವಿಷಯ ಉಳ್ಳವನ ಗುರುತನ - ಇವು ಮೂರು
ಮಸಿವಣ್ಣ ಕಂಡ ಸರ್ವಜ್ಞ

೫೫. ಹಂದಿ ಚಂದನಸಾರ । ಗಂಧವ ಬಲ್ಲುದೇ
ಒಂದುವ ತಿಳಿಯಲರಿಯದನ - ಗುರುವಿಗೆ
ನಿಂದ್ಯವೇ ಬಹುದು ಸರ್ವಜ್ಞ

೫೬. ಹೊಲಬನರಿಯದ ಗುರುವು । ತಿಳಿಯಲರಿಯದ ಶಿಷ್ಯ
ನೆಲೆಯನಾರಯ್ಯದುಪದೇಶ - ವಂಧಕನು
ಕಳನ ಹೊಕ್ಕಂತೆ ಸರ್ವಜ್ಞ

೫೭. ಶ್ವಾನ ತೆಂಗಿನ ಕಾಯ । ತಾನು ಮೆಲಬಲ್ಲುದೇ
ಜ್ಞಾನವಿಲ್ಲದಗೆ ಉಪದೇಶ - ವಿತ್ತಡೆ
ಹಾನಿ ಕಂಡಯ್ಯ ಸರ್ವಜ್ಞ

೫೮. ಭಕ್ತಿಯಿಲ್ಲದ ಶಿಷ್ಯ । ಗೊತ್ತಿ ಕೊಟ್ಟುಪದೇಶ
ಬತ್ತಿದ ಕೆರೆಯ ಬಯಲಲ್ಲಿ - ರಾಜನವ
ಬಿತ್ತಿ ಬೆಳೆವಂತೆ ಸರ್ವಜ್ಞ

೫೯. ಹಸಿಯ ಸೌದೆಯ ತಂದು । ಹೊಸೆದರುಂಟೇ ಕಿಚ್ಚು
ವಿಷಯಂಅಗಳುಳ್ಳ ಮನುಜರಿಗೆ - ಗುರುಕರುಣ
ವಶವರ್ತಿಯಹುದೆ ಸರ್ವಜ್ಞ

೬೦. ಒಂದೂರ ಗುರುವಿರ್ದು । ವಂದನೆಯ ಮಾಡದೆ
ಸಂದಿಸೆ ಕೊಳ ತಿನಿತಿಪರ್ವನ - ಇಅರವು
ಹಮ್ದಿಯ ಇಅರವು ಸರ್ವಜ್ಞ  

ಲಿಂಗಾತಿಶಯ ಪದ್ಧತಿ
೬೧. ಕಲ್ಲಿನೊಳ್ ಕುಚದಲ್ಲಿ । ಬಳ್ಳದೊಳ್ ಪಿಕ್ಕೆಯಲಿ
ಎಲ್ಲಿ ಭಾವಿಸಿದೊಡಲ್ಲಿರ್ಪ - ಭರಿತನನು
ಬಲ್ಲವೇ ನಿಗಮ ಸರ್ವಜ್ಞ

೬೨. ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ
ಲಿಂಗದೆ ಜಗವು ಅಡಗಿಹುದು - ಲಿಂಗವನು
ಹಿಂಗಿ ಪರ ಉಂಟೆ ಸರ್ವಜ್ಞ

೬೩. ಓಂಕಾರ ತಾನಲ್ಲ । ಹ್ರಾಂಕಾರ ಮುನ್ನಲ್ಲ
ಆಂಕಾಶತಳವ ಮೀರೆಹುದು - ಹರಿಯಜರು
ತಾಂ ಕಾಣರಯ್ಯ ಸರ್ವಜ್ಞ

೬೪. ಓರ್ವನಲ್ಲದೆ ಮತ್ತೆ । ಇರ್ವರುಂಟೇ ಮರುಳೆ
ಸರ್ವಜ್ಞನೊರ್ವ ಜಗಕೆಲ್ಲ - ಕರ್ತಾರ
ನೊರ್ವನೇ ದೇವ ಸರ್ವಜ್ಞ

೬೫. ಉಣಲಡಿಗೆ ಹಲವಾಗಿ । ಕಣಿಕ ತಾನೊಂದಯ್ಯ
ಮಣಲೇಸು ದೈವ ಘನವಾಗಿ - ಲೋಕಕ್ಕೆ
ತ್ರಿಣಯನ ಸರ್ವಜ್ಞ

೬೬. ಹರಿಬ್ರಹ್ಮರೆಂಬವರು । ಹರನಿಂದಲಾದವರು
ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ
ಸರಿ ಯಾರ ಕಾಣೆ ಸರ್ವಜ್ಞ

೬೭. ಹಿರಿಯ ಬೊಮ್ಮನು ಕೆಂಚ । ಹಿರಿಯ ಹರಿ ತಾ ಕರಿಕ
ಪುರಹರನು ಶುದ್ಧ ಧವಳಿತನು - ಇರೆ ಬೇರೆ
ಹರಗೆ ಸರಿಯಹರೀ ಸರ್ವಜ್ಞ

೬೮. ಹರಿದ ತಲೆ ಬ್ರಹ್ಮಂಗೆ \ ಕುರೆಯ ತಲೆ ದಕ್ಷಂಗೆ
ನೆರೆ ಹತ್ತು ಜನನವಾ ಹರಿಗೆ - ಇವರುಗಳು
ಕರೆಗೊರಲಗಣೆಯೆ ಸರ್ವಜ್ಞ

೬೯. ಹುಟ್ಟಿಸುವನಜನೆಂಬ । ಕಷ್ಟದ ನುಡಿ ಬೇಡ
ಹುಟ್ಟಿಸುವವ ತನ್ನ ಶಿರ ಹರೆಯೆ - ಮತ್ತೊಂದು
ಹುಟ್ಟಿಸಿಕೊಳನೇಕೆ ಸರ್ವಜ್ಞ

೭೦. ಬ್ರಹ್ಮ ನಿರ್ಮಿಪನೆಂಬ । ದುರ್ಮತಿಯೆ ನೀಂ ಕೇಳು
ಬ್ರಹ್ಮನಾ ಸತಿಗೆ ಮೂಗಿಲ್ಲ - ವಾ ಮೂಗ
ನಿರ್ಮಿಸನೇಕೆ ಸರ್ವಜ್ಞ

೭೧. ನರಹರಿಯ ಕೊಲುವಂದು । ಎರಳೆಯನೆಸುವಂದು
ಮರಳಿ ವರಗಳನು ಕೊಡುವಂದು - ಸ್ಮರಹರೆಗೆ
ಸರಿಯಾರ ಕಾಣೆ ಸರ್ವಜ್ಞ

೭೨. ಷಡುದರುಶನಾದಿಗಳು । ಮೃಡ ಮಾಡಲಾದುವು
ಹೊಡವಡುತೆ ನಿಗಮವರಿಸುವವು - ಅಭವನ
ಗಡಣಕೇಕೆ ಯಾರು ಸರ್ವಜ್ಞ

೭೩. ದೇಶಕ್ಕೆ ಸಜ್ಜನನು । ಹಾಸ್ಯಕ್ಕೆ ಹನುಮಂತ
ಕೇಶವ ಭಕ್ತರೊಳಗೆಲ್ಲ - ಮೂರು ಕ
ಣ್ಣೇಶನೇ ದೈವ ಸರ್ವಜ್ಞ

೭೪. ಶೇಷನಿಂ ಬಲರಿಲ್ಲ । ಮೋಸದಿಂ ಕಳರೆಲ್ಲ
ನೇಸರೆಂ ಜಗಕೆ ಹಿತರಿಲ್ಲ - ದೇವ ತಾ
ಈಶನಿಂದಿಲ್ಲ ಸರ್ವಜ್ಞ

೭೫. ಸಂಗದಿಂ ಕೆಳೆಯಿಲ್ಲ । ಬಿಂಗದಿಂ ಹೊರೆಯಿಲ್ಲ
ಗಂಗೆಯಿಂದಧಿಕ ನದಿಯಿಲ್ಲ - ಪರದೈವ
ಲಿಂಗದಿಂದಿಲ್ಲ ಸರ್ವಜ್ಞ

೭೬. ಉಂಬಳಿ ಇದ್ದಂತೆ । ಕಂಬಳಿಯ ಹೊದೆವರೆ
ಶಂಭುವಿದ್ದಂತೆ ಮತ್ತೊಂದು - ದೈವವ
ನಂಬುವನೆಗ್ಗ ಸರ್ವಜ್ಞ

೭೭. ಎಂಜಲು ಶೌಚವು । ಸಂಜೆಯೆಂದೆನ ಬೇಡ
ಕುಂಜರ ವನವ ನೆನೆವಂತೆ - ಬಿಡದೆ ನಿ
ರಂಜನನ ನೆನೆಯ ಸರ್ವಜ್ಞ       delete   
 
೭೮. ಹರಭಕ್ತಿಹಲ್ಲದೆ । ಹರೆದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರ - ನೆನ್ನೆಯ
ಗುರು ದೇವರೆಂಬೆ ಸರ್ವಜ್ಞ

೭೯. ಸುರುತರುವು ಸುರಧೇನು । ಸುರಮಣೆ ಸೌರಲತೆ
ಪರುಷಷ್ಟತನುವು ಹರಿವ ನದಿ - ಯೆಲ್ಲವು
ಪರಮನಿಂ ಜನನ ಸರ್ವಜ್ಞ

೮೦. ಬಾಲ್ಯ - ಯೌವನ ಪ್ರೌಢ । ಲೋಲ ಹಲವಾದ ತನು
ಏಳುತ್ತ ಮಡುವುತಿರ ಬೇಡ - ಅನುದಿನವು
ಶೊಲಿಯ ನೆನೆಯ ಸರ್ವಜ್ಞ

೮೧. ಕುಲಗೆಟ್ಟವರ ಚಿಂತೆ । ಯೊಳಗಿರ್ಪರಂತೆಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕೆ - ಋಷಿಗಳು
ಕುಲಗೋತ್ರರುಗಳು ಸರ್ವಜ್ಞ

೮೨. ಭೊತೇಶ ಶರಣೆಂಬ । ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಭೊತೇಶ - ಶರಣೆನ್ನ
ದಾತ ಮಾದಿಗನು ಸರ್ವಜ್ಞ

೮೩. ಯಾತರ ಹೂವಾದರು । ನಾತರೆ ಸಾಲದೆ
ಜಾತಿ- ವಿಜಾತಿಯೆನಬೇಡ - ಶಿವನೊಲಿ
ದಾತನೇ ಜಾತಿ ಸರ್ವಜ್ಞ

೮೪. ಹರಭಕ್ತಿಯಿಲ್ಲದ । ಪರಮಋಷಿ ಮುಖ್ಯನೇ
ಹರಭಕ್ತಿಯುಳ್ಳ ಸ್ವಪಚನಾ - ದೊಡೆಯಾತ್
ಪರಮ ಋಷಿ ತಾನೆ ಸರ್ವಜ್ಞ

೮೫. ನಾಲ್ಕು ವೇದವನೋದಿ । ಶೀಲದಲಿ ಶುಚಿಯಾಗಿ
ಶೂಲಿಯ ಪದವ ಮರೆದೊಡೆ - ಗಿಳಿಯೋದಿ
ಹೇಲ ತಿಂದಂತೆ ಸರ್ವಜ್ಞ

೮೬. ಮಾಯಮೋಹವ ನಚ್ಚಿ । ಕಾಯವನು ಕರಗಿಸಿತೆ
ಆಯಾಸಗೊಳುತ ಇರಬೇಡ - ಓಂ ನಮಶ್ಯಿ
ವಾಯಯೆಂದನ್ನಿ ಸರ್ವಜ್ಞ

೮೭. ಸಾಯ್ವುದವಸರವೆ ಮನ । ಠಾಯಿಯಲಿ ನೋವುತ್ತೆ
ನಾಯಾಗಿ ನರಕ ಉಣಬೇಡ - ಓಂ ನಮಶ್ಯಿ
ವಾಯಯೇಂದನ್ನಿ ಸರ್ವಜ್ಞ

೮೮. ಅಕ್ಕರವೀ ಲೆಕ್ಕವು । ತರ್ಕಕ್ಕೆ ಗಣಿತಕ್ಕೆ
ಮಿಕ್ಕ ಓದುಗಳು ತಿರಿಕೆಗೆ - ಮೋಕ್ಷಕಾ
ರಕ್ಕರವೆ ಸಾಕು ಸರ್ವಜ್ಞ

೮೯. ಮುನಿವಂಗೆ ಮುನಿಯದಿರು । ಕನೆಯದಿರು
ಮನಸಿಜಾರಿಯನು ಮರೆಯದಿರು - ಶಿವನ ಕೃಪೆ
ಘ್ನಕೆ ಘನವಕ್ಕು ಸರ್ವಜ್ಞ

೯೦ .ಎಲ್ಲರನು ಬೇಡಿ । ಹಲ್ಲು ಬಾಯಾರುವು ದೆ
ಬಲ್ಲಂತೆ ಶಿವನ ಭಜಿಸಿದೊಡೆ - ಶಿವ ದಾನಿ
ಇಲ್ಲನ್ನಲರೆಯ ಸರ್ವಜ್ಞ

೯೧. ನರರ ಬೇಡುವ ದೈವ । ವರವೀಯ ಬಲ್ಲುದೇ
ತಿರಿವವರನಡರಿ ತಿರಿವಂತೆ - ಅದನರೆ
ಹರನನೆ ಬೇಡು ಸರ್ವಜ್ಞ

೯೨. ಇಂದ್ರನಾನೆಯನೇರೆ । ಒಂದುವನು ಕೊಡಲರೆಯ
ಚಂದ್ರಶೇಖರನು ಮುದಿಯೆತ್ತ - ನೇರೆ ಬೇ
ಕೆಂದುದನು ಕೊಡುವ ಸರ್ವಜ್ಞ

೯೩. ಲಿಂಗವ ಪೂಝಿಸುವಾತ । ಜಂಗಮಕೆ ನೀಡದೊಡೆ
ಲಿಂಗದ ಕ್ಷೋಭ ಘನವಕ್ಕು - ಮಹಲಿಂಗ
ಹಿಂಗುವುದು ಅವನ ಸರ್ವಜ್ಞ

೯೪. ಉಣ ಬಂದ ಲಿಂಗಕ್ಕೆ । ಉಣಲ್ಲಿಕ್ಕದಂತರಿಸಿ
ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈಮುಗಿವ
ಬಣಗುಗಳ ನೋಡ ಸರ್ವಜ್ಞ       delete   
 
 
೯೫. ದೇಹಿಯೆನಬೇಡ ನಿ । ದೇಹಿ ಜಂಗಮ ದೇವ
ದೇಹಗುಣದಾಶೆಯಳಿದರೆ - ಆತ ನಿ
ದೇಹಿ ಕಂಡಯ್ಯ ಸರ್ವಜ್ಞ

೯೬. ಸಾರವನು ಬಯಸುವೊಡೆ । ಕ್ಷಾರವನು ಧರಿಸುವುದು
ಮಾರಸಂಹರನ ನೆನೆದರೆ - ಮೃತ್ಯು ತಾ
ದೊರಕ್ಕೆ ದೊರ ಸರ್ವಜ್ಞ  

೯೭.ಉಂಡು ನೂರಡಿಯಿಟ್ಟು 
ಕೆಂಡಕ್ಕೆ ಕೈ ಕಾಸಿ
ಗಂಡುಭುಜ ಮೇಲ್ಮಾಡಿ 
ಮಲಗುವನು ವೈದ್ಯನ 
ಮಿಂಡನಂತಿಕ್ಕು ಸರ್ವಜ್ಞ॥
೨೦೦-೩೦೦
೨೦೦. ಸತ್ಯಕ್ಕೆ ಸರಿಯಿಲ್ಲ । ಚಿತ್ತಕ್ಕೆ ಸ್ಥಿರವಿಲ್ಲ । 
	ಹಸ್ತದಿಂದಧಿಕಹಿತರಿಲ್ಲ ಪರದೈವ ।
	ನಿತ್ಯನಿಂದಿಲ್ಲ ಸರ್ವಜ್ಞ ॥

೨೦೧. ಶೇಷಿನಿಂ ಬಲರಿಲ್ಲ । ಮೋಸದಿಂ ।
ನೇಸರಿಂ ಜಗಕ ಹಿತರಿಲ್ಲ । ಪರದೈವ ।
ಈಶನಿಂದಿಲ್ಲ ಸರ್ವಜ್ಞ ॥

೨೦೨. ಭಾಷೆಯಿಂ ಮೇಲಿಲ್ಲ । ದಾಸನಿಂ ಕೀಳಿಲ್ಲಿ ।
ಮೋಸದಿಂದಧಿಕ ಕೇಡಿಲ್ಲ ಪರದೈವ ।
ಈಶನಿಂದಿಲ್ಲ ಸರ್ವಜ್ಞ ॥

೨೦೩. ಸಂಗದಿಂ ಕೆಳೆಯಿಲ್ಲಿ । ಭಂಗದಿಂ ವ್ಯಥೆಯಿಲ್ಲ ।
ಗಂಗೆಯಿಂದಧಕ ನದಿಯಲ್ಲಿ ಪರದೈವ ।
ಲಿಂಗದಿಂದಿಲ್ಲ ಸರ್ವಜ್ಞ ॥

೨೦೪. ನಿದ್ರೆಯಿಂ ಸುಖವಿಲ್ಲ । ಪದ್ರದಿಂ ಅರಿಯಿಲ್ಲ ಮುಖ
ಮುದ್ರೆಯಿಂದಧಿಕ ಮಾತಿಲ್ಲ ದೈವವುಂ ।
ರುದ್ರನಿಂದಿಲ್ಲ । ಸರ್ವಜ್ಞ ॥

೨೦೫. ಮಾತೆಯಿಂ ಹಿತರಿಲ್ಲಿ । ಕೋತಿಯಿಂ ಮರಳಿಲ್ಲ ।
ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ ।
ಜಾತನಿಂದಿಲ್ಲ ಸರ್ವಜ್ಞ ॥

೨೦೬. ಇದ್ದಲಿಂ ಕರಿಯಿಲ್ಲ । ಬುದ್ಢಿಯಿಂ ಹಿರಿದಿಲ್ಲ ।
ವಿದ್ಯದಿಂದಧಿಕ ಧನವಿಲ್ಲ ದೈವತಾ ।
ರುದ್ರನಿಂದಿಲ್ಲ ಸರ್ವಜ್ಞ ॥

೨೦೭. ಲೀಲೆಯಿಂ ಕಣ್ಣಿಲ್ಲ । ಗಾಲಿಯಿಂ ಬಟುವಿಲ್ಲ ।
ವಾಲಿಯಿಂದಧಿಕ ಬಲರಿಲ್ಲ ಪರದೈವ ।
ಶೂಲಿಯಿಂದಿಲ್ಲ ಸರ್ವಜ್ಞ ॥

೨೦೮. ನಿಂಬೆಗಿಂ ಹುಳಿಯಿಲ್ಲ । ತುಂಬೆಗಿಂ ಕರಿದಿಲ್ಲ ।
ನಂಬಿಗೆಯಿಂದಧಿಕ ಗುಣ್ವವಿಲ್ಲ । ದೈವವುಂ ।
ಶುಭವಿಂದಿಲ್ಲ ಸರ್ವಜ್ಞ ॥

೨೦೯. ನಾಲಿಗೆಗೆ ನುಣುಪಿಲ್ಲ । ಹಾಲಿಗಿಂ ಬಿಳಿಪಿಲ್ಲ ।
ಕಾಲನಿಂದಧಿಕ ಅರಿಯಿಲ್ಲ ದೈವವುಂ ।
ಶೂಲಿಯಿಂದಿಲ್ಲ ಸರ್ವಜ್ಞ ॥

೨೧೦. ಉಂಲಡಿಗೆ ಹಲಾವಾಗಿ । ಕಣಿಕ ತಾನೊಂದಯ್ಯ
ಮಣಿಯಿಸಿವೆ ದೈವ ಘನವಾಗಿ,
ಜಗಕೆಲ್ಲಿ ತ್ರಿಣಯನೇ ದೈವ ಸರ್ವಜ್ಞ ॥

೨೧೧. ಆಡಾದನಾ ಅಜನು । ಕೊಡಗನದಾದನು ಹರಿಯು
ನೋಡಿದರೆ ಶಿವನು ನರಿಯಾದನೀ ಬೆಡಗೆ
ರೂಢಿಯೊಳು ಬಲ್ಲೆ ಸರ್ವಜ್ಞ ॥

೨೧೨. ತೆರೆದ ಹಸ್ತವು ಲೇಸು । ಹರಿಯ ಪೂಜ್ಯವು ಲೇಸು ।
ಅರ ಸೊಲಿಮೇ ಲೇಸು ಸರ್ವಕ್ಕೂ ಶಿವನಿಗೆ ।
ಶರಣನೇ ಲೇಸು ಸರ್ವಜ್ಞ ॥

೨೧೩. ಖುಲ್ಲ ಮಾನವ ಬೇಡಿ । ಕಲ್ಲುತಾ ಕೊಡುವದೇ ।
ಸೊಲ್ಲರಿವ ಶಿವನ ಬೇಡಿದಡೆ ಬಯಸಿದುದು ।
ನೆಲ್ಲವನು ಕೊಡುವ ಸರ್ವಜ್ಞ ॥

೨೧೪. ನಿಲ್ಲದಲೆ ಹರಸಿದಡೆ । ಕಲ್ಲು ಭೇದಿಸಲಕ್ಕು ।
ಬಲ್ಲಂತ ಶಿವನ ಭಕ್ತಿಯಿಂ ಭಜಿಸಿಡೆ ।
ಇಲ್ಲೆನಲಿಕರಿಯ ಸರ್ವಜ್ಞ ॥

೨೧೫. ಭಕ್ತಿಯಿಂದಲೆ ಯುಕ್ತಿ । ಭಕ್ತಿಯಿಂದಲೆ ಶಕ್ತಿ ।
ಭಕ್ತಿವಿರಕ್ತಿಯಳಿವರೀ ಜಗದಲ್ಲಿ ।
ಮುಕ್ತಿಯಿಲ್ಲೆಂದ ಸರ್ವಜ್ಞ ॥

೨೧೬. ಆಗುಹೋಗುಗಳ ನೆರೆ । ರಾಗ ಭೋಗಗಳು ।
ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ ।
ಹೋಗಿಕ್ಕು ಕಾಣೊ ಸರ್ವಜ್ಞ ॥

೨೧೭. ಮುದ್ದು ಮಂತ್ರವು, ಶುಕನು । ತಿದ್ದುವವು ಕುತ್ತಗಳ ।
ತಿದ್ದಿಯೂ ತಿದ್ದಲರಿಯವವು ಶಿವನೊಲಿಯ ।
ದಿದ್ದಿಹರೆ ಕಾಣೊ ಸರ್ವಜ್ಞ ॥

೨೧೮. ಕಂಡವರು ಕೆರಳುವರು । ಹೆಂಡತಿಯು ಕನಲುವಳು ।
ಖಂಡಿತದ ಲಕ್ಶ್ಮಿ ತೊಲಗುವಳು ಶಿವನೊಲುಮೆ ।
ಕಂಡಕೊಳ್ದಿರಕು ಸರ್ವಜ್ಞ ॥

೨೨೦. ಜ್ವರ ಬನ್ದ ಮನುಜಂಗೆ । ನೊರೆವಾಲು ವಿಷಕ್ಕು ।
ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ ।
ಹಿರಿದು ವಿಷಪಕ್ಕು ಸರ್ವಜ್ಞ ॥

೨೨೧. ಹರನಾವ ಕರೆಯದಲೆ । ಪರಿಶಿವನ ನೆನೆಯದಲೆ ।
ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ 
ಇರುವದೇ ಕಷ್ಟ ಸರ್ವಜ್ಞ ॥

೨೨೨. ಎಲ್ಲರೂ ಶಿವನೆಂದಿರಿಲ್ಲಿಯೇ ಹಾಳಕ್ಕು ।
ಎಲ್ಲರೂ ಶಿವನ ಮರೆದಿಹರೆ ಕೈಲಾಸ ।
ದಲ್ಲಿ ಹಾಳಕ್ಕು ಸರ್ವಜ್ಞ ॥

೨೨೩. ಆವ ಕಾಲವು ವನದಿ । ಜೀವಕಾಲದ ಕಳೆದು ।
ಜೀವಚಯದಲ್ಲಿ ದಯವಿಲ್ಲದಿರುವವನ ।
ಕಾಯ್ವ ಶಿವನು ಸರ್ವಜ್ಞ ॥

೨೨೪. ಅಡವಿಯಲಿ ತಪದಲ್ಲಿ । ದೃಢತನದೊಳಿದ್ದರೂ।
ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ ।
ದಡಗೆಯುಂಡಂತೆ ಸರ್ವಜ್ಞ ॥

೨೨೫. ಕಡುಭಕ್ತನಾಗಲೀ । ಜಡೆಧಾರಿಯಾಗಲೀ ।
ನದೆವ ವೃತ್ತಿಯಲಿ ನದೆಯದೊಡೆ ಆ ಭಕ್ತಿ ।
ಹೊದೆವ ಶಂಖೆಂದ ಸರ್ವಜ್ಞ ॥

೨೨೬. ಗುರಿಯ ತಾಗದ ಕೋಲ । ನೂರಾರುನೆಸೆದೇನು ? ।
ಬರಡಿಂಗ ಭಕ್ತಿ ಭಜಸಿದೊಡೆ ಅದು ತಾನು ।
ಇರಲರಿಯದಯ್ಯ ಸರ್ವಜ್ಞ ॥

೨೨೭. ಚಿತ್ತವಿಲ್ಲದ ಗುಡಿಯ । ಸುತ್ತಿದೊಡೆ ಫಲವೇನು ? ।
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ ।
ಸುತ್ತಿಬಂದಂತೆ ಸರ್ವಜ್ಞ ॥

೨೨೮. ಮನದಲ್ಲಿ ನೆನೆವಂಗೆ । ಮನೆಯೇನು ಮಠವೇನು ।
ಮನದಲ್ಲಿ ನೆನೆಯದಿರುವವನು ।
ದೇಗುಲದ ಕೊನೆಯಲ್ಲಿದ್ದೇನು ? । ಸರ್ವಜ್ಞ ॥

೨೨೯. ಮನೆಯೇನು ವನವೇನು । ನೆನಹು ಇದ್ದರೆ ಸಾಕು ।
ಮನಮುಟ್ಟಿ ಶಿವನ ನೆನೆಯದವನು ಬೆಟ್ಟದಾ ।
ಕೊನೆಯಿಲ್ಲಿದ್ದೇನು ಸರ್ವಜ್ಞ ॥

೨೩೦. ಮನದಲ್ಲಿ ನೆನವಿಠಲಿ । ತನುವೊಂದು ಮಠವಕ್ಕು ।
ಮನಹೋಗಿ ಹಲವ ನೆನೆದಿಹರೆ ಅದು ಹಾಳು ।
ಮನೆಯೆಂದು ತಿಳಿಯೋ ಸರ್ವಜ್ಞ ॥

೨೩೧. ದೇಹ ದೇವಾಲಯವು । ಜೀವವೇ ಶಿವಲಿಂಗ ।
ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿಸಂ
ದೇಹವಿಲ್ಲೆಂದು ಸರ್ವಜ್ಞ ॥

೨೩೨. ಜಂಗಮಕೆ ವಂಚಿಸನು । ಹಿಂಗಿರಲು ಲಿಂಗವನು ।
ಭಕ್ತರೊಳು ಪರಸತಿಗೆ ಒಲೆಯದಗೆ ।
ಭಂಗವೇ ಇಲ್ಲ ಸರ್ವಜ್ಞ ॥

೨೩೩. ಇಂದುವಿನೊಳುರಿಯುಂಟೆ । ಸಿಂಧುವಿನೊಳರಬುಂಟೆ ।
ಸಂದವೀರನೊಳು ಭಯವುಂಟೇ ? ಭಕ್ತಂಗೆ ।
ಸಂದೇಹವುಂಟೆ ಸರ್ವಜ್ಞ ॥

೨೩೪. ಆಹಾರವುಳ್ಳಲ್ಲಿ ಬೇಹಾರ ಫನವಕ್ಕು ।
ಆಹಾರದೊಳಗ ನರಿಧಿಪ್ಪ ಸೆಟ್ಟಿಗೇ ।
ಬೇಹಾರದಕ್ಕು ಸರ್ವಜ್ಞ ॥

೨೩೫. ಜಂಗಮನು ಭಕ್ತತಾ । ಲಿಂಗದಂತಿರಬೇಕು ।
ಭಂಸುತ ಪರರ ನಳಿವ ಜಂಗಮನೊಂದು ।
ಮಂಗನೆಂದರಿಗು ಸರ್ವಜ್ಞ ॥

೨೩೬. ಸಾಲುವೇದವನೋದಿ । ಶೀಲದಲಿ ಶುಚಿಯಾಗಿ ।
ಶೂಲಿಯಾವದವನರಿಯದೊಡೆ ಗಿಳಿಯೋದಿ ।
ಹೇಲ ತಿಂದಂತೆ ಸರ್ವಜ್ಞ ॥

೨೩೭. ಈಶ ಭಕ್ತನು ಆಗಿ । ವೇಶಿಯನು ತಾ ಹೋಗೆ ।
ಸಲಾಗಿರ್ದ ಭೋನವನು ಹಂದಿ ತಾ 
ಮೂಸಿ ಹೋದಂತೆ ಸರ್ವಜ್ಞ ॥

೨೩೮. ಹಲವು ಸಂಗದ ತಾಯಿ । ಹೊಲಸು ನಾರುವ ಬಾಯಿ ।
ಸಲೆ ಸ್ಮರಹರನ ನೆನೆಯದಾ ಬಾಯಿ ನಾಯ್ ।
ಮಲವ ಮೆದ್ದಂತೆ ಸರ್ವಜ್ಞ ॥

೨೩೯. ಭಕ್ತರೊಡಗೂಡುವದು । ಭಕ್ತರೊಡನಾಡುವದು ।
ಭಕ್ತಿಯೊಳು ಬಿಡುವ ಬೆರೆದಿರ್ದ ಭಕ್ತತಾ ।
ಮುಕ್ತನಾಗಿಹನು ಸರ್ವಜ್ಞ ॥

೨೪೦. ಪರುಷ ಕಬ್ಬುನದೆಸೆವ । ಕರಡಿಗೆಯೊಳಡರುವದೆ ।
ಹರ ಭಕ್ತಿಯಿಳ್ಳ ಮಹಿಮೆ ಸಂಸಾರದೊಳು ।
ಎರಕವಾಗಿಹನೆ ಸರ್ವಜ್ಞ ॥

೨೪೧. ತೆಪ್ಪವನ್ನು ನಂಬಿದಡೆ । ತಪ್ಪದಲೆ ತಡಗಹದು ।
ಸರ್ಪಭೂಷಣನ ನಂಬಿದಡೆ ಭವಪಾಶ ।
ತಪ್ಪಿ ಹೋಗುವುದು ಸರ್ವಜ್ಞ ॥

೨೪೨. ಶಿವಭಕ್ತಿಯುಳ್ಳಾತ । ಭವಮುಕ್ತನಾದಾತ ।
ಶಿವಭಕ್ತಿಯಿರದ ಭಕ್ತಿಂಗೆ ಎಂದೆಂದು ।
ಭವಮುಕ್ತಿಯಿಲ್ಲ ಸರ್ವಜ್ಞ ॥

೨೪೩. ಲಿಂಗದಾ ಗುಡಿ ಲೇಸು । ಗಂಗೆಯಾ ತಡಿ ಲೇಸು ।
ಲಿಂಗ ಸಂಗಿಗಳ ನುಡಿ ಲೇಸು ಭಕ್ತರಾ ।
ಸಂಗವೇ ಲೇಸು ಸರ್ವಜ್ಞ ॥

೨೪೪. ನೋಟ ಶಿವಲಿಂಗದಹಲಿ । ಜೂಟ ಜ್ಂಗಮದಲಿ ।
ನಾಟನಾ ಮನವು ಗುರುವಿನಲಿ,
ಭಕ್ತನಾ ಮಾಟವನು ನೋಡು ಸರ್ವಜ್ಞ ॥

೨೪೫. ಲಜ್ಜೆಯನು ತೊರೆದು ನೀ । ಹೆಜ್ಜೆಯನು ಸಾಧಿಪಡೆ ।
ಸಜ್ಜೆಯಲಿ ಶಿವನ ಶರಣರಾ -
ಹೆಜ್ಜೆಯಲಿ ನಡೆಯೋ ಸರ್ವಜ್ಞ ॥

೨೪೬. ದೇವರನು ನೆನೆವಂಗ । ಭಾವಿಪುದ ಬಂದಿಹುದು ।
ದೇವರನು ನೆನಯದಧಮಂಗೆ ಇಹಪರದಿ ।
ಆಪುದೂ ಇಲ್ಲ ಸರ್ವಜ್ಞ ॥

೨೪೭. ನಿತ್ಯವೂ ಶಿವನ ತಾ । ಹೊತ್ತಾರೆ ನೆನೆದಿಹರೆ ।
ಉತ್ತಮದ ಗತಿಯು ಆದಿಲ್ಲದಿಹಪರದಿ ।
ಮೃತ್ಯುಕಾಣಯ್ಯ ಸರ್ವಜ್ಞ ॥

೨೪೮. ಎರೆಯನ್ನು ಉಳುವಂಗೆ । ದೊರೆಯನ್ನು ಪಿಡಿದಂಗೆ ।
ಉರಗ ಭೂಷಣನ ನೆನೆವಂಗೆ ಭಾಗ್ಯವು ।
ಅರಿದಲ್ಲವೆಂದು ಸರ್ವಜ್ಞ ॥

೨೪೯. ಹಾಸಾಂಗಿ ಹರೆಯುವಡೆ ।
ದಾಸಿಯರು ದೊರೆಯುವಡೆ ವೀಸಕ್ಕೆ ವೀಸ ಕೊಡುವಡೆ ಅದು ತನಗೆ ।
ಈಶನ ಒಲುಮೆ ಸರ್ವಜ್ಞ ॥

೨೫೦. ಇಪ್ಪೊತ್ತು ದೇವರನು । ತಪ್ಪದಲೆ ನೆನದಿಹರೆ ।
ತುಪ್ಪ ಒರಗವು ಉಣಲುಂಟು ತನಗೊಬ್ಬ ।
ಳಪ್ಪುವಳುಂಟು ಸರ್ವಜ್ಞ ॥

೨೫೧. ಕೊಡಲೊಬ್ಬಳು ಸತಿಯು । ನೋಡಲೊಬ್ಬ ನೆಂಟ ।
ಬೇಡಿದ್ದನ್ನು ಕೊಡುವ ನೃಪತಿಯು ಭಕ್ತಿಯನು ।
ಮಾಡಿದರಿಗುಂಟು ಸರ್ವಜ್ಞ ॥

೨೫೨. ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವದು ।
ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ 
ಹಸಿದು ಹೋದಂತೆ ಸರವಜ್ಞ ॥

೨೫೩. ಸಾರವನು ಬಯಸುವದೇ । ಕ್ಷಾರವನು ಬೆರಸುವದು ।
ಮಾರಸಂಹರನ ನೆನೆಯುವಡೆ ಮೃತ್ಯು ತಾ ।
ದೂರಕ್ಕೆ ದೂರ ಸರ್ವಜ್ಞ ॥

೨೫೪. ಕೋಳಿಕೂಗದಮುನ್ನ । ಏಳುವದು ನಿತ್ಯದಲಿ ।
ಬಾಳ ಲೋಚನನ ಭಕ್ತಿಯಿಂ ನೆನೆದರೆ ।
ಸರ್ವಜ್ಞ ॥

೨೫೫. ಎಂಬಲವು ಸೌಚವು । ಸಂಜೆಯೆಂದೆನಬೇಡ ।
ಕುಂಜರವು ವನವ ನೆನೆವಂತೆ ಬಿಡದೆ ನಿ ।
ರಂಜನನ ನೆನೆಯೋ ಸರ್ವಜ್ಞ ॥

೨೫೬. ಬಾಲ್ಯಯೌವನದೊಳಗೆ । ಲೋಲುಪ್ತನಾಗಿ ನೀ ।
ನೇಳುತುಲಿ ಮದಿಸುತ್ತಿರಬೇಡ ಅನುದಿನವು ।
ಸೂಲಿಯನು ನೆನೆಯೋ ಸರ್ವಜ್ಞ ॥

೨೫೭. ಮಾಯಾಮೋಹನ ಮೆಚ್ಚಿ । ಕಾಯವನು ಕರಗಿಸಿತ ।
ಆಯಾಸಗೊಂಡ ಬಳಲದೊನ್ನಮಃ ಶಿ ।
ವಾಯವೆಂದೆನ್ನು ಸರ್ವಜ್ಞ ॥

೨೫೮. ಕಣ್ಣು ನಾಲಿಗೆ ಮನವ । ಪನ್ನಗಧರ ಕೊಟ್ಟ ।
ಚಿನ್ನಾಗಿ ಮನವ । ತೆರೆದ ನೀ ಬಿಡದೆ ಶ್ರೀ ।
ಚಿನ್ನನಂ ನೆನಯೋ ಸರ್ವಜ್ಞ ॥

೨೫೯. ಸತಿಯರಿರ್ದಡೇನು ? ಸುತರಾಗಿ ಫಲವೇನು ? ।
ಶತಕೋಟಿಧನವ ಗಳಿಸೇನು ? ಭಕ್ತಿಯಾ ।
ಸ್ಥಿತಿಯಿಲದನಕ ಸರ್ವಜ್ಞ ॥

೨೬೦. ಎಲ್ಲರೂ ಶಿವನೆಂದ । ರೆಲ್ಲಿಹುದು ಭಯವಯ್ಯಾ ।
ಎಲ್ಲರೂ ಶಿವನ ನೆನೆಯುವಡೆ ಕೈಲಾಸ ।
ಎಲ್ಲಿಯೇ ಇಹುದು ಸರ್ವಜ್ಞ ॥

೨೬೧. ಭಕ್ತಗೆರಡಕ್ಕರವು । ಮುಕ್ತಿಗೆರಡಕ್ಕರವು ।
ಭಕ್ತಿಯಿಂ ಮುಕ್ತಿ ಪಡೆಯುವರೆ ಬಿಡದೆ ಆ ।
ರಕ್ಕರವ ಪೇಳಿ ಸರ್ವಜ್ಞ ॥

೨೬೨. ಐವರಟ್ಟಾಸವನ । ಯೌವನದ ಹಿಂಡನ್ನು ।
ಹೊಯ್ಯುತ್ತ ವಶಕ್ಕೆ ತಂದಾತ ಜಗದೊಳಗೆ ।
ದೈವ ತಾನಕ್ಕು ಸರ್ವಜ್ಞ ॥

೨೬೩. ಆರರಟ್ಟುಗಳಿಗಳನು । ಮೂರು ಕಂಟಕರನ್ನು ।
ಏರು ಜವ್ವನವ ತಡೆಯುವರೆ ಶಿವ ತಾನು ।
ಬೇರೆ ಇಲ್ಲೆಂದ ಸರ್ವಜ್ಞ ॥

೨೬೪. ವಿಷಯದಾ ಬೇರನ್ನು । ಬಿಸಿಮಾಡಿ ಕುಡಿದಾತ ಪಶು 
ಪತಿಯು ಅಕ್ಕ ಶಶಿಯಕ್ಕು ಮೈಯ್ಬಣ್ಣ
ಮಿಸಿನಿಯಂತಕ್ಕು ಸರ್ವಜ್ಞ ॥

೨೬೫. ಕಚ್ಚಿ, ಕೈಬಾಯಿಗಳು । ಇಚ್ಛೆಯಲಿ ಇದ್ದಿಹರೆ ।
ಅಚ್ಯುತನಪ್ಪ ಅಜನಪ್ಪ ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ ॥

೨೬೬. ಹರಿವ ಹಕ್ಕಿ ನುಂಗಿ । ನೊರೆವಾಲ ಕುಡಿದಾತ ।
ಹರಿಹರನು ಅಕ್ಕು ಅಜನಕ್ಕು ಲೋಕಕ್ಕೆ ।
ಇರುವು ತಾನಕ್ಕು ಸರ್ವಜ್ಞ ॥

೨೬೭. ರುದ್ರಾಕ್ಷಿಯ ಮಾಲೆಯ ।
ಭದ್ರದಲಿ ಧರಿಸಿದಗೆ ಹೊದ್ದಿರ್‍ದ ಪಾಪ ಹೋಗಲವ ಸಾಕ್ಷಾತ ।
ಮಾಲೆಯ ರುದ್ರನೇ ಸರ್ವಜ್ಞ ॥

೨೬೮. ಅಣುರೇಣುವೃಂದ್ಯದಾ । ಪ್ರಣವದಾ ಬೀಜವನು ।
ಅಣುವಿನೊಳಗುಣವೆಂದರಿದಾ ಮಹಾತ್ಮನು ।
ತ್ರಿಣಯನೇ ಅಕ್ಕು ಸರ್ವಜ್ಞ ॥

೨೬೯. ಆಸನವು ದೃಢವಾಗಿ । ನಾಶಿಕಾಗ್ರದಿ ದಿಟ್ಟು ।
ಸೂಸವ ಮನವ ಫನದಲಿರಿಸಿದನು ಜಗ ।
ದೀಶ ತಾನಕ್ಕು ಸರ್ವಜ್ಞ ॥

೨೭೦. ಪವನಪರಿಯರಿದಂಗೆ । ಶಿವನ ಸಾಧಿಸಲಕ್ಕು ।
ಭವಮಾಲೆ ಹರಿದು ಸುಖಿಸುವೊಡೆ ಅವ 
ಸದಾಶಿವನು ತಾನಕ್ಕು ಸರ್ವಜ್ಞ ॥

೨೭೧. ಮೆಟ್ಟಿಪ್ಪುದಾಶೆಯನು । ಕಟ್ಟಿಪ್ಪುದಿಂದ್ರಿಯವ ।
ತೊಟ್ಟಿಪ್ಪುದುಳ್ಳ ಸಮತೆಯವನು,
ಶಿವಪದವು ಮುಟ್ಟಿಪ್ಪುದಯ್ಯ ಸರವಜ್ಞ ॥

೨೭೨. ಜ್ಞಾನದಿಂ ಮೇಲಿಲ್ಲ । ಶ್ವಾನನಿಂ ಕೀಳಿಲ್ಲ ।
ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ ।
ಜ್ಞಾನವೇ ಮೇಲು ಸರ್ವಜ್ಞ ॥

೨೭೩. ಜ್ಞಾದಿಂದಲಿ ಇಹವು । ಜ್ಞಾನದಿಂದಲಿ ಪರವು ।
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು ।
ಹಾನಿ ಕಾಣಯ್ಯ ಸರ್ವಜ್ಞ ॥

೨೭೪. ಅರಿವಿನಾ ಅರಿವು ತಾ । ಧರಯೊಳಗೆ ಮೆರೆದಿಹುದು ।
ಅರಿವಿನಾ ಅರಿವಹರಿವಹರಿಹರರು ಬೊಮ್ಮನೂ ।
ಅರಿಯರೈ ಸರ್ವಜ್ಞಾ ॥

೨೭೫. ಎತ್ತ ಹೋದರೂ ಮನವ । ಹತ್ತಿಕೊಂಡೇ ಬಹುದು ।
ಮತ್ತೊಬ್ಬ ಸೆಳೆದುಕೊಳಲರಿಯದಾ ।
ಜ್ಞಾನದಾ । ಬಿತ್ತು ಲೇಸೆಂದು ಸರ್ವಜ್ಞ ॥

೨೭೬. ತತ್ವದಾ ಜ್ಞಾನತಾ । ನುತ್ತಮವು ಎನಬೇಕು ।
ಮತ್ತೆ ಶಿವಧ್ಯಾನ ಬೆರೆದರದು ।
ಶಿವಗಿರಿಂ । ದತ್ತಲೆನಬೇಕು ಸರ್ವಜ್ಞ ॥

೨೭೭. ನಾಟ ರಾಗವು ಲೇಸು । ತೋಟ ಮಲ್ಲಿಗೆ ಲೇಸು ।
ಕೂಟವದು ಲೇಸು ಹಿರಿಯರೊಳು ಶಿವನ ಅರಿ ।
ದಾಟವೇ ಲೇಸು ಸರ್ವಜ್ಞ ॥

೨೭೮. ಒಂದರಾ ಮೊದಲೊಳಗೆ ಬಂದಿಹುದು ಜಗವೆಲ್ಲ ।
ಒಂದರಾ ಮೊದಲನರಿಯುವಡೆ ಜಗ ಕಣ್ಣು ।
ಮುಂದೆ ಬಂದಿಹುದು ಸರ್ವಜ್ಞ ॥

೨೭೯. ವನಧಿಯೊಳಡಗಿ ತೆರೆ । ವನಧಿಯೊಳಗೆಸೆವಂತೆ ।
ಚಿನುಮಯನು ಇಪ್ಪ ನಿಜದೋಳಗೆ ತ್ರೈಜಗತ ।
ಜನನ ತಾನೆಂದು ಸರ್ವಜ್ಞ ॥

೨೮೦. ಕನಕ ತಾ ಕಂಕಣದ । ಜನಕನೆಂದೆನಿಸಿಹುದು ।
ಕ್ಷಣಿಕವದು ರೂಪವೆಂದರಿಯದಾ ಮನಜ ।
ಶುನಕನಲೆದಂತೆ । ಸರ್ವಜ್ಞ ॥

೨೮೧. ಭಿತ್ತಯಾ ಚಿತ್ರದಲಿ । ತತ್ವತಾ ನೆರೆದಿಹುದೆ ।
ಚಿತ್ರತ್ವ ತನ್ನ ನಿಜದೊಳಗ ತ್ರೈಜಾಗದ ।
ತತ್ವ ತಾನೆಂದ ಸರ್ವಜ್ಞ ॥

೨೮೨. ಓಂಕಾರ ಮುಖವಲ್ಲ । ಆಕಾರವದಕಿಲ್ಲ ।
ಆಕಾಶದಂತೆ ಅಡಗಿಹುದು ಪರಬೊಮ್ಮ ।
ವೇಕಾಣದಯ್ಯ ಸರ್ವಜ್ಞ ॥

೨೮೩. ಕ್ಷೀರದಲಿ ಘ್ರತ, ವಿಮಲ । ನೀರಿನೊಳು ಶಿಖಿಯಿರ್ದು 
ಅರಿಗೂ ತೋರದಿರದಂತೆ ಎನ್ನೊಳಗೆ ।
ಸೇರಿಹನು ಶಿವನು ಸರ್ವಜ್ಞ ॥

೨೮೪. ಕಲ್ಲಿನಲಿ ಮಣ್ಣಿನಲಿ । ಮುಳ್ಳಿನಾ ಮೊನಯಲಿ
ಎಲ್ಲ ನೆನೆದಲ್ಲಿ ಶಿವನಿರ್ಪ ಅವನೀ ।
ನಿದ್ದಲ್ಲಿಯೇ ಇರ್ಪ ಸರ್ವಜ್ಞ ॥

೨೮೫. ಕಲ್ಲು-ಕಾಷ್ಠದೊಳಿರುವ । ಮುಳ್ಳು ಮೊನೆಯಲ್ಲಿರುವ ।
ಸುಳ್ಳು-ಈ ಮಾತು ಎನಬೇಡ ಪರಮಾತ್ಮ ।
ನೆಲ್ಲೆಲ್ಲಿಯೂ ಇರುವ ಸರ್ವಜ್ಞ ॥

೨೮೬. ತಿಟ್ಟಿಯೊಳು ತೆವರದೊಳು । ಹುಟ್ಟಿಹನೆ ಪರಶಿವನು ।
ಹುಟ್ಟು ಸಾವುಗಳು ಅವಗಿಲ್ಲ ಜಗವನ್ನು ।
ಬಿಟ್ಟಿಹನು ನೋಡು ಸರ್ವಜ್ಞ ॥

೨೮೭. ಸರ್ವಾಂತರ್ಯಾಮಿ । ಓರ್ವನೆಂಬುವ ತತ್ವ ।
ನಿರ್ದಿಷ್ಟವಾಗಿ ಇರುತಿರಲು ಮೋಕ್ಷವದು ।
ಸರ್ವರಿಗೆ ಸುಲಭ ಸರ್ವಜ್ಞ ॥

೨೮೮. ಸಣ್ಣನೆಯ ಮಳಲೊಳಗೆ । ನುಣ್ಣನೆಯ ಶಿಲೆಯೊಳಗೆ 
ಬಣ್ಣಿಸುತ ಬರೆದ ಪಟದೊಳಗೆ ಇರುವಾತ ।
ತನ್ನೂಳಗೆ ಇರುನೇ ? ಸರ್ವಜ್ಞ ॥

೨೮೯. ಆನೆ ಕನ್ನಡಿಯಲ್ಲಿ । ತಾನಡಗಿ ಇಪ್ಪಂತೆ ।
ಜ್ಞಾನವುಳ್ಳವರ ಹೃದಯದಲಿ ಪರಶಿವನು ।
ತಾನಡಗಿ ಇಹನು ಸರ್ವಜ್ಞ ॥

೨೯೦. ನಾನು ನೀನು ಭೇದಗ । ಳೇನು ಬೊಮ್ಮಗೆ ಇಲ್ಲ ।
ತಾನೆ ತಾನಾಗಿ ಇಪ್ಪುದೇ ಬೊಮ್ಮದಾ ।
ಸ್ಥಾನವೆಂದರಿಗು ಸರ್ವಜ್ಞ ॥

೨೯೧. ನಾನು ನೀನು ಭೇದಗ । ಳೇನು ಬೊಮ್ಮಗೆ ಇಲ್ಲ ।
ತಾನೆ ತಾನಾಗಿಪ್ಪುದೆ ಬೊಮ್ಮದಾ ।
ಸ್ಥಾನವೆಂದರಿಗು ಸರ್ವಜ್ಞ ॥

೨೯೨. ಮೂರು ಖಂಡುಗ ಹೊಟ್ಟ । ತೂರಿದರೆ ಫಲವೇನು ।
ಮೂರರಾ ಮಂತ್ರದಿಂದಲಿ ಪರಬೊಮ್ಮ ।
ವಿರಿಹುದು ನೋಡು ಸರ್ವಜ್ಞ ॥

೨೯೩. ಕಾಣಿಸಿರುವಂತವನ । ಕಾಣದೇಕಿರುವಿರೋ ।
ಕಾಣಲು ಬಿಡಲು ಕರ್ಮಗಳು ನಿನ್ನಿರವ ।
ಆಣೆ ಇಟ್ಟಿಹವು ಸರ್ವಜ್ಞ ॥

೨೯೪. ಜೊಳ್ಳು ಮನುಜರು ತಾವು । ಸುಳ್ಳು ಸಂಸಾರದೊಳು 
ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ ।
ಹೊರಳಾಡುತಿಹರು ಸರ್ವಜ್ಞ ॥

೨೯೫. ಇಲ್ಲದಾ ಮಾಯೆಯದು । ಎಲ್ಲಿಂದಲೆನಹದಲೆ ।
ಬಲ್ಲಿತದು ಮಾಯೆಯೆನಬೇಡ ।
ತಿಳಿಯಲ್ಕೆ ಎಲ್ಲಿಹುದು ? ಮಾಯೆ ಸರ್ವಜ್ಞ ॥

೨೯೬. ಕಾಯವಿಂದ್ರಯದಿಂದ । ಜೀವವಾಯುವಿನಿಂದ ।
ಮಾಯೆಯದು ಬೊಮ್ಮನಿಂದೆಂಬುವಾ ನಾಯ ।
ಬಾಯಿ ನೋಡೆಂದ ಸರ್ವಜ್ಞ ॥

೨೯೭. ಇಲ್ಲದನು ಇಲ್ಲೆನಲಿ । ಕಿಲ್ಲಿಯೇ ಕಲಿಯದಲೆ ।
ಇಲ್ಲದಾ ಮಾಯಿ-ಊಂಟೆಂಬ ಮೂಢಾತ್ಮ ।
ಗೆಲ್ಲಿಯದು ಮುಕ್ತಿ ಸರ್ವಜ್ಞ ॥

೨೯೮. ಪಂಚ ಬೂತಂಗಳೊಳ । ಸಂಚನರಿಯದಲೆ ।
ಹಂಚನೆ ಹಿಡಿದು ತಿರಿದುಂಬ ಶಿವಯೋಗಿ ।
ಹಂಚುಹರಿಯಹನು ಸರ್ವಜ್ಞ ॥

೨೯೯. ಪಂಚವಿಂಶತಿ ತತ್ವ । ಸಂಚಯದ ದೇಹವನು ।
ಹಂಚಿಂದು ಕಾಣಲರಿಯದಿರೆ ಭವ ಮುಂದೆ ।
ಗೊಂಚಲಾಗಿಹದು ಸರ್ವಜ್ಞ ॥

೩೦೦. ಬೆಂದ ಆವಿಗೆ ಭಾಂಡ । ಒಂದೊಂದು ಭೋಗವನು ।
ಅಂದದಿಂ ಉಂಡ ಒಡೆದು ಹಂಚಾದಂತೆ ।
ಬಿಂದುವನು ದೇಹ ಸರ್ವಜ್ಞ ॥
೪೦೧-೪೫೦ 
೪೦೧. ಎಣ್ಣೆಯ ಋಣವು । ಅನ್ನ- ವಸ್ತ್ರದ ಋಣವು ।
ಹೊನ್ನು ಹೆಣ್ಣಿನಾ ಋಣವು ತೀರಿದ ಕ್ಷಣದಿ ।
ಮಣ್ಣು ಪಾಲೆಂದು ಸರ್ವಜ್ನ್ಯ ॥

೪೦೨. ಸತ್ತು ಹೋದರ್‍ಎ ನಿನಗೆ । ಎತ್ತಣವು ಮೋಕ್ಷವೈ ?
ಸತ್ತು ಹೋಗದರೆ ಜೀವಿಸಲು ಮೋಕ್ಷದಾ ।
ಗೊತ್ತು ತಿಳಿಯೆಂದ ಸರ್ವಜ್ನ್ಯ ॥

೪೦೩. ಕತ್ತಲೆಯ ಠಾವಿಂಗೆ । ಉತ್ತಮವು ಜ್ಯೋತಿ ತಾ।
ಮತ್ತೆ ಪ್ರಜ್ವಲಿಸುವ ಠಾವು ಬೆಳಗಲು ।
ತ್ಯುತ್ತಮವಕ್ಕುದು ಸರ್ವಜ್ನ್ಯ ॥

೪೦೪. ಯೋನಿಜರು ಯೋಗಿಯನು । ಹೀನವೆನ್ನುವದೇನು ? ।
ಅನಂದ ತಾಣದೊಳಗಿರಲು ಯೋಗಿಯಾ  ।
ಮಾನ ಘನವಹುದು ಸರ್ವಜ್ನ್ಯ ॥

೪೦೫. ನಿಜ ವಿಜಯ ಬಿಂದುವಿನ । ಧ್ವಜಪತಾಕೆಯ ಬಿರುದು ।
ಅಜ ಹರಿಯು ನುತಿಸಲರಿಯರಾ ಮಂತ್ರವನು ।
ನಿಜಯೋಗಿ ಬಲ್ಲ ಸರ್ವಜ್ನ್ಯ ॥

೪೦೬. ಯೋಗವನು ಮನಮುಟ್ಟಿ । ಭೋಗವನು ತೊರೆದಿಹರೆ ।
ಮಾಗಿಯ ಮಳೆಯು ಸುರಿದಂತೆ ಆ ಯೋಗ ।
ಸಾಗುತ್ತಲಿಹುದು ಸರ್ವಜ್ನ್ಯ ॥

೪೦೭. ದಾಸಿಯಾ ಕೊಡದಂತೆ । ಸೋರದಿಪ್ಪುದೆ ಯೋಗ ।
ದಾಸಿ ಸಾಸಿರದ ಒಡನಾಡುತಾ ಕೊಡದೊ ।
ಳಾಶೆ ಇಪ್ಪಂತೆ ಸರ್ವಜ್ನ್ಯ ॥

೪೦೮. ಅಷ್ಟದಳಕಮಲದಲಿ । ಕಟ್ಟಿತಿರುಗುವ ಹಂಸ ।
ಮೆಟ್ಟುವಾ ದಳವ ನಡುವಿರಲಿ ಇರುವದನು ।
ಮುಟ್ಟುವನೆ ಯೋಗಿ ಸರ್ವಜ್ನ್ಯ ॥

೪೦೯. ಅಷ್ಟದಲ ಕಮಲವನು । ಮೆಟ್ಟಿಪ್ಪ ಹಂಸ ತಾ ।
ಮುಟ್ಟಿಪ್ಪ ಗತಿಯನರಿಯದಾ ಯೋಗಿ ತಾ ।
ಕೆಟ್ಟನೆಂದರಿಗು ಸರ್ವಜ್ನ್ಯ ॥

೪೧೦. ಗುರುವಿನಾ ಸೇವೆಯನು । ಹಿರಿದಾಗಿ ಮಾಡದಲೆ ।
	ಹರಿದಾಡಿ ಮುಕ್ತಿ ಪಡೆಯುವಡೆ ಸ್ವರ್ಗ ತಾ ।
ಹಿರಿಯ ತವರಹುದೆ ಸರ್ವಜ್ನ್ಯ ॥

೪೧೧. ಹುಲಿಯ ಬಾಯಲ್ಲಿ ಸಿಕ್ಕ । ಹುಲ್ಲೆಯಂದದಿ ಮೊರವೆ ।
ಬಲಿಯ ಬಿಡಿಸೆನ್ನ ಗುರುರಾಯ ಮರೆಹೊಕ್ಕೆ ।
ಕೊಲುತಿಹಳು ಮಾಯೆ ಸರ್ವಜ್ನ್ಯ ॥

೪೧೨. ಮನವೆಂಬ ಮರ್ಕಟವು ।
ತನುವೆಂಬ ಮರನೇರಿ ತಿನುತಿಹುದು ವಿಷಯ ಫಲಗಳನು ।
ಕರುಣೆ ನೀ ತನುಮನ ಕಾಯೋ ಸರ್ವಜ್ನ್ಯ ॥

೪೧೩. ಹೃದಯದಲ್ಲಿ ಕತ್ತರಿಯು । ತುದಿಯ ನಾಲಿಗೆ ಬೆಲ್ಲ !
ಕುದಿದು ಹೋಗುಹೆನು ಎನ್ನೊಡೆಯ ಇದ ನೋಡಿ ।
ಒದೆದು ಬಿಡ ಬೇಡ ಸರ್ವಜ್ನ್ಯ ॥

೪೧೪. ಸೊಣಗನಂದಣವೇರಿ । ಕುಣಿದು ಪೋಪುದು ಮಲಕೆ ।
ಟೊಣೆಯದೆನ್ನೊಡೆಯ ಕಾಯನ್ನ ಪಾದಕ್ಕೆ ।
ಮಣಿದು ಬೇಡುವೆನು ಸರ್ವಜ್ನ್ಯ ॥

೪೧೫. ಪಾಪವೆನ್ನದು ಕಾಯ । ಪುಣ್ಯ ನಿನ್ನದು ರಾಯ ।
ಕೂಪದೊಳು ಬಿದ್ದು ಕೊರಹುತಿಹೆ ಗುರುರಾಯ ।
ರೂಪುಗೊಳಿಸಯ್ಯ ಸರ್ವಜ್ನ್ಯ  ॥

೪೧೬. ಕೋಪಕ್ಕ್ ಯಮರಜಬ್ । ಪಾಪಕ್ಕ್ ಜವರಾಜ ।
ಕೋಪ ಪಾಪಗಳ ಆಳಿದಂಗೆ ತಾ ।
ಕೊಪನಾಗಿಹನು ಸರ್ವಜ್ನ್ಯ  ॥
೮೫೦-೧೪೨೧
೮೫೧. ಆವಾವ ಜೀವವನು । ಹೇವವಿಲ್ಲದೆ ಕೊಂದು ।
	ಸಾವಾಗ ಶಿವನ ನೆನೆಯುವಡೆ । ಅವ ಬಂದು ।
	ಕಾವನೇ ಹೇಳು ಸರ್ವಜ್ಞ ॥

ಕುಲಖಂಡನ (ಹೊಲೆಯನು ಯಾರು)

೮೫೨. ಸತ್ತುದನು ತಿಂಬಾತ । ಎತ್ತಣದ ಹೊಲೆಯನವ ।
	ಒತ್ತಿ ಜೀವದೆ ಕೊರಳಿರಿದು ತಿಂಬಾತ ।
	ಉತ್ತಮದ ಹೊಲೆಯ ಸರ್ವಜ್ಞ ॥

೮೫೩. ಹೊಲಿಯ ಮಾದಿಗರುಂಡು । ಸುಲಿದಿಟ್ಟ ತೊಗಲು ಸಲೆ ।
	ಕುಲಜರೆಂಬವರಿಗುಣಲಾಯ್ತು । ಹೊಲೆಯರಾ ।
	ಕುಲವಾವುದಯ್ಯ ಸರ್ವಜ್ಞ ॥

೮೫೪. ಪಕ್ಕಲೆಯ ಸಗ್ಗಲೆಯೊ । ಳಿಕ್ಕಿರ್ದ ವಾರಿಯನು ।
	ಚೊಕ್ಕಟವು ಎಂದು ಕುಡಿಯುತಿರೆ ಹೊಲೆಯರು ।
	ಚಿಕ್ಕವರು ಹೇಗೆ ಸರ್ವಜ್ಞ ॥

೮೫೫. ಕುಲವಿಲ್ಲ ಯೋಗಿಗಂ । ಛಲವಿಲ್ಲ ಜ್ಞಾನಿಗಂ ।
	ತೊಲೆ ಕಂಭವಿಲ್ಲ ಗಗನಕ್ಕೆ ಸ್ವರ್ಗದಲಿ ।
	ಹೊಲಗೇರಿಯಿಲ್ಲ ಸರ್ವಜ್ಞ ॥

೮೫೬. ಎಲುವಿಲ್ಲ ನಾಲಿಗೆಗೆ । ಬಲವಿಲ್ಲ ಬಡವಂಗೆ ।
	ತೊಲೆ ಕಂಭವಿಲ್ಲ ಗಗನಕ್ಕೆ, ದೇವರಲಿ ।
	ಕುಲಭೇದವಿಲ್ಲ ಸರ್ವಜ್ಞ ॥

೮೫೭. ಸಾದರಿಗೆ ಮಾದರಿಗೆ । ಭೇದವೇನಿಲ್ಲಯ್ಯ ।
	ಮಾದಿಗನು ತಿಂಬ ಸತ್ತುದನು ಸಾದ ತನ ।
	ಗಾದವರೆ ತಿಂಬ ಸರ್ವಜ್ಞ ।

೮೫೮. ಸತ್ತಕತ್ತೆಯ ಹೊತ್ತ । ಕೆತ್ತಣದ ಹೊಲೆಯನವ ।
	ಉತ್ತಮನು ಎಂದು ಹೆರರೊಡನೆ ಹೊತ್ತವನೆ ।
	ನಿತ್ಯವೂ ಹೊಲೆಯ ಸರ್ವಜ್ಞ ॥

ಹಾರುವಗೆ ಹೆಗ್ಗಳಿಕೆ ಯಾಕೆ ?

೮೫೯. ಹೊಲಿಗೇರಿಯಲಿ ಹುಟ್ಟಿ । ವಿಲುದನಾ ಮನೆಯಿರ್ದ ।
	ಸತಿಧರ್ಮ ದಾನಿಯೆನಿಸದಲೆ ಹಾರುವನು ।
	ಕುಲಕೆ ಹೋರುವನು ಸರ್ವಜ್ಞ ॥

೮೬೦. ಮುಟ್ಟಾದ ಹೊಲೆಯೊಳಗೆ । ಹುಟ್ಟುವುದು ಜಗವೆಲ್ಲ ।
	ಮುಟ್ಟಬೇಡೆಂದ ತೊಲಗುವಾ ಹಾರುವನು ।
	ಹುಟ್ಟಿರುವನೆಲ್ಲಿ ಸರ್ವಜ್ಞ ॥

೮೬೧. ಮುಟ್ಟು ಗಂಡವಳನ್ನು । ಮುಟ್ಟಲೊಲ್ಲರು ನೋಡು ।
	ಮುಟ್ಟು ತಾ ತಡೆದು ಹುಟ್ಟಿರ್ದ ದೇಹವನು ।
	ಮುಟ್ಟುತಿಹರೇಕೆ ಸರ್ವಜ್ಞ ॥

೮೬೨. ಮಲವು ದೇಹದಿ ಸೋರಿ । ಹೊಲಸು ಮಾಂಸದಿ ನಾರಿ ।
	ಹೊಲೆ ವಿಲದ ಹೇಯ ದೇಹದಲಿ ಹಾರುವರು ।
	ಕುಲವನೆಣಿಸುವರೆ ಸರ್ವಜ್ಞ ॥

೮೬೩. ಉತ್ತಮರು ಪಾಲ್ಗೊಡಲೊ । ಳೆತ್ತಿದರೆ ಜನ್ಮವನು ।
	ಉತ್ತಮರು ಅಧಮರೆನಬೇಡಿ ಹೊಲೆಯಿಲ್ಲ ।
	ದುತ್ತಮರು ಎಲ್ಲಿ ಸರ್ವಜ್ಞ ॥

೮೬೪. ಎಂಜಲೆಂಜಲು ಎಂದು । ಅಂಜುವರು ಹಾರುವರು ।
	ಎಂಜಲಿಂದಾದ ತನುವಿರಲು ಅದನರಿದು ।
	ಅಂಜಿತಿಹರೇಕೆ ಸರ್ವಜ್ಞ ॥

೮೬೫. ಎಲುವು - ತೊಗಲ್ - ನರ - ಮಾಂಸ । ಬಲಿದ ಚರ್ಮದ ಹೊದಿಕೆ ।
	ಹೊಲೆ - ರಕ್ತ ಶುಕ್ಲದಿಂದಾದ ದೇಹಕ್ಕೆ ।
	ಕುಲವಾವುದಯ್ಯ ಸರ್ವಜ್ಞ ॥

೮೬೬. ಎಲವು-ಕರಳ್-ನರ-ತೊಗಲು । ಬಿಲರಂದ್ರ-ಮಾಂಸದೊಳು ।
	ಹಲತೆರೆದ ಮಲವು ಸುರಿದಿಲು । ಕುಲಕ್ಕಿನ್ನು ।
	ಬಲವೆಲ್ಲಿ ಹೇಳು ಸರ್ವಜ್ಞ ॥

೮೬೭. ಹಲ್ಲು ಎಲುವೆಂಬುದನು । ಎಲ್ಲವರು ಬಲ್ಲರೆಲೆ ।
	ನಿಲ್ಲದಲೆ ಎಲುವಿನಿಂದೆಲ್ಲವಗಿದ ಬಳಿ ।
	ಕೆಲ್ಲಿಯದು ಶೀಲ ಸರ್ವಜ್ಞ ॥

೮೬೮. ಹಲ್ಲುದರೆ ರಕುತವದು । ಎಲ್ಲವೂ ಬಾಯೊಳಗೆ ।
	ಖುಲ್ಲ ರಕ್ಕಸರು ಮಾನವರು, ನೆರೆ ಶೀಲ ।
	ವೆಲ್ಲಿಹುದು ಹೇಳು ಸರ್ವಜ್ಞ ॥

೮೬೯. ಹಸಿವು-ತೃಷೆ-ನಿದ್ರೆಗಳು । ವಿಷಯ ಮೈಥುನ ಬಯಕೆ ।
	ಪಶು-ಪಕ್ಷಿ ನರಗೆ ಸಮನಿರಲು , ಕುಲವೆಂಬ ।
	ಘಸಣಿಯೆತ್ತಣದು ಸರ್ವಜ್ಞ ॥

೮೭೦. ಕೂಳಿಂದ ಕುಲ ಬೆಳೆದು । ಬಾಳಿಂದ ಬಲ ಬೆಳೆದು ।
	ಕೂಳು - ನೀರುಗಳು ಕಳೆದರ್‍ಆ ಕುಲಗಳನ್ನು ।
	ಕೇಳಬೇಡೆಂದ ಸರ್ವಜ್ಞ ॥
ಜಾತಿ ಖಂಡನೆ
೮೭೧. ನಡೆವುದೊಂದೇ ಭೂಮಿ । ಕುಡಿವುದೊಂದೇ ನೀರು ।
	ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ ।
	ನಡುವೆ ಎತ್ತಣದು ಸರ್ವಜ್ಞ ॥

೮೭೨. ಕುಡಿವ ನೀರನು ತಂದು । ಅಡಿಗೆ ಮಾಡಿದ ಮೇಲೆ ।
	ಒಡನುಣ್ಣದಾಗದಿಂತೆಂಬ ಮನುಜರ್‍ಅ ।
	ಒಡನಾಟವೇಕೆ ಸರ್ವಜ್ಞ ॥

೮೭೩. ಸುಡುವಗ್ನಿಯನು ತಂದು । ಅಡಿಗೆ ಮಾಡಿದ ಮೇಲೆ ।
	ಒಡನುಣ್ಣದಾಗದಿಂತೆಂಬ ಮನುಜರ್‍ಆ ।
	ಒಡನಾಟವೇಕೆ ಸರ್ವಜ್ಞ ॥

೮೭೪. ಅವಯವಗಳೆಲ್ಲರಿಗೆ । ಸಮನಾಗಿ ಇರುತಿರಲು ।
	ಭವಿ-ಭಕ್ತ-ಶ್ವಪಚ-ಶೂದ್ರರಿವರಿಂತೆಂಬ ।
	ಕುಲವೆತ್ತಣದು ಸರ್ವಜ್ಞ ॥

೮೭೫. ಧಾತು ಏಳನು ಕಲೆತು । ಭೂತಪಂಚಕವಾಗಿ ।
	ಓತು ದೇಹವನು ಧರಿಸಿರ್ದ ಮನುಜರ್ಗೆ ।
	ಜಾತಿಯತ್ತಣದು ಸರ್ವಜ್ಞ ॥
ಜಾತನು ಯಾರು ?
೮೭೬. ಜಾತಿಹೀನರ ಮನೆಯ । ಜ್ಯೋತಿ ತಾ ಹೀನವೇ ।
	ಜಾತಿ-ವಿಜಾತಿಯೆನ್ನಬೇಡ ದೇವನೊಲಿ ।
	ದಾತನೇ ಜಾತ ಸರ್ವಜ್ಞ ॥

೮೭೭. ಭೂತೇಶಗೆರಗುವನು । ಜಾತಿ ಮಾದಿಗನಲ್ಲ ।
	ಜಾತಿಯಲಿ ಹುಟ್ಟಿ ಶಿವನಿಂಗೆ ಶರಣೆನ್ನ ।
	ದಾತ ಮಾದಿಗರು ಸರ್ವಜ್ಞ ॥

೮೭೮. ಯಾತರದು ಹೂವೇನು । ನಾತರದು ಸಾಲದೇ ।
	ಜಾತಿ ವಿಜಾತಿಯೆನ್ನಬೇಡ ।
	ದೇವನೊಲಿ ದಾತನೇ ಸರ್ವಜ್ಞ ॥

೮೭೯. ಹಾರುವರು ಸ್ವರ್ಗದ । ದಾರಿಯನು ಬಲ್ಲರೇ ।
	ನಾರಿ ಪತಿವ್ರತದಿ ನಡೆಯೆ ಸ್ವರ್ಗದಾ ।
	ದಾರಿ ತೋರುವಳು ಸರ್ವಜ್ಞ ॥
ಬ್ರಾಹ್ಮಣಗುಣ ದರ್ಶನ (ಗುಣಪ್ರಶಂಸೆ) ಉತ್ತಮರು
೮೮೦. ಉತ್ತಮರು ಎಂಬುವರು । ಸತ್ಯದಲಿ ನಡೆಯುವರು ।
	ಉತ್ತಮರು ಅಧಮರೆನಬೇಡ ಅವರೊಂದು ।
	ಮುತ್ತಿನಂತಿಹರು ಸರ್ವಜ್ಞ ॥

೮೮೧. ಮಾತನರಿದಾ ಸುತನು । ರೀತಿಯರಿದಾ ಸತಿಯು ।
	ನೀತಿಯನು ಅರಿತ ವಿಪ್ರತಾ ಜಗದೊಳಗೆ ।
	ಜ್ಯೋತಿಯಿದ್ದಂತೆ ಸರ್ವಜ್ಞ ॥

೮೮೨. ಉತ್ತಮದ ವರ್ಣಿಗಳೆ । ಉತ್ತಮರು ಎನಬೇಡ ।
	ಮತ್ತೆ ತನ್ನಂತೆ ಬಗೆವರನೆಲ್ಲರನು ।
	ಉತ್ತಮರು ಎನ್ನು ಸರ್ವಜ್ಞ ॥

೮೮೩. ದಾರದಿಂದಲೇ ಮುತ್ತು । ಹಾರವೆಂದೆನಿಸುಹುದು ।
	ಆರೈದು ನಡೆವ ದ್ವಿಜರುಗಳ ಸಂಸರ್ಗ ।
	ವಾರಿಂದಲಧಿಕ ಸರ್ವಜ್ಞ ॥

ವಿದ್ಯಾಸಂಪನ್ನರು 
೮೮೪. ವಿಪ್ರರಿಂದಲೇ ವಿದ್ಯೆ ।
	ವಿಪ್ರರಿಂದಲೇ ಬುದ್ಧಿ ।
	ವಿಪ್ರ ನಿಜವಿಪ್ರರಿಲ್ಲದಿರಲೇ ಜಗವು ಕ್ಷಿಪ್ರದಲಿ ಕೆಡಗು ಸರ್ವಜ್ಞ ॥

೮೮೫. ಅರಿತಂಗೆ ಅರವತ್ತು । ಮರೆತಂಗೆ ಮೂವತ್ತು ।
	ಬರೆವಂಗೆ ರಾಜ್ಯ ಸರಿಪಾಲು । ಹಾರುವನು ।
	ಬರೆಯದೇ ಕೆಟ್ಟ ಸರ್ವಜ್ಞ ॥
ದ್ವಿಜ ಲಕ್ಷಣ
೮೮೬. ದ್ವಿಜನಿಮ್ಮೆ ಜನಿಸಿ ತಾ । ನಜನಂತೆ ಜಿಗಿಯುವನು ।
	ದ್ವಿಜನೆಲ್ಲರಂತೆ ಮದಡನಿರೆ, ಋಜುವಿಂ ।
	ದ್ವಿಜತಾನಹನು ಸರ್ವಜ್ಞ ॥
ಗುಣನಿಂದಾ (ಕಪಟಗಳು)
೮೮೭. ಹಾರುವರು ಎಂಬುವರು । ಹಾರುತ್ತಲಿರುತಿಹರು ।
	ಹಾರುವಗೆ ಸಲುಹುವರ ದೊರೆಯೊಡನೆ ನಿಜಗುಣ ।
	ತೋರದಡುಗುವದು ಸರ್ವಜ್ಞ ॥

೮೮೮. ಒಳಗೊಂದು ಕೋರುವನು । ಹೊರಗೊಂದು ಕೋರುವನು ।
	ಕೆಳಗೆಂದು ಬೀಳ ಹಾರುವನ, ಸರ್ಪನಾ ।
	ಸುಳಿವು ಬೇಡೆಂದ ಸರ್ವಜ್ಞ ॥

೮೮೯. ಬೇಡಂಗೆ ಕೊಡೆ ಹೊಲ್ಲ । ಆಡಿಂಗಮಳೆಹೊಲ್ಲ ।
	ಬೇಡಿ ಉಂಬುವಂಗೆ ಬರ ಹೊಲ್ಲ ದ್ವಿಜನಿಗೆ ।
	ಕಾಡುನುಡಿ ಹೊಲ್ಲ ಸರ್ವಜ್ಞ ॥

೮೯೦. ಕೆಟ್ಟರ್ ದ್ವಿಜರಿಂದ । ಕೆಟ್ಟವರು ಇನ್ನಿಲ್ಲ ।
	ಕೆಟ್ಟುವದು ಬಿಟ್ಟು ನಡೆದರೇ ಅವರಿಂದ ।
	ನೆಟ್ಟನವರಿಲ್ಲ ಸರ್ವಜ್ಞ ॥

ಸ್ವಾರ್ಥಿಗಳು
೮೯೧. ಕೊಟ್ಟಿಹರೆ ಹಾರುವರು । ಕುಟ್ಟುವರು ಅವರಂತೆ ।
	ಬಿಟ್ಟಿರದ ನೋಡಿ ನುಡಿಸರಾ ಹಾರುವರು ।
	ನೆಟ್ಟನೆಯವರೇ ಸರ್ವಜ್ಞ ॥

೮೯೨. ಕೊಟ್ಟವರ ತಲೆಬೆನ್ನ । ತಟ್ಟುವರು ಹಾರುವರು ।
	ಕೊಟ್ಟೊಡನೆ ಕುಟ್ಟಿ ಕೆಡಹುವರು ಹಾರುವರ ।
	ಬಟ್ಟೆ ಬೇಡೆಂದ ಸರ್ವಜ್ಞ ॥

೮೯೩. ಅರ್ಥಸಿಕ್ಕರೆ ಬಿಡರು ।
	ವ್ಯರ್ಥ ಶ್ರಮಪಡದ ನರ್ಥಕ್ಕೆ ಪರರ ನೂಕಿಪರು, ವಿಪ್ರರಿಂ ।
	ಸ್ವಾರ್ಥಿಗಳಿಲ್ಲ ಸರ್ವಜ್ಞ ॥

೮೯೪. ಜ್ಯೋತಿಯಿಲ್ಲದ ಮನೆಯು ।
	ರೀತಿಯಿಲ್ಲದ ಸತಿಯು ನಿತಿಯಿಲ್ಲದಾ ವಿಪ್ರನುಂ ಭಿಕ್ಷದಾ ।
	ಪಾತ್ರೆಯೊಡೆದಂತೆ ಸರ್ವಜ್ಞ ॥

೮೯೫. ಗೊರವರ ಸೂಳೆಯೂ । ಹರದನೂ ಸಾನಿಯೂ ।
	ತಿರಿವನು ವೈದ್ಯ-ದ್ವಿಜ-ಗಣಿಕೆ ಇನ್ನೊಬ್ಬ ।
	ರಿರವ ಸೈರಿಸರು ಸರ್ವಜ್ಞ ॥
ದುಃಶೀಲರು 
೮೯೬. ದ್ವಿಜನಿಂಗೆ ಸಾಮರ್ಥ್ಯ । ಭುಜಗಂಗೆ ಕಡುನಿದ್ರೆ ।
	ಗಜಪತಿಗೆ ಮದವು ಅತಿಗೊಡೆ ಲೋಕದಾ ।
	ಪ್ರಜೆಯು ಬಾಳುವರೇ ಸರ್ವಜ್ಞ ॥

೮೯೭. ಹಾರುವರ ನಂಬಿದವ । ರಾರಾರು ಉಳಿದಿಹರು ।
	ಹಾರುವರನು ನಂಬಿ ಕೆಟ್ಟರಾ ಭೂಪರಿ ।
	ನ್ನಾರು ನಂಬುವರು ಸರ್ವಜ್ಞ ॥

೮೯೮. ಹಾರುವರು ಎಂಬುವರು । ಏರಿಹರು ಗಗನಕ್ಕೆ ।
	ಹಾರುವರ ಮೀರಿದವರಿಲ್ಲ ಅವರೊಡನೆ ।
	ವೈರಬೇಡೆಂದ ಸರ್ವಜ್ಞ ॥

೮೯೯. ಬಂಡುಣಿಗಳಂತಿಹರು । ಭಂಡನೆರೆ ಯಾಡುವರು ಕಂಡುದನು 
	ಅರಿದು ನುಡಿಯರಾ ಹಾರುವರು ।
	ಭಂಡರೆಂದರಿಗು ಸರ್ವಜ್ಞ ॥

೯೦೦. ಕೆಟ್ಟಹಾಲಿಂದ ಹುಳಿ । ಯಿಟ್ಟಿರ್ದ ತಿಳಿಲೇಸು ।
	ಕೆಟ್ಟ ಹಾರುವವನ ಬದುಕಿಂದ ಹೊಲೆಯನು ।
	ನೆಟ್ಟನೇ ಲೇಸು ಸರ್ವಜ್ಞ ॥

೯೦೧. ಅಕ್ಕರವ ಕಲಿತಾತ । ಒಕ್ಕಲನು ತಿನಗಲಿತ ।
	ಲೆಕ್ಕವನು ಕಲಿತ ಕರಣಿಕನು ನರಕದಲಿ ।
	ಹೊಕ್ಕಾಡ ಕಲಿತ ಸರ್ವಜ್ಞ ॥

೯೦೨. ಹೆಂಡಕ್ಕೆ ಹೊಲೆಯ ತಾ ।
	ಕಂಡಕ್ಕೆ ಕಟುಗ ತಾ ।
	ದಂಡಕ್ಕೆ ಕೃಷಿಕ ಹಾರುವನು ತಾ ಪಿಂಡಕ್ಕೆ ಇಡುವ ಸರ್ವಜ್ಞ ॥

೯೦೩. ಹಾರುವನು ಉಪಕಾರಿ । ಹಾರುವನು ಅಪಕಾರಿ ।
	ಹಾರುವನು ತೋರ್ಪ ಬಹುದಾರಿ, ಮುನಿದರ್‍ಆ ।
	ಹಾರುವನೆ ಮಾರಿ ಸರ್ವಜ್ಞ ॥

೯೦೪. ಹಾರುವರು ಎಂಬವರು । ಹಾರುವರು ನರಕಕ್ಕೆ ।
	ಸಾರದ ನಿಜವನರಿಯದಿರೆ ಸ್ವರ್ಗದಾ ।
	ದಾರಿಯ ಮಾರ್ಗಹುದೆ ಸರ್ವಜ್ಞ ॥

೯೦೫. ಬ್ರಹ್ಮಸ್ವ ದೇವಸ್ವ । ಮಾನಿಸರು ಹೊಕ್ಕಿಹರೆ ।
	ಹೆಮ್ಮಗನು ಸತ್ತು ತಾ ಸತ್ತು ಮನೆಯೆಲ್ಲ ।
	ನಿರ್ಮೂಲವಕ್ಕು ಸರ್ವಜ್ಞ ॥
ಕಮ್ಮೆಯು ಹೊಲೆಯರಿಗೂ ಕಡೆ
೯೦೬. ಮಾದಿಗನು ಕೆಮ್ಮಯನ । ಭೇದವೆರಡೊಂದಯ್ಯ ।
	ಮಾದಿಗನು ಒಮ್ಮೆ ಉಪಕಾರಿ, ಕಮ್ಮೆ ತನ ।
	ಗಾದವರ ಕೊಲುವ ಸರ್ವಜ್ಞ ॥

೯೦೭. ಕಮ್ಮೆಯನ ಚೇಳಿನಾ । ಹೊಮ್ಮೆರಡು ಒಂದಯ್ಯ ।
	ನೆಮ್ಮಿದರೆ ಚೇಳು ಹೊಡೆದಿಹುದು ಕಮ್ಮ
ಜೈನಮತ ಪ್ರಶಂಸೆ
೯೧೦. ಸೃಷ್ಟಿಯಲಿ ಜಿನಧರ್ಮ । ಪಟ್ಟಗಟ್ಟಿರುತಿಕ್ಕು ।
	ಕೆಟ್ಟ ಕೆಡಗುಣಗವೆಲ್ಲ ತಲೆಹೋದ ।
	ಅಟ್ಟೆಯಂತಿಕ್ಕು ಸರ್ವಜ್ಞ ॥

೯೧೧. ಕೊಲು ಧರ್ಮಗಳ - ನೊಯ್ದು । ಒಲೆಯೊಳಗೆ ಇಕ್ಕುವಾ ।
	ಕೊಲಲಾಗದೆಂಬ ಜೈನನಾ ಮತವೆನ್ನ ।
	ತಲೆಯ ಮೇಲಿರಲಿ ಸರ್ವಜ್ಞ ॥
ಜೈನಧರ್ಮವು ಹಿಂದಿನಿಂದ ಹುಟ್ಟಿದ್ದು 
೯೧೨. ಆದಿಯಲಿ ಜಿನನಿಲ್ಲ । ವೇದದಲಿ ಹುಸಿಯಿಲ್ಲ ।
	ವಾದದಿಂದಾವ ಧನವಿಲ್ಲ ಸ್ವರ್ಗದಿ ।
	ಮಾದಿಗರೆ ಇಲ್ಲ ಸರ್ವಜ್ಞ ॥
ಜೈನರು ಸುಳ್ಳಾಡಲಾರರು
೯೧೩. ಮುತ್ತು ಮುದುಕಿಗೆ ಏಕೆ । ತೊತ್ತೇಕೆ ಗುರುಗಳಿಗೆ ।
	ಬತ್ತಿದಾ ಕೆರೆಗೆ ಮಿಗವೇಕೆ ಸವಣರಿಗೆ ।
	ಮಿಥ್ಯತನವೇಕೆ ಸರ್ವಜ್ಞ ॥

೯೧೪. ಮೊಸರು ಇಲ್ಲದ ಊಟ । ಪಸರವಿಲ್ಲದ ಕಟಕ ।
	ಹಸನವಿಲ್ಲದಳ ರತಿಕೂಟ ಜಿನನ ಬಾಯ್ ।
	ಕಿಸುಕುಳದಂತೆ ಸರ್ವಜ್ಞ ॥

೯೧೫. ಉಪ್ಪು ಸಪ್ಪನೆಯಕ್ಕು । ಕಪ್ಪುರವು ಕರಿದಿಕ್ಕು ।
	ಸರ್ಪನಿಗೆ ಬಾಲವೆರ್‍ಅಡಕ್ಕು ಸವಣ ತಾ ।
	ತಪ್ಪಾದಿದಂದು ಸರ್ವಜ್ಞ ॥

೯೧೬. ಹೆರೆಗಳೆಡೆ ಉರಗನನಾ । ಗರಳ ತಾ ತಪ್ಪುವದೆ ।
	ಪರತತ್ವಬೋಧೆಯನರಿಯದಾ ಶ್ರವಣರು ।
	ಸಿರಿಯ ತೊರೆದರೇನು ಸರ್ವಜ್ಞ ॥

೯೧೭. ಆಚಾರವಿಹುದೆಂದು । ಲೋಹಗುಂಡಿಗೆ ವಿಡಿದು ।
	ಭೂಚರದಿ ಸತ್ತ ನವಿಲುಗರಿಪಿಡಿದಿರಲು ।
	ನೀಚರೆನಿಸಿರರೆ ಸರ್ವಜ್ಞ ॥

೯೧೮. ಬಟ್ಟನಾಗಿಯೇ ಬೊಟ್ಟ । ನಿಟ್ಟು ಒಪ್ಪುವ ಜೈನ ।
	ನೆಟ್ಟಗೇ ಸ್ವರ್ಗ ಪಡಿಯುವಡೆ ಸಾಣೇಕಲ್ ।
	ಕೆಟ್ಟ ಕೇಡೇನು ಸರ್ವಜ್ಞ ॥
ಅಹಿಂಸಾವಾದ ನಿರ್ಣಯ
೯೧೯. ಕೊಲ್ಲದಿರ್ಪಾಧರ್ಮ । ವೆಲ್ಲರಿಗೆ ಸಮ್ಮತವು ।
	ಅಲ್ಲದನು ಮೀರಿ ಕೊಲ್ಲುವನು ನರಕಕ್ಕೆ ।
	ನಿಲ್ಲದಲೆ ಹೋದ ಸರ್ವಜ್ಞ ॥

೯೨೦. ಹೇನು ಕೂರೆಗಳನ್ನು । ತಾನಾ ಜಿನಕೊಲ್ಲ ।
	ಸ್ಥಾನ ಪಲ್ಲಟವ ಮಾಡದಡೆ ಆ ಮೇಲೆ ।
	ಏನಾದುದರಿಯ ಸರ್ವಜ್ಞ ॥

೯೨೧. ಎಂತು ಪ್ರಾಣಿ ಕೊಲ್ಲ । ದಂತುಂಟು ಜಿನಧರ್ಮ ।
	ಜಂತು ಬಸುರಲ್ಲಿ ಸಾಯಲು ಆ ಜೀವಿಯು ।
	ಎಂತಾದ ಶ್ರವಣ ಸರ್ವಜ್ಞ ॥

೯೨೨. ಎಂತು ಜೀವಿಯ ಕೊಲ್ಲ । ದಂತಿಹುದು ಜಿನಧರ್ಮ ।
	ಜಂತುಗಳ ಹೆತ್ತು ಮರಳಿಯದನೇ ಸಲಹಿ ।
	ದಂತವನೆ ಜೈನ ಸರ್ವಜ್ಞ ॥

೯೨೩. ಜೀವಿ ಜೀವಿಯ ತಿಂದು । ಜೀವಿಪುದು ಜಗವೆಲ್ಲ ।
	ಜೀವದಿಂ ಹೊರಗೆ ಶಿಂಬವರ ನಾ ಕಾಣೆ ।
	ಜೀವವೀ ಜಗವು ಸರ್ವಜ್ಞ ॥

೯೨೪. ಚರಜೀವನು ತಿಂದು । ಚರಿಸುವದು ಜಗವರ್ಧ ।
	ಚರಿಸದಾ ಜೀವಿಗಳೆ ತಿಂದು ಜಗವರ್ಧ ।
	ಚರಿಸುವದು ನೋಡು ಸರ್ವಜ್ಞ ॥

೯೨೫. ಎಂತು ತಪಸಿಗಳಂತೆ । ನಿಂತಫಲಜೀವಿಗಳು ।
	ಜಂತುವಲ್ಲೆಂದು ಜಿನ ತಿಂದು ಮತ್ತದನು ।
	ಸಂತೆಯೊಳು ಇಡುವ ಸರ್ವಜ್ಞ ॥

೯೨೬. ಒಂದು ಜೀವವನೊಂದು । ತಿಂದು ಉಳಿದಿಹಜಗದೊ ।
	ಳೆಂದೂ ಕೊಲಲಾಗದೆಂಬಾ ಜಿನಧರ್ಮ ।
	ನಿಂದಿಹುದು ಹೇಗೆ ಸರ್ವಜ್ಞ ॥

೯೨೭. ಜೀವ ಜೀವವ ತಿಂದು । ಜೀವಿಗಳ ಹುಟ್ಟಿಸಿರೆ ।
	ಸಾವು ಎಲ್ಲಿಹುದು ಸ್ವಾರ್ಥವೆ ಜಗದೊಳಗೆ ।
	ಸಾವೆಂದು ತಿಳಿಯೋ ಸರ್ವಜ್ಞ ॥
ಮೂರ್ಖರ ಪದ್ಧತಿ (ಮೂರ್ಖರ ಲಕ್ಷಣ)
೯೨೮. ಮೂರ್ಖಂಗೆ ಬುದ್ಧಿಯನು ।
	ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು ।
	ನೀರ್ಕೊಳ್ಳಬಹುದೆ ಸರ್ವಜ್ಞ ॥
ಮೂರ್ಖನ ಸಂಗಡ ವಾದಿಸಬೇಡ 
೯೨೯. ಆರು ಬೆಟ್ಟವನೊಬ್ಬ । ಹಾರಬಹುದೆಂದಿಹರೆ ।
	ಹಾರಬಹುದೆಂದು ಎನಬೇಕು । ಮೂರ್ಖನಾ ।
	ಹೋರಾಟ ಸಲ್ಲ ಸರ್ವಜ್ಞ ॥

೯೩೦. ಮೂರು ಗಾವುದವನ್ನು ಹಾರಬಹುದೆಂದವರ ।
	ಹಾರಬಹುದೆಂದು ಎನಬೇಕು, ಮೂರ್ಖನಾ ।
	ಹೋರಾಟ ಸಲ್ಲ ಸರ್ವಜ್ಞ ॥

೯೩೧. ಒಲೆಗುಂಡನೊಬ್ಬನೇ । ಮೆಲಬಹುದು ಎನ್ನುವಡೆ ।
	ಮೆಲಭುದು ಎಂಬುವನೆ ಜಾಣ, ಮೂರ್ಖನಂ ।
	ಗೆಲಲಾಗದಯ್ಯ ಸರ್ವಜ್ಞ ॥

೯೩೨. ಮೊಲನಾಯ ಬೆನ್ನಟ್ಟಿ । ಗೆಲಬಹುದು ಎಂದಿಹರೆ ।
	ಗೆಲಭುದು ಎಂದು ಎನಬೇಕು ಮೂರ್ಖನಲಿ ।
	ಛಲವು ಬೇಡೆಂದ ಸರ್ವಜ್ಞ ॥

೯೩೩. ನೆಲವನ್ನು ಮುಗಿಲನ್ನು । ಹೊಲಿವರುಂಟೆಂದರವ ।
	ಹೊಲಿವರು ಹೊಲಿವರು ಎನಬೇಕು । ಮೂರ್ಖನಲಿ ।
	ಕಲಹವೇ ಬೇಡ ಸರ್ವಜ್ಞ ॥

೯೩೪. ಬೆಟ್ಟವನು ಕೊಂಡೊಂಬ್ಬ । ನಿಟ್ಟಿಹನು ಎಂದಿಹರೆ 
	ಇಟ್ಟಿಹನು ಎಂದು ಎನಬೇಕು ಮೂರ್ಖನಾ ।
	ಬಟ್ಟೆ ಬೇಡೆಂದ ಸರ್ವಜ್ಞ ॥

೯೩೫. ಹೊಳೆಯ ನೀರೊಬ್ಬನೇ । ಅಳೆಯಬಹುದೆಂದರವ ।
	ಅಳೆಯಬಹುದೆಂದು ಎನಬೇಕು ಮೂರ್ಖನಂ ।
	ಗೆದೆಯಲಳವಲ್ಲ । ಸರ್ವಜ್ಞ ॥

೯೩೬. ಒಂದನ್ನು ಎರಡೆಂಬ । ಹಂದಿ ಹೆಬ್ಬುಲಿಯೆಂಬ ।
	ನಿಂದ ದೇಗುಲದ ಮರವೆಂಬ ಮೂರ್ಖ ತಾ ।
	ನೆಂದಂತೆ ಎನ್ನಿ ಸರ್ವಜ್ಞ ॥
ಮೂರ್ಖರ ಸ್ನೇಹ ಬೇಡ 
೯೩೭. ಅಳೆ ಹೊಲ್ಲ ಆಡಿನಾ । ಕೆಳೆ ಹೊಲ್ಲ ಕೋಡಗನು ।
	ಕೋಪ ಓಪರೊಳು ಹೊಲ್ಲ, ಮೂರ್ಖನಾ ।
	ಗೆಳೆತನವೆ ಹೊಲ್ಲ  । ಸರ್ವಜ್ಞ ॥
ಆಗಗಾಡಿ (ರೈಲು)
೯೩೮. ಪಂಚಲೋಹದ ಕಂಬಿ । ಮುಂಚೆ ಭೂಮಿಗೆ ಹಾಸಿ ।
	ಕಂಚಿನಾ ರಥವ ನಡಿಸುವರು, ಅದರೋಟ ।
	ಮಿಂಚು ಹೊಡೆದಂತೆ ಸರ್ವಜ್ಞ ॥
ತಂತಿ (ನಾರು)
೯೩೯. ಅಲ್ಲಿಗಲ್ಲಿಗೆ ಕಲ್ಲು । ಕಲ್ಲಿನಾ ಕಡೆ ತಂತಿ ।
	ಬಲ್ಲಿದರ ರಥವು ಹೊಗೆಯುತ್ತ ಬರಲದರ ।
	ಸೊಲ್ಲು ಕೇಳೆಂದ ಸರ್ವಜ್ಞ ॥
ಉಗಿಬಂಡಿ ಮಾಡಿದ ಇಂಗ್ರೇಜಿಯರು
೯೪೦. ಎತ್ತು ಇಲ್ಲದ ಬಂಡಿ । ಒತ್ತೊತ್ತಿ ನಡಿಸುವರು ।
	ಸುತ್ತಲೂ ರಾಜ್ಯವಾಳುವರು ಕಡೆಯಲ್ಲಿ ।
	ಮೃತ್ಯುಹೊಂದುವರು । ಸರ್ವಜ್ಞ ॥
ಲೇಸು ಪದ್ಧತಿ
೯೪೧. ಹಂಗಿನಾ ಹಾಲಿನಿಂ । ದಂಬಲಿಯ ತಿಳಿ ಲೇಸು ।
	ಭಂಗಬಟ್ಟುಂಬ ಬಿಸಿಯಿಂದ ತಿರಿವವರ ।
	ತಂಗುಳವೆ ಲೇಸು ಸರ್ವಜ್ಞ ॥

೯೪೨. ಜಾಜಿಯಾ ಹೂ ಲೇಸು । ತೇಜಿವಾಹನ - ಲೇಸು ।
	ರಾಜಮಂದಿರದೊಳಿರಲೇಸು ತಪ್ಪುಗಳ ।
	ಮಾಜುವದು ಲೇಸು ಸರ್ವಜ್ಞ ॥

೯೪೩. ಸುಟ್ಟ ಬೆಳಸಿಯು ಲೇಸು । ಅಟ್ಟ ಬೊನವು ಲೇಸು ।
	ಕಟ್ಟಾಣೆ ಸತಿಯು ಇರಲೇಸು , ನಡುವಿಂಗೆ ।
	ದಟ್ಟಿ ಲೇಸೆಂದ ಸರ್ವಜ್ಞ ॥

೯೪೪. ಹಸಿಯ ಅಲ್ಲವು ಲೇಸು ।
	ಬಿಳಿಯ ಪಳಿಯು ಲೇಸು ಹುಸಿ ಲೇಸು ಕಳ್ಳಹೆಣ್ಣಿಗೆ ।
	ಬೈಗಿನಾ ಬಿಸಿಲು ಲೇಸೆಂದ ಸರ್ವಜ್ಞ ॥

೯೪೫. ಉದ್ದಿನಾ ಒಡೆ ಲೇಸು । ಬುದ್ಧಿಯಾ ನುಡಿ ಲೇಸು ।
	ಬಿದ್ದೊಡನೆ ಕಯ್ಗೆ ಬರಲೇಸು, ಶಿಶುವಿಂಗೆ ।
	ಮುದ್ದಾಟ ಲೇಸು ಸರ್ವಜ್ಞ ॥

೯೪೬. ಅಳೆ ಲೇಸು ಗೊಲ್ಲಂಗೆ । ಮಳೆ ಲೇಸು ಕಳ್ಳಂಗೆ ।
	ಬಲೆ ಲೇಸು ಮೀನ ಹಿಡಿವಂಗೆ ।
	ಕುರುಡಂಗೆ ಸುಳಿದಾಟ ಲೇಸು ಸರ್ವಜ್ಞ ॥

೯೪೭. ಅಕ್ಕಿಯೋಗರ ಲೇಸು । ಮೆಕ್ಕೆಹಿಂಡಿಯು ಲೇಸು ।
	ಮಕ್ಕಳನು ಹೆರುವ ಸತಿ ಲೇಸು ಜಗಕೆಲ್ಲ ।
	ರೊಕ್ಕವೇ ಲೇಸು ಸರ್ವಜ್ಞ ॥

೯೪೮. ಮಜ್ಜಿಗೂಟಕೆ ಲೇಸು । ಮಜ್ಜನಕೆ ಮಡಿ ಲೇಸು ।
	ಕಜ್ಜಾಯ ತುಪ್ಪ ಉಣ ಲೇಸು ।
	ಮನೆಗೊಬ್ಬ ಅಜ್ಜಿ ಲೇಸೆಂದ ಸರ್ವಜ್ಞ ॥

೯೪೯. ಹಸಿದರಂಬಲಿ ಲೇಸು । ಬಿಸಿಲಲ್ಲಿ ಕೊಡೆ ಲೇಸು ।
	ಬಸುರಿನಾ ಸೊಸೆಯು ಇರ ಲೇಸು ।
	ಸಭೆಗೊಬ್ಬ ರಸಿಕನೇ ಲೇಸು ಸರ್ವಜ್ಞ ॥

೯೫೦. ಹುತ್ತು ಹಾವಿಗೆ ಲೇಸು । ಮುತ್ತು ಕೊರಳಿಗೆ ಲೇಸು ।
	ಕತ್ತೆಯಾ ಹೇರುತರ ಲೇಸು । ತುಪ್ಪದಾ ।
	ತುತ್ತು ಲೇಸೆಂದ ಸರ್ವಜ್ಞ ॥

೯೫೧. ಒಸರುವಾ ತೊರೆ ಲೇಸು । ಹಸುನಾದ ಕೆರೆ ಲೇಸು ।
	ಸರವಿರುವವನ ನೆರೆ ಲೇಸು ।
	ಸಾಗರವು ವಸುಧಿಗೆ ಲೇಸು ಸರ್ವಜ್ಞ ॥

೯೫೨. ಜಾಣೆಯಾ ನುಡಿ ಲೇಸು । ವೀಣೆಯಾ ಸ್ವರ ಲೇಸು ।
	ಮಾಣದಲೆ ವದನ ಶುಚಿ ಲೇಸು । ಕೂರ್ಪವರ ।
	ಕಾಣುವದೆ ಲೇಸು ಸರ್ವಜ್ಞ ॥

೯೫೩. ಹರಳು ಉಂಗುರ ಲೇಸು । ಹುರುಳಿ ಕುದುರೆಗೆ ಲೇಸು ।
	ಮರುಳ ನೆಲ, ತೆಂಗು ಇರಲೇಸು । ಸ್ತ್ರೀಯರ ।
	ಕುರುಳು ಲೇಸೆಂದ ಸರ್ವಜ್ಞ ॥

೯೫೪. ಹರಕು ಜೋಳಿಗೆ ಲೇಸು । ಮುರುಕ ಹಪ್ಪಳ ಲೇಸು ।
	ಕುರುಕುರೂ ಕಡಲೆ ಬಲು ಲೇಸು, ಪಾಯಸದ ।
	ಸುರುಕು ಲೇಸೆಂದ ಸರ್ವಜ್ಞ ॥

೯೫೫. ಕರಿಕೆ ಕುದುರೆಗೆ ಲೇಸು । ಮುರಕವು ಹೆಣ್ಣಿಗೆ ಲೇಸು ।
	ಅರಿಕೆಯುಳ್ಳವರ ಕೆಳೆಲೇಸು ಪಶುವಿಂಗೆ ।
	ಗೊರೆಸುಲೇಸೆಂದ ಸರ್ವಜ್ಞ ॥

೯೫೬. ಕಾಸು ವೆಚ್ಚಕೆ ಲೇಸು । ದೋಸೆ ಹಾಲಿಗೆ ಲೇಸು ।
	ಕೂಸಿಂಗೆ ತಾಯಿ ಇರಲೇಸು, ಹರೆಯದಗೆ ।
	ಮೀಸೆ ಲೇಸೆಂದ ಸರ್ವಜ್ಞ ॥

೯೫೭. ಗಿಡ್ಡ ಹೆಂಡತಿ ಲೇಸು । ಮಡ್ಡಿ ಕುದುರೆಗೆ ಲೇಸು ।
	ಬಡ್ಡಿಯಾ ಸಾಲ ಕೊಡಲೇಸು ಹಿರಿಯರಿಗೆ ।
	ಗಡ್ಡ ಲೇಸೆಂದ ಸರ್ವಜ್ಞ ॥

೯೫೮. ಮಂಜಿನಿಂ ಮಳೆ ಲೇಸು । ಪಂಜು ಇರುಳಲಿ ಲೇಸು ।
	ಪಂಜರವು ಲೇಸು ಅರಗಿಳಿಗೆ, ಜಾಡಂಗೆ ।
	ಗಂಜಿ ಲೇಸೆಂದ ಸರ್ವಜ್ಞ ॥

೯೫೯. ಗಾಜು ನೋಟಕೆ ಲೇಸು । ತೇಜಿ ಏರಲು ಲೇಸು ।
	ರಾಜಂಗೆ ವಸ್ತ್ರ ಇರಲೇಸು ಊಟಕ್ಕೆ ।
	ರಾಜನ್ನ ಲೇಸು ಸರ್ವಜ್ಞ ॥

೯೬೦. ಗಾಜು ನೋಟಕೆ ಲೇಸು । ಮಾನಿನಿಗೆ ಪತಿ ಲೇಸು ।
	ಸ್ವಾನುಭಾವಿಯ ನುಡಿ ಲೇಸು ಎಲ್ಲಕ್ಕು ನಿ ।
	ಧಾನವೇ ಲೇಸು ಸರ್ವಜ್ಞ ॥

೯೬೧. ತುಪ್ಪ ಒಗರ ಲೇಸು । ಉಪ್ಪರಿಗೆ ಮನೆ ಲೇಸು ।
	ಅಪ್ಪ ಬಾರೆಂಬ ಮಗ ಲೇಸು ಊರೊಳಗೆ ।
	ಶಿಂಪಿಗನು ಲೇಸು । ಸರ್ವಜ್ಞ ॥

೯೬೨. ಕಂಚಿಯಾ ಫಲಲೇಸು । ಮಿಂಚು ಮುಗಿಲಿಗೆ ಲೇಸು ।
	ಕೆಚ್ಚನೆಯ ಸತಿಯು ಇರಲೇಸು, ಊರಿಂಗೆ ।
	ಪಂಚಾಳ ಲೇಸು ಸರ್ವಜ್ಞ ॥

೯೬೩. ಎಮ್ಮೆ ಹಯನವು ಲೇಸು । ಕಮ್ಮನಾಮ್ಲವು ಲೇಸು ।
	ಸುಮ್ಮನೆಯ ಒಡವೆ ಬರಲೇಸು ಊರಿಂಗೆ ।
	ಕಮ್ಮಾರ ಲೇಸು ಸರ್ವಜ್ಞ ॥

೯೬೪. ಹಡಗು ಗಾಳಿಗೆ ಲೇಸು । ಗುಡುಗು ಮಳೆ ಬರಲೇಸು ।
	ಒಡಹುಟ್ಟಿದವರು ಇರಲೇಸು, 
	ಊರಿಂಗೆ ಬಡಿಗೆ ಲೇಸಂದ ಸರ್ವಜ್ಞ ॥

೯೬೫. ಅಂಬು ಬಿಲ್ಲಿಗೆ ಲೇಸು । ಇಂಬು ಕೋಣೆಗೆ ಲೇಸು ।
	ಸಂಬಾರ ಲೇಸು ಸಾರಿಗಂ ಊರಿಂಗೆ ।
	ಕುಂಬಾರ ಲೇಸು ಸರ್ವಜ್ಞ ॥

೯೬೬. ಅಗಸ ಊರಿಗೆ ಲೇಸು । ಸೊಗಸು ಬಾಳುವೆ ಲೇಸು ।
	ಬೊಗಸೆಯುಳ್ಳವರ ಗೆಣೆ ಲೇಸು ಊರಿಂಗೆ ।
	ಅಗಸ ಲೇಸೆಂದ ಸರ್ವಜ್ಞ ॥

೯೬೭. ಜಾಣ ಜಾಣಗೆ ಲೇಸು । ಕೋಣ ಕೋಣಗೆ ಲೇಸು ।
	ನಾಣ್ಯವದು ಲೇಸು ಜನರಿಂಗೆ ಊರಿಂಗೆ ।
	ಗಾಣಿಗನು ಲೇಸು ಸರ್ವಜ್ಞ ॥

೯೬೮. ಅಕ್ಕಿ ಬೊನವು ಲೇಸು । ಸಿಕ್ಕ ಸೆರೆ ಬಿಡಲೇಸು ।
	ಹಕ್ಕಿಗಳೊಳಗೆ ಗಿಳಿ ಲೇಸು ।
	ಊರಿಗೊಬ್ಬ ಅಕ್ಕಸಾಲೆಂದ ಸರ್ವಜ್ಞ ॥
ನಿಂದಾ ಪದ್ಧತಿ
೯೬೯. ಕಣಕ ನೆನೆದರೆ ಹೊಲ್ಲ । ಕುಣಿಕೆ ಹರಿದರೆ ಹೊಲ್ಲ ।
	ಕಣ್ಣು ಕಟ್ಟು ಹೊಲ್ಲ ಅರಿದರಲಿ ಚುಕ್ಕಿಯ ।
	ಎಣಿಸುವದೆ ಹೊಲ್ಲ ಸರ್ವಜ್ಞ ॥

೯೭೦. ಹರಳು ಹಾದಿಗೆ ಹೊಲ್ಲ । ಮರುಳ ಮನೆಯೊಳು ಹೊಲ್ಲ ।
	ಇರುಳೊಳು ಪಯಣ ಬರಹೊಲ್ಲ, ಆಗದರಲಿ ।
	ಸರಸವೇ ಹೊಲ್ಲ ಸರ್ವಜ್ಞ ॥

೯೭೧. ಉಪ್ಪಿಲ್ಲದುಣ ಹೊಲ್ಲ । ಮುಪ್ಪು ಬಡತನ ಹೊಲ್ಲ ।
	ತಪ್ಪನೇ ನುಡಿವ ಸತಿ ಹೊಲ್ಲ ತಾನೊಪ್ಪಿ ।
	ತಪ್ಪುವದೆ ಹೊಲ್ಲ ಸರ್ವಜ್ಞ ॥

೯೭೨. ಸಂತೆಯಾ ಮನೆ ಹೊಲ್ಲ । ಚಿಂತೆಯಾತನು ಹೊಲ್ಲ ।
	ಎಂತೊಲ್ಲದವಳ ರತಿ ಹೊಲ್ಲ ।
	ಬಾಳುವವಗಂತಕನೆ ಹೊಲ್ಲ ಸರ್ವಜ್ಞ ॥

೯೭೩. ಸಂತೆ ಸಾಲಕೆ ಹೊಲ್ಲ । ಕೊಂತ ಡೊಂಕಲು ಹೊಲ್ಲ ।
	ಬೊಂತೆ ಹಚ್ಚಡವ ಹೊದೆ ಹೊಲ್ಲ ಆಗಲುಂ ।
	ಚಿಂತೆಯೇ ಹೊಲ್ಲ ಸರ್ವಜ್ಞ ॥

೯೭೪. ಮೋಟಿತ್ತ ಕೊಳ ಹೊಲ್ಲ । ನೋಟ - ಬೇಟವು ಹೊಲ್ಲ ।
	ತಾಟಗಿತ್ತಿಯಾ ನೆರೆ ಹೊಲ್ಲ ।
	ಕಜ್ಜಿಯಾ ಕಾಟವೇ ಹೊಲ್ಲ ಸರ್ವಜ್ಞ ॥

೯೭೫. ಹಂದೆ ಭಟರೊಳು ಹೊಲ್ಲ । ನಿಂದೆಯಾ ನುಡಿ ಹೊಲ್ಲ ।
	ಕುಂದುಗುಲದವಳ ತರ ಹೊಲ್ಲ ಉರಿಯೊಳಗೆ ।
	ನಿಂದಿರಲು ಹೊಲ್ಲ ಸರ್ವಜ್ಞ ॥

೯೭೬. ಬರಕೆ ಬುತ್ತಿಯು ಹೊಲ್ಲ । ಸಿರಿಕಾ ಮನೆ ಹೊಲ್ಲ ।
	ಕರೆಕರೆಯ ಕೂಳು ತಿನಹೊಲ್ಲ ।
	ಕಜ್ಜಿಯನು ಕೆರೆಕೊಳ್ಳ ಹೊಲ್ಲ ಸರ್ವಜ್ಞ ॥

೯೭೭. ಹುತ್ತ ಹಿತ್ತಲು ಹೊಲ್ಲ । ಬೆತ್ತ ಭೂತಕೆ ಹೊಲ್ಲ ।
	ಒತ್ತೆಗೊಂಬಳಿಗೆ ತುರಿ ಹೊಲ್ಲ ಒಣಕೂಳ ।
	ತುತ್ತು ತಾ ಹೊಲ್ಲ ಸರ್ವಜ್ಞ ॥

೯೭೮. ಬಿತ್ತದಾ ಹೊಲ ಹೊಲ್ಲ । ಮೆತ್ತದಾ ಮನೆ ಹೊಲ್ಲ ।
	ಚಿತ್ತ ಬಂದತ್ತತಿರುಗುವಾ ಮಗ ಹೊಲ್ಲ ।
	ಬತ್ತಲಿರ ಹೊಲ್ಲ ಸರ್ವಜ್ಞ ॥

೯೭೯. ಪೀಠ ಮೂಢಗೆ ಹೊಲ್ಲ । ಕೀಟ ನಿದ್ದೆಗೆ ಹೊಲ್ಲ ।
	ತೀಟಿಯದು ಹೊಲ್ಲ ಕಜ್ಜಿಯಾ, ದುರ್ಜನರ ।
	ಕಾಣವೇ ಹೊಲ್ಲ ಸರ್ವಜ್ಞ ॥
ನೀತಿ ಪದ್ಧತಿ

ಧರ್ಮ ನೀತಿ (ಪಾಪ - ಪುಣ್ಯ)
೯೮೦. ಪಾಪ - ಪುಣ್ಯಗಳೆಂಬ । ತಿಣ್ಣ ಭೇದಗಳಿಂದ ।
	ತಣ್ಣಗೀ ಜಗವು ನಡೆದಿಹುದು ಅಲ್ಲದಡ ।
	ನುಣ್ಣಗಾಗಿಹುದು ಸರ್ವಜ್ಞ ॥

೯೮೧. ಮುನ್ನ ಮಾಡಿದ ಪಾಪ । ಹೊನ್ನಿನಿಂ ಪೋಪುದೇ ?
	ಹೊನ್ನಿನಾ ಪುಣ್ಯವದು ಬೇರೆ; ಪಾಪ ತಾ ।
	ಮುನ್ನಿನಂತಿಹುದು ಸರ್ವಜ್ಞ ॥

೯೮೨. ಹಿಂದೆ ಪಾಪವ ಮಾಡಿ । ಮುಂದೆ ಪುಣ್ಯವು ಹೇಗೆ ।
	ಹಿಂದು - ಮುಂದರಿದು ನಡೆಯದಿರೆ 
	ನರಕದಲಿ ಬೆಂದು ಸಾಯುವನು ಸರ್ವಜ್ಞ ॥

೯೮೩. ಹರೆಯಲ್ಲಿನ ಪಾಪ । ಕೆರೆಯಲ್ಲಿ ಪೋಪುದೇ ?
	ಒರೆಗಲ್ಲಿನಂತೆ ವಿಧಿಯಿರಲು ನೀತಿಯಾ ।
	ಇರವು ಬೇರೆಂದ ಸರ್ವಜ್ಞ ॥

೯೮೪. ಅರಿಯ ದೆಸಗಿದೆ ಪಾಪ । ಅರಿತರದು ತನಗೊಳಿತು ।
	ಅರಿತರಿತು ಮಾಡಿ ಮರೆತವನು ತನ್ನ ತಾ ।
	ನಿರಿದುಕೊಂಡಂತೆ ಸರ್ವಜ್ಞ ॥
ಪುಣ್ಯದ ಮಹಿಮೆ 
೯೮೫. ಪುಣ್ಯತನಗುಳ್ಳ ನರ । ಮನ್ನಣೆಯು ಪಿರಿದಕ್ಕು ।
	ಹಣ್ಣಿರ್ದ ಕಾರ್ಯ - ಫಲವಕ್ಕು ಹಿಡಿದಿರ್ದ ।
	ಮಣ್ಣು ಹೊನ್ನಕ್ಕು ಸರ್ವಜ್ಞ ॥

೯೮೬. ತೋಡಿದ್ದ ಬಾವಿಂಗೆ । ಕೂಡಿದ್ದ ಜಲ ಸಾಕ್ಷಿ ।
	ಮಾಡಿರ್‍ದಕೆಲ್ಲ ಮನಸಾಕ್ಷಿ ಸರ್ವಕ್ಕು ।
	ಮೃಢನೆ ತಾ ಸಾಕ್ಷಿ ಸರ್ವಜ್ಞ ॥
ಸತ್ಯದ ಮಹಿಮೆ 
೯೮೭. ಸತ್ಯನುಡಿದತ್ತರೂ । ಸುತನೊಬ್ಬ ಸತ್ತರೂ ।
	ಸತ್ಯವನು ಬಿಡದ ಹರಿಶ್ಚಂದ್ರ ಜಗದೊಳು ।
	ಸ್ತುತ್ಯನಾಗಿಹನು ಸರ್ವಜ್ಞ ॥

೯೮೮. ಸತ್ಯವೆಂಬುದು ತಾನು । ನಿತ್ಯದಲಿ ಮರೆದಿಹುದು ।
	ಮಿಥ್ಯ ಸತ್ಯವನು ಬೆರೆದರೂ ಇಹಪರದಿ ।
	ಸತ್ಯಕ್ಕೆ ಜಯವು ಸರ್ವಜ್ಞ ॥

೯೮೯. ಸತ್ಯರಿಗೆ ಧರೆಯೆಲ್ಲ ।
	ಮಸ್ತಕವನೆರಗುವದು । ಹೆತ್ತ ತಾಯ್ಮಗನ
	ಕರೆವಂತೆ ಶಿವನವರನೆತ್ತಿ ಕೊಂಬುವನು ಸರ್ವಜ್ಞ ॥

೯೯೦. ಕುಂದಳಿದವ ದೈವ । ಬಂಧ ಕಳೆದವ ದೈವ ।
	ನೊಂದು ತಾ ನೋಯಿಸದವ ದೈವ ಹುಸಿಯದನೆ ।
	ಇಂದುಧರನೆಂದ ಸರ್ವಜ್ಞ ॥
ಸುಳ್ಳಿನ ಸ್ಥಿತಿ 
೯೯೧. ಹುಸಿವನಿಂದೈನೂರು । ಪಶುವ ಕೊಂದವ ಲೇಸು ।
	ಶಿಶು ವಧೆಯಮಾಡಿದವ ಲೇಸು, ಮರೆಯಲಿ ।
	ದ್ದೆಸೆದರೂ ಲೇಸು ಸರ್ವಜ್ಞ ॥

೯೯೨. ಹಾಲಿನಾ ಹಸು ಲೇಸು । ಶೀಲದಾ ಶಿಶು ಲೇಸು ಬಾಲೆ ।
	ಸಜ್ಜನೆಯ ಬಲು ಲೇಸು ಹುಸಿಯದಾ ।
	ನಾಲಿಗೆಯು ಲೇಸು ಸರ್ವಜ್ಞ ॥

೯೯೩. ಆಡಿ ಹುಸಿಯಲು ಹೊಲ್ಲ । ಕೂಡಿ ತಪ್ಪಲು ಹೊಲ್ಲ ।
	ಕಾಡುವಾ ನೆಂಟ ಬರ ಹೊಲ್ಲ ಸಟಿಯ ।
	ನಾಡುವನೆ ಹೊಲ್ಲ ಸರ್ವಜ್ಞ ॥

೯೯೪. ಕಾಲು ಮುರಿದರೆ ಹೊಲ್ಲ । ಬಾಲೆ ಮುದುಕಗೆ ಹೊಲ್ಲ ।
	ನಾಲಿಗೆಯಲೆರಡು ನುಡಿ ಹೊಲ್ಲ ।
	ಸಮರದಲಿ ಸೋಲುವಡೆ ಹೊಲ್ಲ ಸರ್ವಜ್ಞ ॥

೯೯೫. ದಿಟವೆ ಪುಣ್ಯದ ಪುಂಜ । ಸಟಿಯೆ ಪಾಪನ ಬೀಜ ।
	ಕುಟಿಲ ವಂಚನೆಗೆ ಪೋಗದಿರು । ನಿಜದಿ ಪಿಡಿ ।
	ಘಟವನೆಚ್ಚರದಿ ಸರ್ವಜ್ಞ ॥

೯೯೬. ಹುಸಿಯ ಪೇಳ್ವುದರಿಂದ । ಹಸಿದು ಸಾವುದು ಲೇಸು ।
	ಹುಸಿದು ಮೆರೆಯುವನ ಬದುಕಿಂದ ಹಂದಿಯಾ ।
	ಇಸಿಯು ಲೇಸೆಂದ ಸರ್ವಜ್ಞ ॥

೯೯೭. ಹುಸಿವಾತ ದೇಗುಲದ । ದೆಸೆಯತ್ತ ಮುಂತಾಗಿ ।
	ನೊಸಲೆತ್ತಿ ಕರವ ಮುಗಿದಿಹರೆ ।
	ಅಷ್ಟುದ್ದ ಹರಿವನೆಂದರಿಗು ಸರ್ವಜ್ಞ ॥
ಕಳ್ಳತನದ ಪರಿಣಾಮ 
೯೯೮. ಕಷ್ಟಗಳು ಓಡಿಬರ । ಲಿಷ್ಟಕ್ಕೆ ಭಯವೇಕೆ ।
	ಶಿಷ್ಟಂಗೆ ತೊದಲು ನುಡಿಯೇಕೆ ।
	ಕಳ್ಳಂಗೆ ದಟ್ಟಡಿಯದೇಕೆ ಸರ್ವಜ್ಞ ॥

೯೯೯. ನಿದ್ದೆಯಲಿ ಬುದ್ಧಿಲ್ಲ ಭದ್ರೆಗಂ ತಾಯಿಲ್ಲ ।
	ಕದ್ದು ಕೊಂಬಂಗೆ ಬದುಕಿಲ್ಲ ।
	ಮರಣಕ್ಕೆ ಮದ್ದುಗಳೆ ಇಲ್ಲ ಸರ್ವಜ್ಞ ॥

೧೦೦೦. ಕೆಂಪಿನಾ ದಾಸಾಳ । ಕೆಂಪುಂಟು ಕಂಪಿಲ್ಲ 
	 ಕೆಂಪಿನವರಲ್ಲಿ ಗುಣವಿಲ್ಲ ।
	 ಕಳ್ಳತಾ ಕೆಂಪಿರ್ದಡೇನು ಸರ್ವಜ್ಞ ॥

೧೦೦೧. ಒಳ್ಳೆಯನು ಇರದೂರ । ಕಳ್ಳನೊಡನಾಟವು ।
	 ಸುಳ್ಳನಾ ಮಾತು ಇವು ಮೂರು ಕೆಸರೊಳಗೆ ।
	 ಮುಳ್ಳು ತುಳಿದಂತೆ ಸರ್ವಜ್ಞ ॥

೧೦೦೨. ಕಳ್ಳತನ-ಕಪಟಗಳು । ಸುಳ್ಳಿನಾ ಮೂಲವವು ।
	 ಕಳ್ಳ ಕೈಗಳ್ಳ ಮೈಗಳ್ಳನೊಮ್ಮೆ ।
	 ಕೊಳ್ಳಗಾಣುವನು ಸರ್ವಜ್ಞ ॥
 ನರಹತ್ಯ
೧೦೦೩. ನರಹತ್ಯವೆಂಬುದು । ನರಕದಾ ನಡುಮನೆಯು ।
ಗುರು ಶಿಶುವು ನರರ ಹತ್ಯವನು ಮಾಡಿದನ । 
	 ಇರವು ರೌರವವು ಸರ್ವಜ್ಞ ॥
ಕಲಹದ ಪರಿಣಾಮ
೧೦೦೪. ಬಲವಂತರಾದವರು । ಕಲಹದಿಂ ಕೆಟ್ಟಿಹರು ।
	 ಬಲವಂತ ಬಲಿಯು, ದುರ್ಯೋಧನಾದಿಗಳು ।
	 ಛಲದಲುಳಿದಿಹರೆ ಸರ್ವಜ್ಞ ॥
ಕಾಮದ ವರ್ಣನೆ
೧೦೦೫. ಅಂದು ಕಾಮನ ಹರನು । ಕೊಂದನೆಂಬುದು ಪುಸಿಯು ।
	 ಇಂದುವದನೆಯರ ಕಡೆಗಣ್ಣ ನೋಟದಲಿ ।
	 ನಿಂದಿಹನು ಸ್ಮರನು ಸರ್ವಜ್ಞ ॥

೧೦೦೬. ಮುಟ್ಟಿದಂತಿರಬೇಕು । ಮುಟ್ಟದಲೆ ಇರಬೇಕು ।
	 ಮುಟ್ಟಿಯೂ ಮುಟ್ಟಿದಿರಬೇಕು ಪರಸ್ತ್ರೀಯ ।
	 ಮುಟ್ಟಿದವ ಕೆಟ್ಟ ಸರ್ವಜ್ಞ ॥

೧೦೦೭. ಪರಸ್ತ್ರೀಯ ಗಮನದಿಂ । ಪರಲೋಕವದು ಹಾನಿ ।
	 ಸಿರಿತಗ್ಗಿ ತಲೆಯು ತೊಲಗಿತಾ ರಾವಣಗೆ ।
	 ನರಲೋಕದಲ್ಲಿ ಸರ್ವಜ್ಞ ॥

೧೦೦೮. ಒಂದು ಒಂಭತ್ತು ತಲೆ । ಸಂದ ತೋಳಿಪ್ಪತ್ತು ।
	 ಬಂಧುಗಳನ್ನೆಲ್ಲ ಕೆಡಿಸಿತು, ಪತಿವ್ರತೆಯ ।
	 ತಂದ ಕಾರಣದಿ ಸರ್ವಜ್ಞ ॥

೧೦೦೯. ಈರೈದು ತಲೆಯುಳ್ಳ । ಧೀರ ರಾವಣ ಮಡಿದ ।
	 ವೀರ ಕೀಚಕನು ಗಡೆ ಸತ್ತು ಪರಸತಿಯ ।
	 ದಾರಿ ಬೇಡೆಂದ ಸರ್ವಜ್ಞ ॥

೧೦೧೦. ಕಿರಿಯಂದಿನಾ ಪಾಪ । ನೆರೆ ಬಂದು ಹೋದೀತೆ ।
	 ಅರವಿಂಗೆ ಹಿರಿದು ಕಿರಿದಿಲ್ಲ ಇದನು ನೀ ।
	 ನರಿದು ನೋಡೆಂದ ಸರ್ವಜ್ಞ ॥

೧೦೧೧. ಅರಿತು ಮಾಡಿದ ಪಾಪ । ಮರೆತರದು ಪೋಪುದೇ ।
	 ಮರೆತರಾಮರವ ಬಿಡಿಸುವದು, ಕೊರೆತೆಯದು ।
	 ಅರಿತು ನೋಡೆಂದ ಸರ್ವಜ್ಞ ॥
ಅನ್ಯಾಯ
೧೦೧೨. ನ್ಯಾಯದಲಿ ನಡೆದು ಅ । ನ್ಯಾಯವೇಬಂದಿಹುದು ।
	 ನಾಯಿಗಳು ಆರು ಇರುವತನಕ ನರರೊಂದು ।
	 ನಾಯಿ ಹಿಂಡೆಂದ ಸರ್ವಜ್ಞ ॥
ಪ್ರಾಣಹಿಂಸೆ
೧೦೧೩. ತಾಯ ಮುಂದಣ ಶಿಶುವ । ತಾಯಗನಲಿ ಕೊಲುವ ।
	 ಸಾಯಲದರಮ್ಮನನು ಕೊಲುವನುಂ ತನ್ನ ।
	 ತಾಯ ಕೊಂದಂತೆ ಸರ್ವಜ್ಞ ॥

೧೦೧೪. ಕೊಂದು ತಿನ್ನುವ ಕಂದ । ಕೊಂದನೆಂದೆನಬೇಡ ।
	 ನೊಂದಂತೆ ನೋವರಿಯದಾ ನರರಂದು ।
	 ಕೊಂದಿಹುದೆ ನಿಜವು ಸರ್ವಜ್ಞ ॥

೧೦೧೫. ಆಗಲೇಳು ಸಾಸಿರವು । ಮುಗಿಲು ಮುಟ್ಟುವಕೋಟೆ ।
	 ಹಗಲೆದ್ದು ಹತ್ತು ತಲೆಯಾತ ಪರಸತಿಯ ।
	 ನೆಗೆದು ತಾ ಕೆಟ್ಟ ಸರ್ವಜ್ಞ ॥

೧೦೧೬. ಎಂಟೆರಡು ತಲೆಯುಳ್ಳ । ಬಂಟ ರಾವಣ ಕೆಟ್ಟ ।
	 ತುಂಟ ಕೀಚಕನು ಹೊರಹೊಂಟ ಪರಸತಿಯ ।
	 ನಂಟು ಬೇಡೆಂದ ಸರ್ವಜ್ಞ ॥

೧೦೧೭. ಕುಸ್ತಿಯಲಿ ಭೀಮಬಲ । ಕುಸ್ತಿಯಲಿ ಕಾಮಬಲ ।
	 ಅಸ್ತಿ ಮುರಿದಿಹುದು ಕೀಚಕನ, ಪರಸತಿಯ ।
	 ಪ್ರಸ್ತವೇ ಬೇಡ ಸರ್ವಜ್ಞ ॥

೧೦೧೮. ಮೊಬ್ಬಿನಲಿ ಕೊಬ್ಬಿದರು । ಉಬ್ಬಿ ನೀ ಬೀಳದಿರು ।
	 ಒಬ್ಬರಲಿ ಬಾಳ ಬಂದಲ್ಲಿ ಪರಸತಿಯು ।
	 ತಬ್ಬ ಬೇಡೆಂದ ಸರ್ವಜ್ಞ ॥

೧೦೧೯. ತುರುಕನಾ ನೆರೆ ಹೊಲ್ಲ । ಹರದನಾ ಕೆಳ ಹೊಲ್ಲ ।
	 ತಿರಿಗೊಳನಟ್ಟು ಉಣಹೊಲ್ಲ ।
	 ಪರಸ್ತ್ರೀಯ ಸರಸವೇ ಹೊಲ್ಲ । ಸರ್ವಜ್ಞ ॥

೧೦೨೦. ಸುರಪ ಹಂಸನ ಶಶಿಯು । ಕರಕರದ ರಾವಣನು ।
	 ವ ಕೀಚಕಾದಿ ಬಲಯುತರು । 
	 ಕೆಟ್ಟರಲೆ ಪರಸತಿಯು ಪಿಡಿದು ಸರ್ವಜ್ಞ ॥

೧೦೨೧. ಒಡಲ ಹಿಡಿದಾಡದಿರು । ನುಡಿಯ ಹೋಗಾಡದಿರು ।
	 ನಡೆಯೊಳೆಚ್ಚರವ ಬಿಡದಲಿರು, ಪರಸತಿಯ ।
	 ಕಡೆಗೆ ನೋಡದಿರು ಸರ್ವಜ್ಞ ॥

೧೦೨೨. ಬೇಡ ಕಾಯದೇ ಕೆಟ್ಟ । ಜೇಡಿ ನೇಯದೆ ಕೆಟ್ಟ ।
	 ನೋಡದಲೆ ಕೆಟ್ಟ ಕೃಷಿಕ, ತಾ ।
	 ಸತಿಯ ಬಿಟ್ಟಾಡಿದವ ಕೆಟ್ಟ ಸರ್ವಜ್ಞ ॥

೧೦೨೩. ಕೊಟ್ಟು ಮರುಗಲು ಬೇಡ ಬಿಟ್ಟು ಹಿಡಿಯಲು ಬೇಡ ।
	 ಕೆಟ್ಟಾ ನಡೆಯುಳ ನೆರೆಬೇಡ ।
	 ಪರಸತಿಯ ಮುಟ್ಟಬೇಡೆಂದ ಸರ್ವಜ್ಞ ॥

೧೦೨೪. ಜಾರತ್ವವೆಂಬುವದು । ಕ್ಷೀರಸಕ್ಕರೆಯಂತೆ ।
	 ಊರಲ್ಲಿ ಒಬ್ಬರರಿತಿಹರೆ ಬೇವಿನಾ ।
	 ಸಾರದಂತಿಹುದು ಸರ್ವಜ್ಞ ॥

೧೦೨೫. ಪುರುಷ ಕಂಡರೆ ಕೊಲುವ । ಅರಸು ದಂಡವ ಕೊಂಬ ।
	 ನರರು ಸುರರೆಲ್ಲ ಮುನಿಯವರು, ಅಂತ್ಯಕ್ಕೆ, ನರಕ 
	 ಪರಸತಿಯು ಸರ್ವಜ್ಞ ॥

೧೦೨೬. ಎಡವಿ ಬಟ್ಟೊಡೆದರೂ । ಕೆಡೆಬೀಳಲಿರಿದರೂ ।
	 ನಡು ಬೆನ್ನಿನಲಗು ಮುರಿದರೂ ಹಾದರದ ।
	 ಕಡಹು ಬಿಡದೆಂದ ಸರ್ವಜ್ಞ ॥

ಪಾತಿವೃತ್ಯದ ಮಹಿಮೆ
೧೦೨೭. ಹಣ ಗುಣದಿ ಬಲವುಳ್ಳ । ಕೆಡೆಬೀಳಲಿರಿದರೂ ।
	 ನಡುವೆಂದು ಬಗೆದ ಪತಿಪ್ರತೆ ಸೀತೆಗಂ ।
	 ಎಣೆಯಾರು ಹೇಳು ಸರ್ವಜ್ಞ ॥

೧೦೨೮. ಮಾಳಗೆಯ ಮನೆ ಲೇಸು । ಗೂಳಿಯಾ ಪಶುಲೇಸು ।
	 ಈಳೆಯಾ ಹಿತ್ತಲಿರಲೇಸು ।
	 ಪತಿವ್ರತೆಯ ಬಾಳು ಲೇಸೆಂದ ಸರ್ವಜ್ಞ ॥
ಹಿರಿಯರ ಸನ್ಮಾನ
೧೦೨೯. ತಂದೆ-ತಾಯಿಗಳ ಘನ । ದಿಂದ ವಂದಿಸುವಂಗೆ ।
	 ಬಂದ ಕುತುಗಳು ಬಯಲಾಗಿ ಸ್ವರ್ಗವದು ।
	 ಮುಂದೆ ಬಂದಕ್ಕು ಸರ್ವಜ್ಞ ॥

೧೦೩೦. ಗುರುಗಳಿಗೆ ಹಿರಿಯರಿಗೆ । ಶಿರವಾಗಿ ಎಅರಗಿದರೆ \
	 ನರಸುರರು ಒಲಿದು ಸಿರಿ ಸುರಿಯೆ ಕೈಲಾಸ ।
	 ಕರತಲಾಮಲಕ ಸರ್ವಜ್ಞ ॥

೧೦೩೧. ಅವರೆಂದರವನು ತಾ । ನವರಂತೆ ಆಗುವನು ।
	 ಅವರೆನ್ನದವನು ಜಗದೊಳಗೆ ಬೆಂದಿರ್ದ ।
	 ಅವರೆಯಂತಕ್ಕು ಸರ್ವಜ್ಞ ॥

೧೦೩೨. ರಾಗ ಯೋಗಿಗೆ ಹೊಲ್ಲ । ಭೋಗ ರೋಗಿಗೆ ಹೊಲ್ಲ ।
	 ಓಗರವು ಎಣ್ಣೆ - ಉಣಹೊಲ್ಲ ಪರನಿಂದೆ ।
	 ಆಗಲುಂ ಹೊಲ್ಲ ಸರ್ವಜ್ಞ ॥
ಲೋಭದ ಮಹಿಮೆ
೧೦೩೩. ನುಡಿಸುವದಸತ್ಯವನು । ಕೆಡಿಸುವದು ಧರ್ಮವನು ।
	 ಹಿಡಿಸಿವದು ಕಟ್ಟಿ ಒಡಿಲ ತಾ ಲೋಭವಾ ।
	 ಹಡಣ ಕಾಣಯ್ಯ ಸರ್ವಜ್ಞ ॥

೧೦೩೪. ಒಡಹುಟ್ಟಿದವ ಭಾಗ । ದೊಡವೆಯನು ಕೇಳಿದರೆ ।
	 ಕೊಡದೆ ಕದನದಲಿ ದುಡಿಯುವರೆ ಅದನು ।
	 ತ-ನ್ನೊಡನೆ ಹೂಳು ಸರ್ವಜ್ಞ ॥

೧೦೩೫. ಲೋಭದಿಂ ಕೌರವನು । ಲಾಭವನು ಪಡೆದಿಹನೆ ? ।
	 ನಾಭಿಯಿಂ ಕೆಳಗೆ ಎರಡೂರ ಕೊಂದಾಗ ।
	 ಲಾಭ ಬಂದಿಹುದೆ ಸರ್ವಜ್ಞ ॥

೧೦೩೬. ಆಶೆಯತಿ ಕೇಡೆಂದು । ಹೇಸಿ ನಾಚುತಲಿಕ್ಕು ।
	 ಆಶೆಯನು ಬಿಡದೆ - ಅಭಿಮಾನಕ್ಕೋರಿದರೆ ।
	 ಘಾಸಿಯಾಗಿಕ್ಕು ಸರ್ವಜ್ಞ ॥
ಗರ್ವದ ಪರಿಣಾಮ
೧೦೩೭. ಉದ್ದುರುಟು ಮಾತಾಡಿ । ಇದುದನು ಹೋಗಾಡಿ ।
	 ಉದ್ದನಾ ಮರವ ತುದಿಗೇರಿ ತಲೆಯೂರಿ ।
	 ಬಿದ್ದು ಸತ್ತಂತೆ ಸರ್ವಜ್ಞ ॥

೧೦೩೮. ಅಂಧಕನು ನಿಂದಿರಲು । ಮುಂದೆ ಬಪ್ಪರ ಕಾಣ ।
	 ಬಂದರೆ ಬಾರೆಂದೆನರ್ಪ ಗರ್ವಿಯಾ ।
	 ದಂದುಗನೆ ಬೇಡ ಸರ್ವಜ್ಞ ॥
ವೈರದ ವಿವರ
೧೦೩೯.ಜಾತಿ-ಜಾತಿಗೆ ವೈರ । ನೀತಿ ಮೂರ್ಖಗೆ ವೈರ ।
	ಪಾತಕವು ವೈರ ಸುಜನರ್ಗೆ ಅರಿದರಿಗೆ
	ಏತರದು ವೈರ ಸರ್ವಜ್ಞ ॥
ನೀತಿಯ ನೆಲೆ
೧೦೪೦.ನೀತಿ ದೇಶದ ಮಧ್ಯೆ । ನೀತಿಯಾ ಮೆಯಿಹುದು 
	ಪಾತಕರಿಗಿಹುದು ಸೆರೆಮನೆಯು, ಅರಮನೆ ಪು ।
	ನೀತರಿಗೆಂದ ಸರ್ವಜ್ಞ ॥
ದ್ರವ್ಯದ ಮಹಿಮೆ 
೧೦೪೧. ಧನಕನಕವುಳ್ಳವನ-ದಿನಕರನ ವೋಲಕ್ಕು ।
	 ಧನಕನಕ ಹೋದ ಮರುದಿನವೆ ಹಾಳೂರು 
	 ಶುನಕನಂತಕ್ಕು ಸರ್ವಜ್ಞ ॥

೧೦೪೨. ನಾಲ್ಕು ಹಣವುಳ್ಳತನಕ । ಪಾಲ್ಕಿಯಲಿ ಮೆರೆದಿಕ್ಕು ।
	 ನಾಲ್ಕು ಹಣ ಹೋದ ಮರುದಿನವೆ,
	 ಕೋಳದಲಿ ಸಿಲ್ಕಿದಂತಕ್ಕು ಸರ್ವಜ್ಞ ॥

೧೦೪೩. ಎಂಟು ಹಣವುಳ್ಳ ತನಕ । ಬಂಟನಂತಿರುತಿಕ್ಕು ।
	 ಎಂಟು ಹಣ ಹೋದ ಮರುದಿನವೆ ಹುಳುತಿಂದ ।
	 ದಂತಿನಂತಕ್ಕು ಸರ್ವಜ್ಞ ॥

೧೦೪೪. ಸಿರಿಯಣ್ಣನುಳ್ಳತನಕ । ಹಿರಿಯಣ್ಣ ನೆನೆಸಿಪ್ಪ ।
	 ಸಿರಿಯಣ್ಣ ಹೋದ ಮರುದಿನವೆ ಹಿರಿಯಣ್ಣ ।
	 ನರಿಯಣ್ಣನೆಂದ ಸರ್ವಜ್ಞ ॥

೧೦೪೫. ಮಡದಿ ಮಕ್ಕಳ ಮಮತೆ । ಒಡಲೊಡನೆ ಯಿರುವತನಕ ।
	 ಓದಲೊಡವೆ ಹೋದ ಮರುದಿನವೆ ಅವರೆಲ್ಲ ।
	 ಕಡೆಗೆ ಸಾರುವರು ಸರ್ವಜ್ಞ ॥
ನೀತಿ
೧೦೪೬. ಮುನಿವಂಗೆ ಮುನಿಯದಿರು । ಕ್ನಿವಂಗೆ ಕಿನಿಯದಿರು 
	 ಮನ್ಸಿಜಾರಿಯನು ಮರೆಯದಿರು ಶಿವಕೃಪೆಯ ।
	 ಘನಕೆ ಘನವಕ್ಕು ಸರ್ವಜ್ಞ ॥

೧೦೪೭. ಮುನಿವರನನು ನೆನೆಯುತಿರು । ವಿನಯದಲಿ ನಡೆಯುತಿರು ।
	 ವನಿತೆಯರ್ ಬಲೆಗೆ ಸಿಲುಕದಿರು ಬಾಳಿಕೆಯ ।
	 ಮನಘನವು ಅಕ್ಕು ಸರ್ವಜ್ಞ ॥

೧೦೪೮. ಆರಯ್ದು ನುಡಿವವನು । ಆರಯ್ದು ನಡೆವವನು ।
	 ಆರಯ್ದು ಪದವ ನಿಡುವವನು ಲೋಕಕ್ಕೆ
	 ಆರಾಧ್ಯನಕ್ಕು ಸರ್ವಜ್ಞ ॥ 

೧೦೪೯. ಕೇಡನೊಬ್ಬಗೆ ಬಗೆದು । ಕೇಡು ತಪ್ಪದು ತನಗೆ ।
	 ನೋಡಿ ಕೆಂಡವನು ಹಿಡಿದೊಗೆದು ನೋವ ತಾ ।
	 ಬೇಲಿ ಬಗೆದಂತೆ ಸರ್ವಜ್ಞ ॥

೧೦೫೦. ಕಂಡುದನು ಆಡೆ ಭೂ । ಮಂಡಲವು ಮುನಿಯುವುದು ।
	 ಕೊಂಡಾಡುತಿಚ್ಚೆ ನುಡಿದಿಹರೆ ಜಗವೆಲ್ಲ 
	 ಮುಂಡಾಡುತಿಹುದು ಸರ್ವಜ್ಞ ॥

೧೦೫೧. ಕಂಡಂತೆ ಹೇಳಿದರೆ । ಕೆಂಡ ಉರಿಯುವುದು ಭೂ ।
	 ಮಂಡಲವ ಒಳಗೆ ಖಂಡಿತನಾಡುವರ ।
	 ಕಂಡಿಹುದೆ ಕಷ್ಟ ಸರ್ವಜ್ಞ ॥

೧೦೫೨. ಭಂಡಗಳ ನುಡುಯುವಾ । ದಿಂಡೆಯನು ಹಿಡತಂದು 
	 ಖಂಡಿಸಿರಿ ಎಂದವನೊಡನೆ ಹಿಂಡೆಲ್ಲ ।
	 ಬಂದಿಹುದು ನೋಡು ಸರ್ವಜ್ಞ ॥

೧೦೫೩. ಮೆಚ್ಚಿಸುವದೊಲಿದವರ । ಇಚ್ಛೆಯನೆ ನುಡಿಯುವದು
	 ತುಚ್ಛದಿಂದಾರ ನುಡಿದಿಹರೆ ಅವನಿರವು ।
	 ಬಿಚ್ಚುವಂತಕ್ಕು ಸರ್ವಜ್ಞ ॥
ಯಾರನ್ನೂ ನಂಬಬೇಡ
೧೦೫೪. ಎಂತಿರಲು ಪರರ ನೀ ಮುಂದೆ ನಂಬಲು ಬೇಡ ।
	 ಕುಂತಿ ಹೆಮ್ಮಗನ ಕೊಲಿಸಿದಳು ಮಾನವರ ।
	 ನೆಂತು ನಂಬುವದು ಸರ್ವಜ್ಞ ॥

೧೦೫೫. ಆರಾರ ನಂಬುವಡೆ । ಆರಯ್ದು ನಂಬುವದು ।
	 ನಾರಾಯಣನಿಂದ ಬಲಿಕೆಟ್ಟ ।
	 ಮಿಕ್ಕವರ ನಾರು ನಂಬುವರು ಸರ್ವಜ್ಞ ॥
ಎರಡನೆಯವರ ತಪ್ಪು ಹುಡುಕುವದು
೧೦೫೬. ತನ್ನ ದೋಷವ ನೂರು । ಬೆನ್ನ ಹಿಂದಕ್ಕಿಟ್ಟು ।
	 ಅನ್ಯರೊಂದಕ್ಕೆ ಹುಲಿಯಪ್ಪ ಮಾನವನು ।
	 ಕುನ್ನಿಯಲ್ಲೇನು ಸರ್ವಜ್ಞ ॥

ಪರೋಪಕಾರಿಗೆ ಪುನರ್ಜನ್ಮವಿಲ್ಲ 
೧೦೫೭. ಹೊಟ್ಟೆಗುಣ ಕೊಟ್ಟವಗೆ । ಸಿಟ್ಟು ನೆರೆ ಬಿಟ್ಟವಗೆ ।
	 ಬಟ್ಟೆಯಾ ಮುಳ್ಳು ಸುಟ್ಟವಗೆ, ಬಹು ಭವದ ।
	 ಹುಟ್ಟು ತಾನಿಲ್ಲ ಸರ್ವಜ್ಞ ॥
ಮನುಷ್ಯರಿಗೆ ಹೆದರಬೇಡ
೧೦೫೮. ನಿಶ್ಚಯವ ಬಿಡದೊಬ್ಬ । ರಿಚ್ಛೆಯಲಿ ನುಡಿಯದಿರು ।
	 ನೆಚ್ಚಿ ಒಂದೊರೊಳಗಿರದಿರು ಶಿವ
	 ನಿನ್ನ ಇಚ್ಛೆಯೊಳಗಿಹನು ಸರ್ವಜ್ಞ ॥
ಕೇಳಿದರೆ (ಮಾತ್ರ) ಬುದ್ಢಿ ಹೇಳು
೧೦೫೯. ಹೇಳಿದರೆ ಕೇಳಿದರೆ । ಕೇಳುವದು ಕರಲೇಸು ।
	 ಹೇಳಿದರೆ ಕೇಳಿದಿರುವವನ ಉಪ್ಪರಿಗೆ ।
	 ಕೇಳಗೂ ಕಷ್ಟ ಸರ್ವಜ್ಞ ॥
ಉತ್ತಮರು ಕೆಡಬಾರದು
೧೦೬೦. ಉತ್ತರೆಯು ಬರದಿಹರೆ । ಹೆತ್ತ ತಾಯ್ತೊರೆದರೆ ।
	 ಸತ್ಯವಂ ತಪ್ಪಿ ನಡೆದರೀಲೋಕ ವಿ ।
	 ನ್ನೆತ್ತ ಸೇರುವದು ಸರ್ವಜ್ಞ ॥

೧೦೬೧. ತತ್ವಮಸಿ ಹುಸಿದಿಹರೆ । ಮುತ್ತೊಡೆದು ಬೆಸದಿಹರೆ ।
	 ಉತ್ತಮರು ಕೆಡಕ ಕಲಿಸಿದರೆ ಲೋಕ ತಾ ।
	 ನೆತ್ತ ಸಾಗುವದು ಸರ್ವಜ್ಞ ॥

೧೦೬೨. ಸತ್ಯರೂ ಹುಸಿಯುವಡೆ । ಒತ್ತಿ ಹರಿದರೆ ಶರಧಿ ।
	 ಉತ್ತಮರು ಕೇಡಬಗೆದಿಹರೆ ಲೋಕವಿನ್ನೆತ್ತ।
	 ಸಾಗುವದು ಸರ್ವಜ್ಞ ॥
ಪಕ್ಷಪಾತ
೧೦೬೩. ಉಳ್ಳವನು ನುಡಿದಿಹರೆ । ಒಳ್ಳಿತೆಂದೆನ್ನುವರು ।
	 ಇಲ್ಲದಾ ಬಡವ ನುಡಿದಿಹರೆ । ಬಾಯೊಳಗೆ ।
	 ಹಳ್ಳು ಕಡಿದಂತೆ ಸರ್ವಜ್ಞ ॥

೧೦೬೪. ಇಲ್ಲದವನಹುದಾಡೆ । ಬಲ್ಲಂತೆ ಬೊಗಳುವರು ।
	 ಬಲ್ಲಿದನು ಅಲ್ಲ್ದಾಡಿದರೆ ಎಲ್ಲವರು ।
	 ಬೆಲ್ಲವೆಂಬವರು ಸರ್ವಜ್ಞ ॥

೧೦೬೫. ಬಡವನಿದ್ದುದನಾಡೆ । ಕಡೆಗೆ ಪೋಗೆಂಬುವರು ।
	 ಒಡವೆಯುಳ್ಳವರು ಸುಡುಗಾಡೆ ನುಡಿದರೂ ।
	 ಪೊಡವಿಯೊಳಗಧಿಕ ಸರ್ವಜ್ಞ ॥

೧೦೬೬. ಬಲ್ಲಿದನು ನುಡಿದಿಹರೆ । ಬೆಲ್ಲವನು ಮೆದ್ದಂತೆ ।
	 ಇಲ್ಲದಾ ಬಡವ ನುಡಿದಿಹರೆ - ಬಾಯಿಂದ ।
	 ಜೊಲ್ಲು ಬಿದ್ದಂತೆ ಸರ್ವಜ್ಞ ॥

೧೦೬೭. ಬಡವನೊಳ್ಳೆಯ ಮಾತು । ನುಡಿದರಲ್ಲೆಂಬುವರು ।
	 ಪೊಡವೀಶ ಜಳ್ಳ - ಜೊಲ್ಲೊಡನೆ ನುಡಿದರೂ ।
	 ಕಡುಮೆಚ್ಚುತಿಹರು ಸರ್ವಜ್ಞ ॥

೧೦೬೮. ಮಡಿಯನುಟ್ಟವರನ್ನು । ನುಡಿಸುವರು ವಿನಯದಲಿ ।
	 ಒಡಹುಟ್ಟಿದವರು ಅರುವೆಯನು ಉಟ್ಟಿಹರೆ ।
	 ನುಡಿಸ ನಾಚುವರು ಸರ್ವಜ್ಞ ॥

ಕರ್ಮದ ಮರ್ಮ
೧೦೬೯. ತಪ್ಪು ಮಾಡಿದ ಮನುಜ । ಗೊಪ್ಪುವದು ಸಂಕೋಲೆ ।
	 ತಪ್ಪು ಮಾಡದಲೆ ಸೆರೆಯು ಸಂಕೋಲೆಗಳು ।
	 ಬಪ್ಪವನೆ ಪಾಪಿ ಸರ್ವಜ್ಞ ॥

೧೦೭೦. ತಪ್ಪು ಮಾಡಿದವಂಗೆ । 
	 ಒಪ್ಪುವದು ಸಂಕೋಲೆ ತಪ್ಪಿಲ್ಲದಿಪ್ಪ ।
	 ಶರಣಂಗೆ ಸಂಕೋಲೆ ಬಪ್ಪುದದೇಕೆ ಸರ್ವಜ್ಞ ॥
ವಿವಿಧ ವಿಷಯಗಳು
೧೦೭೧. ಹೆಣ್ಣನ್ನು ಹೊನ್ನನ್ನು । ಹಣ್ಣಾದ ಮರಗಳನ್ನು ।
	 ಕಣ್ಣಿಂದ ಕಂಡು ಮನದಲ್ಲಿ ಬಯಸದಿಹ ।
	 ಅಣ್ಣಗಳು ಯಾರು ಸರ್ವಜ್ಞ ॥

೧೦೭೨. ಯತಿಯ ತಪಗಳು ಕೆಡುಗು । ಪತಿಯ ಪ್ರೇಮವು ಕೆಡುಗು ।
	 ಸ್ಥಿತಿವಂತರು ಮತಿ ಕೆಡಗು ।
	 ರತಿದೇವಿ ಶ್ರುತಿಯ ಕೇಳಿದರೆ ಸರ್ವಜ್ಞ ॥

೧೦೭೩. ವಚನದೊಳಗೆಲ್ಲವರು । ಶುಚಿವೀರ-ಸಾಧುಗಳು ।
	 ಕುಚ ಹೇಮಶಸ್ತ್ರ ಸೋಂಕಿದರೆ ಲೋಕದೊಳ।
	 ಗಚಲದವರಾರು । ಸರ್ವಜ್ಞ ॥ 

೧೦೭೪. ಎಲ್ಲವರು ಹಿರಿಯವರು । ಬಲ್ಲವರು ಗುರು ಅವರು
	 ನಲ್ಲಳುರೆ ಮುಂದೆ ಸುಳಿದರೇ ಲೋಕದೊಳ ।
	 ಗೊಲ್ಲದವರಾರು ಸರ್ವಜ್ಞ ॥
ಹೊನ್ನು (ಬಂಗಾರ ,ದ್ರವ್ಯ)
೧೦೭೫. ಯತಿಗಳಿಗೆ ಮತೆಗೆಡಗು । ಸತಿಯ ಸಜ್ಜನ ಕೆಡಗು ।
	 ಮತಿವಂತರೆಲ್ಲ ಭ್ರಮೆಗೊಳಗು ಹೊನ್ನ
	 ಶ್ರುತಿಯ ಕೇಳಿದರೆ ಸರ್ವಜ್ಞ ॥

೧೦೭೬. ಚಲುವನಾದಡದೇನು ? । ಬಲವಂತನಹದೇನು ?।
	 ಕುಲವೀರನಾಗಿ ಫಲವೇನು ? ಮಹಲಕ್ಷ್ಮಿ ।
	 ತೊಲಗಿ ಹೋಗಿರಲು । ಸರ್ವಜ್ಞ ॥

೧೦೭೭. ಲೋಕಕ್ಕವಶ್ಯ ತಾ । ನೇಕಾಕಿ ಹೊಂಬೇರು ।
	 ನಾಕಕದು ಬೇರು ಪುಣ್ಯದಿಂದೆಲ್ಲದೊಡೆ ।
	 ಪಾತಕಕೆ ಬೇರು ಸರ್ವಜ್ಞ ॥
ಮಣ್ಣು
೧೦೭೮. ಹೆಣ್ಣಿಗೂ ಮಣ್ಣಿಗೂ ಉಣ್ಣುದುರಿಯಲುಬೇಡ ।
	 ಹೆಣ್ಣಿನಿಂದ ಕೆಟ್ಟ ದಶಕಂಠ ಕೌರವನು ।
	 ಮಣ್ಣಿಂದ ಕೆಡನೆ ಸರ್ವಜ್ಞ ॥

೧೦೭೯. ಮಣ್ಣು ಬಿಟ್ಟವ ದೈವ । ಹೊನ್ನು ಬಿಟ್ಟವ ದೈವ ।
	 ಹೆಣ್ಣ ನೆರೆ ಬಿಟ್ಟರವ ದೈವ ಜಗಕೆ ಮು ।
	 ಕ್ಕಣ್ಣನೇ ದೈವ ಸರ್ವಜ್ಞ ॥
ಕಣ್ಣು
೧೦೮೦. ಕಣ್ಣಿನಿಂದಲೆ ಪುಣ್ಯ । ಕಣ್ಣಿನಿಂದಲೆ ಪಾಪ ।
	 ಕಣ್ಣಿನಿಂದಿಹವು ಪರವಕ್ಕು ಲೋಕಕ್ಕೆ ।
	 ಕಣ್ಣೇ ಕಾರಣವು ಸರ್ವಜ್ಞ ॥

೧೦೮೧. ಕಣ್ಣು ಸಣ್ಣದು ತಾನು । ಹಣ್ಣದಿಹುದೊಂದಿಲ್ಲ ।
	 ತಣ್ಣಗಿಹ ಮನವ, ನುರಿಸುವದು ಇದನು ಕೊಕೊಂ ।
	 ದಣ್ಣಗಳು ಆರು ಸರ್ವಜ್ಞ ॥

೧೦೮೨. ಕಣ್ಣು-ನಾಲಿಗೆ-ಮನವು । ತನ್ನದೆಂದೆನಬೇಡ ।
	 ಅನ್ಯರೇ ಕೊಂದರೆನಬೇಡ, ಇವು ಮೂರೂ ।
	 ತನ್ನ ಕೊಲ್ಲುವದು ಸರ್ವಜ್ಞ ॥
ನಾಲಿಗೆ
೧೦೮೩. ಮೆಟ್ಟಿರಿಯೆ ಜೀವ ತಾ । ತಟ್ಟನೇ ಹೋಗುವದು ।
	 ಕೆಟ್ಟನಾಲಿಗೆಯಲಿರಿಹರೆ ಕಾದು ನೀ ।
	 ರಟ್ಟಿ ಹೋದಂತೆ ಸರ್ವಜ್ಞ ॥

೧೦೮೪. ಗಂಹರವ ಹೊಕ್ಕಿರ್ದು । ಸಿಂಹಗಳ ನಿರಿಯುವದು ।
	 ಸಂಹರವ ಮಾಡಿ ತರಿಯುವದು ದುರ್ಜನರ ।
	 ಜಿಹ್ವೆ ಕೇಳೆಂದ ಸರ್ವಜ್ಞ ॥

೧೦೮೫. ಕತ್ತಿಲಾದಾ ಘಾಯಾ । ಮುತ್ತಿದರೆ ಮಾಯುವದು ।
	 ಸುತ್ತಲಾಡುತಿಹ ಜಿಹ್ವೆಯಾಗಾಯ ।
	 ಸತ್ತು ಮಾಯವದೆ ಸರ್ವಜ್ಞ ॥
ಮಾದಕ ಪದರ್ಥಗಳು (೧) ಸಾರಾಯಿ (ಸೆರೆ)
೧೦೮೬. ಸುರೆಯ ಸೇವಿಸುವವನ । ಸುರಿಗೆಯನು ಪಿಡಿದವನ ।
	 ದೊರೆಯೊಲುಮೆಗಾಗಿ ಹಣಗುವನಕಾಯುವದು ।
	 ಸೊರಗಿಸಾಯುವವು ಸರ್ವಜ್ಞ ॥

೧೦೮೭. ಸುರೆಯ ಸೇವಿಸುವಂಗೆ । ಸಿರಿಗರ್ವಪಚನಂಗೆ ।
	 ದೊರೆಯಲ್ಲಿ ತೇಜ ಪಡೆದಂಗೆ ಶಿರವಿಹುದು ।
	 ಸ್ಥಿರವಲ್ಲ ನೋಡ ಸರ್ವಜ್ಞ ॥

೧೦೮೮. ಸುರೆಯ ಹಿರಿದುಂಡವಗೆ । ಉರಿಯಮೇಲಾಡುವಗೆ ।
	 ಹರಿಯುವಾ ಹಾವ ಪರನಾರಿ ಪಿಡಿದಂಗೆ ।
	 ಮರಣ ಕಾಣಯ್ಯ ಸರ್ವಜ್ಞ ॥

೧೦೮೯. ಮದ್ಯಪಾನವ ಮಾಡಿ । ಇದ್ದುದೆಲ್ಲವ ನೀಡಿ ।
	 ಬಿದ್ದು ಬರುವವನ ಸದ್ದಡಗಿ ಸಂತಾನ ।
	 ವೆದ್ದು ಹೋಗುವದು ಸರ್ವಜ್ಞ ॥
(೨) ಭಂಗಿ
೧೦೯೦. ಅಂಗಿ ಅರಿವೆಯ ಮಾರಿ । ಭಂಗಿಯನು ತಾ ಸೇದಿ ।
	 ಮಂಗನಂದದಲಿ ಕುಣಿವಾತ ಭವ - ಭವದಿ ।
	 ಭಂಗಗೊಳುತಿಹನು ಸರ್ವಜ್ಞ ॥

೧೦೯೧. ಭಂಗಿಯನು ಸೇದುವನ । ಭಂಗವನು ಏನೆಂಬೆ ।
	 ಭಂಗಿಯಾಗುಂಗು ತಲೆಗೇರಕಾಡುವಾ।
	 ಮಂಗನಂತಿಹನು ಸರ್ವಜ್ಞ ॥
(೩) ತಂಬಾಕ
೧೦೯೨. ಹೊಗೆಯ ತಿಂಬುವದೊಂದು । ಸುಗುಣವೆಂದೆನಬೇಡ ।
	 ಹೊಗೆಯ ಕುಡಿದೆಲೆಯನಗಿದ ಬಾಯ್ಸಿಂದಿಯಾ ।
	 ಲಗಳೆಯಂತಿಹುದು ಸರ್ವಜ್ಞ ॥
(೪) ಅಪೂ
೧೦೯೩. ಮದ್ದ ಮೆದ್ದವನು ಪ್ರಬುದ್ಧ ನೆಂದೆನಬೇಡ ।
	 ಮದ್ದು ಸಂಕಟವನೆಬ್ಬಿಸಲು ಹೆಡೆಕತ್ತ ।
	 ಗುದ್ದಿ ಕೊಳುತಿಹುದು । ಸರ್ವಜ್ಞ ॥
(೫) ತಾಂಬೂಲ
೧೦೯೪. ಗಾಳಿ-ಧೂಳಿಯ ದಿನಕೆ । ಮಾಳೀಗೆ ಮನೆ ಲೇಸು ।
	 ಹೊಳೀಗೆಯು ತುಪ್ಪ ಉಣಲೇಸು ಬಾಯಿಗಂ ।
	 ವೀಳ್ಯವೇ ಲೇಸು ಸರ್ವಜ್ಞ ॥

೧೦೯೫. ವೀಳ್ಯವಿಲ್ಲದ ಬಾಯಿ । ಕೂಳು ಇಲ್ಲದ ನಾಯಿ ।
	 ಬಾಳೆಗಳು ಇಲ್ಲದೆಲೆದೋಟ ಪಾತರದ ।
	 ಮೇಳ ಮುರಿದಂತೆ ಸರ್ವಜ್ಞ ॥

೧೦೯೬. ಅಡಿಕೆ ಹಾಕಿದ ಬಾಯಿ । ಕಟಕವಿಲ್ಲದ ಕಿವಿಯು ।
	 ಒಣಕಿನಾ ಮನಿಯು, ನಿಲುಕದಾ ಫಲಕೆ ನರಿ, 
	 ಮಿಡುಕಿ ಸತ್ತಂತೆ ಸರ್ವಜ್ಞ ॥
ನೆತ್ತ (ಲೆತ್ತ )
೧೦೯೭. ನೆತ್ತವೂ ಕುತ್ತವೂ । ಹತ್ತದೊಡೆ ಅಳವಲ್ಲ ।
	 ಕುತ್ತದಿಂ ದೇಹ ಬಡದಕ್ಕು ನತ್ತದಿಂ ।
	 ಅತ್ತಲೇ ಅಕ್ಕು ಸರ್ವಜ್ಞ ॥

೧೦೯೮. ಆಡಿ ನಳ ಕೆಟ್ಟ ಮ । ತ್ತಾಡಿ ಧರ್ಮಜ ಕೆಟ್ಟ ।
	 ಕೂಡಿದ ನಾಲ್ವರೂ ತಿರಿದುಂಡರೆ, ನೆತ್ತವ ।
	 ನಾಡಬೇಡೆಂಬ ಸರ್ವಜ್ಞ ॥

೧೦೯೯. ಆಡುವವ ಕೆಟ್ಟಂತೆ । ನೋಡಹೋದವ ಕೆಟ್ಟ ।
	 ಬೇದುವವ ಕೆಟ್ಟ, ನೆತ್ತವನು ಆಡುವನ ।
	 ಕೂಡಿದವ ಕೆಟ್ಟ ಸರ್ವಜ್ಞ ॥

೧೧೦೦. ನೆತ್ತವದು ಒಳಿತೆಂದು । ನಿತ್ಯವಾಡಲು ಬೇಡ ।
	 ನೆತ್ತದಿಂ ಕುತ್ತ್ - ಮುತ್ತಲೂ ಸುತ್ತೆಲ್ಲ ।
	 ಕತ್ತಲಾಗಿಹುದು ಸರ್ವಜ್ಞ ॥
ಹೇವ
೧೧೦೧. ಜಾವಕ್ಕೆ ಬದುಕುವರೆ । ಹೇವಕ್ಕೆ ಬದುಕುವದು ।
	 ರಾವಣನು ಸತ್ತನೆನಬೇಡ, ರಾಮಂಗೆ ।
	 ಹೇವ ಬಿಟ್ಟಿಹುದು ಸರ್ವಜ್ಞ ॥

೧೧೦೨. ಬಲವಂತ ನಾನೆಂದು । ಬಲುದು ಹೋರಲು ಬೇಡ ।
	 ಬಲವಂತ ವಾಲಿ ಶ್ರೀರಾಮನೊಡನಾಡಿ ।
	 ಛಲದಿಂದ ಕೆಟ್ಟ ಸರ್ವಜ್ಞ ॥
ಲಂಚ
೧೧೦೩. ಸೊಡರು ಲಂಚವ ಕೊಂಡು । ಕೊಡುವ ದೊಪ್ಪಚಿ ಬೆಳಗ ।
	 ಪೊಡವಿಗಂ ಸೂರ್ಯ ಬೆಳಗೀವೋಲ್ಲಂಚವನು ।
	 ಹಿಡಿಯದವ ಧರ್ಮಿ ಸರ್ವಜ್ಞ ॥
ವಿದ್ಯೆ
೧೧೦೪. ವಿದ್ಯೆಕ್ಕೆ ಕಡೆಯಿಲ್ಲ । ಬುದ್ಧಿಗೆ ಬೆಲೆಯೆಯಿಲ್ಲ ।
	 ಛಿದ್ರಿಸುವವಗೆ ಗತಿಯಿಲ್ಲ ಮರಣಕ್ಕೆ ।
	 ಮದ್ದುಗಳೆ ಇಲ್ಲ ಸರ್ವಜ್ಞ ॥

೧೧೦೫. ವಿದ್ಯೆವುಳ್ಳನ ಮುಖವು । ಮುದ್ದು ಬರುವಂತಿಕ್ಕು ।
	 ವಿದ್ಯವಿಲ್ಲದನ ಬರಿಮುಖವು ಹಾಳೂರ ।
	 ಹದ್ದಿನಂತಿಕ್ಕು ಸರ್ವಜ್ಞ ॥

೧೧೦೬. ಬುದ್ಧಿವಂತರ ಕೂಟ। ವೆದ್ದು ಗಾರುವ ಹದ್ದು ।
	 ಬುದ್ಧಿಯಿಲ್ಲದವರ ನೆರೆ ಕೂಟ ಕೊರಳೊಳಗೆ ।
	 ಗುದ್ದಿಯಿದ್ದಂತೆ ಸರ್ವಜ್ಞ ॥

೧೧೦೭. ಒಡಲನಡಗಿದ ವಿದ್ಯೆ ।
	 ನಡೆದೊಡನೆ ಬರುತಿರಲು ಒಡಹುಟ್ಟಿದವರು 
	 ಕಳ್ಳರೂ ನೃಪರೆಂದು ಪಡೆಯರದನೆಂದ । ಸರ್ವಜ್ಞ ॥

೧೧೦೮. ವಿದ್ಯೆಯೇ ತಾಯ್ತಂದೆ । ಬುದ್ಧಿಯೇ ಸೋದರನು ।
	 ಆಭ್ವಾನ ಕಾದರವ ನೆಂಟ, ಸುಖದಿ ತಾ ।
	 ನಿದ್ದುದೇ ರಾಜ್ಯ ಸರ್ವಜ್ಞ ॥

೧೧೦೯. ಇದ್ದಲ್ಲಿ ಸಲುವ ಹೋ । ಗಿದ್ದಲ್ಲಿಯೂ ಸಲುವ ।
	 ವಿದ್ಯೆಯನ್ನು ಬಲ್ಲ ಬಡವನಾ ಗಿರಿಯ ।
	 ಮೇಲಿರಲು ಸಲುವ ಸರ್ವಜ್ಞ ॥
ಉದ್ಯೋಗ
೧೧೧೦. ಉದ್ಯೋಗವುಳ್ಳವನ । ಹೊದ್ದುವದು ಸಿರಿ ಬಂದು ।
	 ಉದ್ಯೋಗವಿಲ್ಲದಿರುವವನು ಕರದೊಳಗೆ ।
	 ಇದ್ದರೂ ಪೋಕು ಸರ್ವಜ್ಞ ॥

೧೧೧೧. ಉದ್ಯೋಗವಿಲ್ಲದವನು । ಬಿದ್ದಲ್ಲಿ ಬಿದ್ದಿರನು ।
	 ಹದ್ದುನೆವನವನು ಈಡಾಡಿ ಹಾವ ಕೊಂ ।
	 ಡೆದ್ದು ಹೋದಂತೆ ಸರ್ವಜ್ಞ ॥

೧೧೧೨. ಆಲಸಿಕೆಯಲಿರುವಂಗೆ ಕ್ಲಸಲಂಬಲಿಯಿಲ್ಲ ।
	 ಕೆಲಸಕ್ಕೆ ಆಲಸದಿರುವಂಗೆ ಬೇರಿಂದ ।
	 ಹಲಸು ಕಾತಂತೆ ಸರ್ವಜ್ಞ ॥

೧೧೧೩. ತಿಂದು ಗಾದಿಯ ಮೇಲೆ । ಬಂದು ಗುರು ಬೀಳ್ವಂತೆ ।
	 ಬಂದ ಪ್ರಸ್ತಾಪಕೊದಗಿದರೆ ಆ ಮಾತು ।
	 ನೊಂದೆನ್ನಬಹುದೆ ಸರ್ವಜ್ಞ ॥

೧೧೧೪. ಪ್ರಸ್ತಾಪಕೊದಗಿದಾ । ಕತ್ತೆ ಮದಕರಿಯಂತೆ ।
	 ಪ್ರಸ್ತಾಪತೀರ್ಥ ಮರುದಿನಾ ಮದಕರಿಯು ।
	 ಕತ್ತೆಯಂತಕ್ಕು ಸರ್ವಜ್ಞ ॥

೧೧೧೫. ಪ್ರಸ್ತಕ್ಕೆ ನುಡಿದಿಹರೆ । ಬೆಸ್ತಂತೆ ಇರಬೇಕು ।
	 ಪ್ರಸ್ತವನು ತಪ್ಪಿ ನುಡಿದಿಹರೆ ।
	 ನಡುಬೆನ್ನಿ ನಸ್ತಿ ಮುರಿದಂತೆ ಸರ್ವಜ್ಞ ॥

೧೧೧೬. ಪ್ರಸ್ತಕ್ಕಿಲ್ಲದ ಮಾತು । ಹತ್ತು ಸಾವಿರ ವ್ಯರ್ಥ ।
	 ಕತ್ತೆ ಕೂಗಿದರೆ ಫಲವುಂಟು, ಬರಿಮಾತು ।
	 ಕತ್ತೆಗಿಂ ಕಷ್ಟ ಸರ್ವಜ್ಞ ॥

೧೧೧೭. ಹೊಲಬನರಿಯದ ಮಾತು । ತಲೆ ಬೇನೆ ಎನಬೇಡ ।
	 ಹೊಲಬನರಿತೊಂದ ನುಡಿದಿಹರೆ ಅದು ದಿವ್ಯ ।
	 ಫಲ ಪಕ್ವದಂತೆ ಸರ್ವಜ್ಞ ॥
ಮಾತಿನ ಮರ್ಮ
೧೧೧೮. ಮಾತು ಮಾತಿಗೆ ತಕ್ಕ । ಮಾತು ಕೋಟಿಗಳುಂಟು ।
	 ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ ।
	 ಸೋತವನೆ ಜಾಣ ಸರ್ವಜ್ಞ ॥

೧೧೧೯. ಮಾತಿನಿಂ ನಗೆ-ನುಡಿಯು । ಮಾತಿನಿಂ ಹಗೆ ಕೊಲೆಯು ।
	 ಮಾತಿನಿಂ ಸರ್ವ ಸಂಪದವು ಲೋಕಕ್ಕೆ ।
	 ಮಾತೆ ಮಾಣಿಕವು ಸರ್ವಜ್ಞ ॥

೧೧೨೦. ಮಾತು ಬಲ್ಲಾತಂಗೆ । ಯಾತವದು ಸುರಿದಂತೆ ।
	 ಮಾತಾಡಲರಿಯದಾತಂಗೆ ಬರಿ ಯಾತ ।
	 ನೇತಾಡಿದಂತೆ ಸರ್ವಜ್ಞ ॥

೧೧೨೧. ಮಾತು ಬಲ್ಲಹ ತಾನು । ಸೋತುಹೋಹುದ ಲೇಸು ।
	 ಮಾತಿಂಗೆ ಮಾತು ಮಥಿಸಲ್ಕೆ ವಿಧಿ ಬಂದು ।
	 ಆತುಕೊಂಡಿಹುದು ಸರ್ವಜ್ಞ ॥

೧೧೨೨. ರಸಿಕನಾಡಿದ ಮಾತು । ಶಶಿಯುದಿಸಿ ಬಂದಂತೆ ।
	 ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂರ್ದಸಿಯು
	 ಬಡಿದಂತೆ ಸರ್ವಜ್ಞ ॥

೧೧೨೩. ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ ।
	 ಹೊತ್ತಾಗಿ ನುಡಿದ ಮಾತು ಕೈಜಾರಿದಾ ।
	 ಮುತ್ತಿನಂತಿಹುದು ಸರ್ವಜ್ಞ ॥

೧೧೨೪. ಕಾದ ಕಬ್ಬುನವು ತಾ । ಹೊಯ್ದೊಡನೆ ಕೂಡುವದು ।
	 ಹೋದಲ್ಲಿ ಮಾತು ಮರೆದರಾ ಕಬ್ಬುನವು ।
	 ಕಾದಾರಿದಂತೆ ಸರ್ವಜ್ಞ ॥

೧೧೨೫. ಮಾತು ಬಲ್ಲಾತಂಗೆ । ಮಾತೊಂದು ಮಾಣಿಕವು ।
	 ಮಾತ ತಾನರಿಯದ ಅಧಮಗೆ ಮಾಣಿಕವು ।
	 ತೂತು ಬಿದ್ದಂತೆ ಸರ್ವಜ್ಞ ॥

೧೧೨೬. ಮಾತು ಮಾಣಿಕ ಮುತ್ತು ।
	 ಮಾತೆ ತಾ ಸದನವು । ಮಾತಾಡಿದಂತೆ 
	 ನಡೆದಾತ ಜಗವನ್ನು ಕೂತಲ್ಲಿ ಆಳ್ವ ಸರ್ವಜ್ಞ ॥

೧೧೨೭. ಮಾತಿಂಗೆ ಮಾತುಗಳು । ಓತು ಸಾಸಿರವುಂಟು ।
	 ಮಾತಾಡಿದಂತೆ ನಡೆದರಾ ಕೈಲಾಸ ।
	 ಕಾತನೇ ಒಡೆಯ ಸರ್ವಜ್ಞ ॥
ಬೇಸಾಯ 
೧೧೨೮. ಕೋಟಿ ವಿದ್ಯೆಗಳಲ್ಲಿ । ಮೇಟಿ ವಿದ್ಯೆಯೇ ಮೇಲು ।
	 ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ ।
	 ದಾಟವೇ ಕೆಡಕು । ಸರ್ವಜ್ಞ ॥

೧೧೨೯. ಎತ್ತೆಮ್ಮೆ ಹೂಡುವದು । ಉತ್ತೊಮ್ಮೆ ಹರಗುವದು ।
	 ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು ।
	 ಎತ್ತುಗೈಯುದ್ದ ಸರ್ವಜ್ಞ ॥

೧೧೩೦. ಉತ್ತೊಮ್ಮೆ ಹರಗದಲೆ । ಬಿತ್ತೊಮ್ಮೆ ನೋಡದಲೆ 
	 ಹೊತ್ತೇರಿ ಹೊಲಕೆ ಹೋಗಿಹರೆ ಅವ ತನ್ನ ।
	 ನೆತ್ತರವ ಸುಡುವ ಸರ್ವಜ್ಞ ॥

೧೧೩೧. ನಲ್ಲೆತ್ತು ಬಂಡಿ ಬಲ । ವಿಲ್ಲದಾ ಆರಂಭ ।
	 ಕಲ್ಲು ಕಳೆಗಳನು ಬಿಟ್ಟವನು ಹೊಲದೊಳಗೆ ।
	 ಹುಲ್ಲನೇ ಬೆಳೆವ ಸರ್ವಜ್ಞ ॥

೧೧೩೨. ಹರಗದ ಎತ್ತಾಗಿ । ಬರಡದ ಹಯನಾಗಿ ।
	 ಹರಟೆ ಹೊಡೆಯುವಾ ಮಗನಾಗಿ ಹೊಲದಲ್ಲಿ ।
	 ಕರಡವೇ ಬೆಳಗು ಸರ್ವಜ್ಞ ॥

೧೧೩೩. ದಂಡು ಇಲ್ಲದ ಅರಸು । ಕುಂಡವಿಲ್ಲದ ಹೋಮ ।
	 ಬಂಡಿಯಿಲ್ಲದನ ಬೇಸಾಯ ತಲೆಹೋದ ।
	 ಮುಡದಂತಿಕ್ಕು ಸರ್ವಜ್ಞ ॥

೧೧೩೪. ಹದ ಬೆದೆಯಲಾರಂಭ । ಕದನಲಿ ಕೂರಂಬ ।
	 ನದಿ ಹಾಯುವಲಿ ಹರಗೋಲ ಮರೆತು ।
	 ವಿಧಿಯ ಬೈದರೇನು ಫಲ ಸರ್ವಜ್ಞ ॥

೧೧೩೫. ಬೆಕ್ಕು ಮನೆಯೊಳು ಲೇಸು । ಮುಕ್ಕು ಕಲ್ಲಿಗೆ ಲೇಸು ।
	 ನಕ್ಕು ನಗಿಸುವಾ ನುಡಿಲೇಸು ಊರಿಂಗೆ ।
	 ಒಕ್ಕಲಿಗ ಲೇಸು ಸರ್ವಜ್ಞ ॥

೧೧೩೬. ತರುಕರವು ಇರದೂರು । ನರಕಭಾಜನಮಕ್ಕು ।
	 ತರುಕರುಂಟಾದರುಣಲುಂಟು, ಜಗವೆಲ್ಲ ।
	 ತರುಕರವೇ ದೈವ ಸರ್ವಜ್ಞ ॥
ಬಡತನ
೧೧೩೭. ತುಂಬಿದಾ ಕೆರೆ ಭಾವಿ । ತುಂಬಿದಂತಿರುವದೇ ।
	 ನಂಬಿರಲು ಬೇಡ ಲಕ್ಶ್ಮಿಯನು ಬಡತನವು ।
	 ಬೆಂಬಿಡದೆ ಬಹುದು ಸರ್ವಜ್ಞ ॥

೧೧೩೮. ಶೀತದಲ್ಲಿ ಹಿಮ ಹೊಲ್ಲ । ಕೀತಿರುವ ವ್ರಣ ಹೊಲ್ಲ ।
	 ಪಾತಕನ ನೆರೆಯಲಿರ ಹೊಲ್ಲ, ಬಡವ ತಾ ।
	 ಕೂತಿರಲು ಹೊಲ್ಲ ಸರ್ವಜ್ಞ ॥

೧೧೩೯. ಆಡಿಗಡಿಕೆಯ ಹೊಲ್ಲ । ಗೋಡೆ ಬಿರುಕಲು ಹೊಲ್ಲ ।
	 ಒಡಕಿನಾ ಮನೆಯೊಳಿರ ಹೊಲ್ಲ ಬಡವಂಗೆ ।
	 ಸಿಡುಕು ತಾ ಹೊಲ್ಲ ಸರ್ವಜ್ಞ ॥

೧೧೪೦. ಆಡಿಗಟ್ಟಣವೇಕೆ । ಬೋಡಂಗೆ ಕಬ್ಬೇಕೆ ।
	 ಕೋಡಗನ ಕೈಯ ಬಳೆಯೇಕೆ ಬಡವಂಗೆ ।
	 ನಾಡಮಾತೇಕೆ ಸರ್ವಜ್ಞ ॥

೧೧೪೧. ಆಡಿ ಅಳುಕಲು ಹೊಲ್ಲ । ಕೂಡಿ ತಪ್ಪಲು ಹೊಲ್ಲ ।
	 ಕಾಡುವಾ ನೆಂಟ ಬರಹೊಲ್ಲ, ಧನಹೀನ ।
	 ನಾಡುವದೆ ಹೊಲ್ಲ ಸರ್ವಜ್ಞ ॥

೧೧೪೨. ಕಳ್ಳಿ ನಾರಿಗೆ ಹೊಲ್ಲ । ಮುಳ್ಳು ಕಾಲಿಗೆ ಹೊಲ್ಲ ।
	 ಕೊಳ್ಳಿ ಬೆಳಕಿನೊಳು ಉಣಹೊಲ್ಲ, ಬಡವ ತಾ ।
	 ಸುಳ್ಳಾಡ ಹೊಲ್ಲ ಸರ್ವಜ್ಞ ॥

೧೧೪೩. ಉದ್ದು ಮದ್ದಿಗೆ ಹೊಲ್ಲ । ನಿದ್ದೆ ಯೋಗಿಗೆ ಹೊಲ್ಲ ।
	 ಬಿದ್ದಿರಲು ಹೊಲ್ಲ ಉದ್ಯೋಗಿ ಬಡವಂಗೆ ।
	 ಗುದ್ದಾಟ ಹೊಲ್ಲ ಸರ್ವಜ್ಞ ॥

೧೧೪೪. ಸಾಲ ಬಡವಗೆ ಹೊಲ್ಲ । ಸೋಲು ಜೂಜಿಗೆ ಹೊಲ್ಲ ।
	 ಬಾಲರು ಬೆನ್ನಲಿರ ಹೊಲ್ಲ ಬಡವಂಗೆ ।
	 ಓಲಗವೇ ಹೊಲ್ಲ ಸರ್ವಜ್ಞ ॥

೧೧೪೫. ಬಡವ ಬಟ್ಟೆಯ ಹೋಗ । ಲೊಡನೆ ಸಂಗಡಿಗೇಕೆ ?
	 ಬಡತನವು ಎಂಬ ಹುಲಿಗೂಡಿ ಬರುವಾಗ ।
	 ನುಡಿಸುವವರಿಲ್ಲ ಸರ್ವಜ್ಞ ॥

೧೧೪೬. ಸಾಲವನು ತರುವಾಗ । ಹಾಲು ಬೋನುಂಡಂತೆ ।
	 ಸಾಲಿಗನು ಬಂದು ಕೇಳಿದರೆ
	 ಕುಂಡಿಗೆ ಚೇಳು ಕಡಿದಂತೆ ಸರ್ವಜ್ಞ ॥

೧೧೪೭. ಸಾಲವನು ತರುವಾಗ । ಹಾಲು - ಹಣ್ಣುಂಬಂತೆ ।
	 ಸಾಲಿಗನು ಬಂದು ಎಳೆದಾಗ ಕಿಬ್ಬದಿಯ ।
	 ಕೀಲು ಮುರಿದಂತೆ ಸರ್ವಜ್ಞ ॥

೧೧೪೮. ನೂರು ಹಣ ಕೊಡುವನಕ । ಮೀರಿ ವಿನಯದಲಿಪ್ಪ ।
	 ನೂರರೋಳ್ಮೂರ ಕೇಳಿದರೆ ಸಾಲಿಗನು ।
	 ತೂರುಣನು ಮಣ್ಣು ಸರ್ವಜ್ಞ ॥

೧೧೪೯. ಕೊಂಬುವನು ಸಾಲವನು । ಉಂಬುವನು ಲೇಸಾಗಿ ।
	 ಬೆಂಬಲವ ಪಿಡಿದು - ಬಂದರಾದೇಗುಲದ ।
	 ಕಂಬದಂತಿಹನು ಸರ್ವಜ್ಞ ॥

೧೧೫೦. ಬೋರಾಡಿ ಸಾಲವನು । ಹಾರ್‍ಆಡಿ ಒಯ್ಯುವನು ।
	 ಈರಾಡಿ ಬಂದು ಕೇಳಿದರೆ ಸಾಲಿಗನು ।
	 ಚೀರಾಡಿ ಕೊಡುವನು ಸರ್ವಜ್ಞ ॥
ಸಾಲಿಗನು ಸಾಲವನ್ನು ಎಂದು ಕೊಡುವನು?
೧೧೫೧. ಬೆಂಡಿರದೆ ಮುಳುಗಿದರೂ । ಗುಂಡೆದ್ದು ತೇಲಿದರೂ ।
	 ಬಂಡಿಯ ನೊಗವು ಚಿಗಿತರೂ ಸಾಲಿಗನು ।
	 ಕೊಂಡದ್ದು ಕೊಡನು ಸರ್ವಜ್ಞ ॥
ಸಾಲದ ಹಣವನ್ನು ಮುಳುಗಿಸಿಕೊಂಡು ಸತ್ತವನ ಗತಿಯೇನು ?
೧೧೫೨. ಇತ್ತುದನು ಈಯದನ । ಮೃತ್ಯುವೊಯ್ಯುದೆ ಬಿಡದು 
	 ಹತ್ತಿರ್ದ ಲಕ್ಷ್ಮಿ, ತೊಲಗಿ ಹುಟ್ಟುವನವನ ।
	 ತೊತ್ತಾಗಿ ಮುಂದೆ ಸರ್ವಜ್ಞ ॥

೧೧೫೩. ಕಡತಂದೆನಲ್ಲದೇ । ಹಿಡಿ ಕಳವ ಕದ್ದೆನೇ ।
	 ತಡವಲುರೆ ಬೈದು ತೆಗೆದಾನು ಸಾಲಿಗನು ।
	 ನಡುವೆ ಜಗಳವನು ಸರ್ವಜ್ಞ ॥

೧೧೫೪. ಇದ್ದೂರ ಸಾಲ ಹೇ । ಗಿದ್ದರೂ ಕೊಳಬೇಡ ।
	 ಇದ್ದುದವನು ಸೆಳೆದು ಸಾಲಕೊಟ್ಟವನೊದ್ದು ।
	 ಗಿದ್ದು ಕೇಳುವನು ಸರ್ವಜ್ಞ ॥

೧೧೫೫. ಬೇರೂರ ಸಾಲವನು । ನೂರನಾದರೂ ಕೊಳ್ಳು ।
	 ನೂರಾರು ವರ್ಷಕವ ಬಂದ ದಾರಿಯಲಿ ।
	 ಸಾರಿ ಹೋಗುವನು ಸರ್ವಜ್ಞ ॥

೧೧೫೬. ಗಡ್ಡವಿಲ್ಲದ ಮೋರೆ । ದುಡ್ಡು ಇಲ್ಲದ ಚೀಲ ।
	 ಬಡ್ಡಿಯಾ ಸಾಲ ತೆರುವವನ ಬಾಳುವೆಯು ।
	 ಅಡ್ಡಕ್ಕು ಬೇಡ ಸರ್ವಜ್ಞ ॥

೧೧೫೭. ಉದ್ದರಿಯ ಕೊಟ್ಟಣ್ಣ । ಹದ್ದಾದ ಹಾವಾದ ।
	 ಎದ್ದೆದ್ದು ಬರುವ ನಾಯಾದ,
	 ಮೈಲಾರ ಗೊಗ್ಗಯ್ಯನಾದ ಸರ್ವಜ್ಞ ॥

೧೧೫೮. ನಂಬಿಗೆಯ ಉಳ್ಳನಕ । ಕೊಂಬುವದು ಸಾಲವನು ।
	 ನಂಬಿಗೆಯ ಕೆಟ್ಟ ಬಳಿಕ ಬೆಂದಾವಿಗೆಯ ।
	 ಕುಂಭದಂತಕ್ಕು ಸರ್ವಜ್ಞ ॥

೧೧೫೯. ಹಾಲು ಬೋನವು ಲೇಸು । ಮಾಲೆ ಕೊರಳಿಗೆ ಲೇಸು ।
	 ಸಾಲವಿಲ್ಲದವನ ಮನೆ ಲೇಸು । ಬಾಲರ 
	 ಲೀಲೆ ಲೇಸೆಂದ ಸರ್ವಜ್ಞ ॥
ಅಕ್ಕಸಾಲಿಗ
೧೧೬೦. ಅಕ್ಕಸಾಲಿಗನೂರಿ । ಗೊಕ್ಕಲೆಂದೆನಬೇಡ ।
	 ಬೆಕ್ಕು ಬಂದಿಲಿಯ ಹಿಡಿದಂತೆ ಊರಿಗವ ।
	 ರಕ್ಕಸನು ತಾನು ಸರ್ವಜ್ಞ ॥

೧೧೬೧. ಹಣವಿಗೊಂದು ರವಿ । ಪ್ಪಣಕೊಂದು ಬೇಳೆಯನು ।
	 ತ್ರಿಣಯನಾ ಮುಕುಟವಾದರಾ ಅಕ್ಕಸಾಲೆ ।
	 ಟೊನೆಯದೇ ಬಿಡನು ಸರ್ವಜ್ಞ ॥

೧೧೬೨. ಕಡುಗಾಸಿ ಚಿಮ್ಮಾಡಿ । ಕುಡಿಮಗುಚಿ ಕತ್ತರಿಸಿ ।
	 ಪುಡೆವೆಡೆಗಳೊಳಗೆ ಸಿಡಿಸಿದನು ಸಂವಳಿಸಿ ।
	 ಪಡೆದ ಪ್ರತಿವೆರಸಿ ಸರ್ವಜ್ಞ ॥

೧೧೬೩. ನೆವದೊಳೆಡೆಯಾಡಿಸುತ । ತವೆ ಸಖನ ನುಡಿಯಿಸುತ ।
	ಕವಿದಿರಲು ಬಗೆದೆ ಚಿನ್ನವ ಪ್ರತಿವೆರಸಿ ।
	ತವಕದಲಿ ತೆಗೆವ ಸರ್ವಜ್ಞ ॥

೧೧೬೪. ಬೂದಿಯೊಳು ಹುದುಗಿಸುತ । ವೇಧಿಸುತ ಮರೆಮಾಡಿ ।
	 ಕಾದಿರ್ದ ಚಿನ್ನದೊಳು ಬೆರಸಿ ಒರೆಹಚ್ಚಿ ।
	 ಊದುತಲಿ ಟೊಣೆವ ಸರ್ವಜ್ಞ ॥

೧೧೬೫. ತೆಗೆದತ್ತಿಳೀಯುವದು । ಮಿಗಿಲೆತ್ತರೇರಿಹುದು ।
	 ಬಗೆಯ ರಸತುಂಬಬಹು ಸಂಚದ ತ್ರಾಸ ।
	 ನಗೆಹಲೇ ಬೇಡ ಸರ್ವಜ್ಞ ॥

೧೧೬೬. ಅಕ್ಕಸಾಲೆಯ ಮಗನು । ಚಿಕ್ಕನೆಂದೆನಬೇಡ ।
	 ಚಿಕ್ಕಟವು ಮಯ ಕಡಿವಮ್ತೆ ಚಿಮ್ಮಟವ ।
	 ನಿಕ್ಕುತಲೆ ಕಳುವ ಸರ್ವಜ್ಞ ॥

೧೧೬೭. ಸಂಚಕವನೀಯದಲೆ । ಲಂಚಕರ ಹೊಗಿಸದಲೆ ।
	 ಅಂಚಿತವನೊದರಿ ಕಳುಹಿರೆ ಅಕ್ಕಸಾಲೆ ।
	 ವಂಚಿಸಲಿಕರಿಯ ಸರ್ವಜ್ಞ ॥
ಬಡಿಗ
೧೧೬೮. ಅಡ್ಡಬದ್ದಿಯು ಹೊಲ್ಲ। ಗಿಡ್ಡ ಬಾಗಿಲು ಹೊಲ್ಲ ।
	 ಹೆಡ್ಡರೊಡನಾಟ ಕೆರೆಹೊಲ್ಲ ಬಡಿಗ ತಾ।
	 ರೊಡ್ಡನಿರ ಹೊಲ್ಲ ಸರ್ವಜ್ಞ ॥
ಬಣಜಿಗ
೧೧೬೯. ಹಣತೆ ಭತ್ತವು ಅಲ್ಲ । ಅಣಬೆ ಸತ್ತಿಗೆಯಲ್ಲ ।
	 ಕಣಕದಾ ಕಲ್ಲು ಮಣಿಯಲ್ಲ ಬಣಜಿಗನು ।
	 ಗುಣವಂತನಲ್ಲ ಸರ್ವಜ್ಞ ॥

೧೧೭೦. ಎಳ್ಳು ಗಾಣಿಗಬಲ್ಲ । ಸುಳ್ಳು ಶಿಂಪಿಗ ಬಲ್ಲ ।
	 ಕಳ್ಳರನು ಬಲ್ಲ ತಳವಾರ ಬಣಜಿಗನು ।
	 ಎಲ್ಲವನು ಬಲ್ಲ ಸರ್ವಜ್ಞ ॥
ಜಾಲಗಾರ
೧೧೭೧. ಸಾಲಿಗನಲಿ ಮೇಣಕ್ಕ । ಸಾಲೆಯಲಿ ನಂಬಿಕೆಯು ।
	 ಜಾಲಗಾರನ ದಯೆ ಧರ್ಮ ಮುನ್ನಾವ ।
	 ಕಾಲಕ್ಕೂ ಇಲ್ಲ ಸರ್ವಜ್ಞ ॥
ಪಂಚಾಳ 
೧೧೭೨.ಪಮಚಾಳಯ್ವರುಂ । ವಂಚನೆಗೆ ಗುರುಗಳೇ ।
	ಕಿಂಚಿತ್ತು ನಂಬಿ ಕೆಡಬೇಡ , ತಿಗುಣಿಯಾ 
	ಮಂಚದಂತಿಹರು ಸರ್ವಜ್ಞ ॥

೧೧೭೩. ಕಳ್ಳನೂ ಒಳ್ಳಿದನು । ಎಲ್ಲ ಜಾತಿಯೊಳಿಹರು ।
ಕಳ್ಳನೊಂದೆಡೆಗೆ ಉಪಕಾರಿ, ಪಂಚಾಳ ।
ನೆಲ್ಲರಲಿ ಕಳ್ಳ ಸರ್ವಜ್ಞ ॥
ಹಣಗಾರ
೧೧೭೪. ಮಠಪತಿಗೆ ಕೊರಗಿಲ್ಲ । ಕಟುಕಂಗೆ ಮರುಗಿಲ್ಲ ।
	ಪಟವೆಂಬುದಕ್ಕೆ ನೆರಳಿಲ್ಲ ಹಟಗಾರ ।
	ಕಟಿಲನೆಂದರಿಗು ಸರ್ವಜ್ಞ ॥
ಹೇಡಿ
೧೧೭೫. ಹೆಂಡತಿಗೆ ಅಂಜಿವಾ । ಗಂಡನನು ಏನೆಂಬೆ ।
	ಹಿಂಡು ಕೋಳಿಗಳು ಮುರಿತಿಂಬ ನರಿ, ನಾಯ ।
	ಕಂಡೋಡಿದಂತೆ ಸರ್ವಜ್ಞ ॥
ಗಾಜುಗಾರ 
೧೧೭೬. ಉಣ್ಣದಲೆ ಉರಿಯುವರು । ಮಣ್ಣಿನಲಿ ಮೆರೆಯುವರು ।
	 ಗಾಜೊಂದು ಲೋಹದೊಳಗಲ್ಲ ಅಂಬಲಿಯು ।
	 ಭೋಜನದೊಳಲ್ಲ ಸರ್ವಜ್ಞ ॥

೧೧೭೭. ಅಜನನೊಕ್ಕಲು ಅಲ್ಲ । ಹೂಜೆ ಭಾಂಡಿಯೊಳಲ್ಲ ।
	 ಗಾಜೊಂದು ಲೋಹದೊಳಗಲ್ಲ ಅಂಬಲಿಯು ।
	 ಭೋಜನದೊಳಲ್ಲ ಸರ್ವಜ್ಞ ॥
ಗಾಣಿಗ
೧೧೭೮. ಗಾಣಿಗನ ಒಡನಾಟ । ಕೋಣನಾ ಬೇಸಾಯ ।
	 ಕ್ಷೀಣಿಸುವ ಕುತ್ತ-ಸಮರ, ಕ್ಷಾಮಗಳಿಂದ ।
	 ಪ್ರಾಣವೇಗಾಸಿ ಸರ್ವಜ್ಞ ॥

೧೧೭೯. ಗಾಣಿಗನು ಈಶ್ವರನ । ಕಾಣನೆಂಬುದು ಸಹಜ ।
	 ಏಣಾಂಕಧರನು ಧರೆಗಿಳಿಯಲವನಿಂದ ।
	 ಗಾಣವಾಡಿಸುವ ಸರ್ವಜ್ಞ ॥
ಜಾಡ
೧೧೮೦. ಬೇಡಂಗೆ ಶುಚಿಯಿಲ್ಲ । ಬೋಡಂಗೆ ರುಚಿಯಿಲ್ಲ ।
	 ಕೂಡಿಲ್ಲದಂಗೆ ಸುತರಿಲ್ಲ ಜಾಡತಾ ।
	 ಮೂಢಾತ್ಮನಲ್ಲ ಸರ್ವಜ್ಞ ॥

೧೧೮೧. ಅಗ್ಗ ಬಡವಗೆ ಲೇಸು । ಬುಗ್ಗೆಯಗಸಗೆ ಲೇಸು ।
	 ತಗ್ಗಿನಾ ಗದ್ದೆ ಉಳಲೇಸು ಜೇಡಂಗೆ ।
	 ಮಗ್ಗ ಲೇಸೆಂದ ಸರ್ವಜ್ಞ ॥
ಬೇಡ
೧೧೮೨. ಬೇಡಗಡವಿಯ ಚಿಂತೆ । ಆಡಿಂಗೆ ಮಳೆ ಚಿಂತೆ ।
	 ನೋಡುವಾ ಚಿಂತೆ ಕಂಗಳಿಗೆ ಹೆಳವಂಗೆ ।
	 ದ್ದಾಡುವ ಚಿಂತೆ ಸರ್ವಜ್ಞ ॥

೧೧೮೩. ಆಡಿ ಮರಗಲು ಹೊಲ್ಲ । ಕೂಡಿ ಕಾದಲು ಹೊಲ್ಲ ।
	 ಬೇಡನಾ ನಂಟು ತರವಲ್ಲ ಅವನ ಕುರಿ ।
	 ತಾಡುವದೆ ಹೊಲ್ಲ ಸರ್ವಜ್ಞ ॥

೧೧೮೪. ಬೇಡನೊಳ್ಳಿದನೆಂದು । ಆಡದಿರು ಸಭೆಯೊಳಗೆ ।
	 ಬೇಡಬೇಡಿದನು ಕೊಡದಿರಲು ಬಯ್ಗಿಂಗೆ ।
	 ಗೋಡೆಯನು ಒಡೆವ ಸರ್ವಜ್ಞ ॥

೧೧೮೫. ಬೇಡನಾ ಕೆಳೆಯಿಂದ । ಕೇಡು ತಪ್ಪಬಹುದೇ ।
	 ನೋಡಿ ನಂಬಿದರೆ ಕಡೆಗವನು ಕೇಡನ್ನು ।
	 ಮಾಡದಲೆ ಬಿಡನು ಸರ್ವಜ್ಞ ॥

೧೧೮೬. ಗಾಡವಿಲ್ಲದ ಬಿಲ್ಲು । ಕೋಡಿಯಿಲ್ಲದ ಕೆರೆಯು ।
	 ಬೇಡಂಗೆ ಮಾಡಿದುಪಕಾರ ಕಡೆಯಲ್ಲಿ ।
	 ಕೇಡು ಕಾಣಯ್ಯ ಸರ್ವಜ್ಞ ॥
ಬೆಸ್ತ (ಮೀನಬಲೆಗಾರ)
೧೧೮೭. ಕಿರಿಮೀನು ಹಿರಿಮೀನು । ಕೊರೆ ತರೆದು ತಿಂಬಾತ 
	 ಗಿರುವವನು ಒಬ್ಬ ಮಗಸಾಯ ನೋವಿನಾ ।
	 ತೆರನ ತಾನರಿವ ಸರ್ವಜ್ಞ ॥
ಕಟಕ
೧೧೮೮. ಕೋಳಿಗಳ ಹಂದಿಗಳ । ಮೇಳದಲಿ ತಾ ಸಾಕಿ ।
	 ಏಳುತಲೆ ಕರೆದು ಬಡಿತಿಂದ ಪಾಪಿಗಳ ।
	 ಬಾಳೆಲ್ಲ ನರಕ ಸರ್ವಜ್ಞ ॥
ಡೊಂಬ
೧೧೮೯. ಕತ್ತೆಂಗ ಕೋಡಿಲ್ಲ । ತೊತ್ತಿಗಂ ಗುಣವಿಲ್ಲ ।
	 ಹತ್ತಿಯಾ ಹೊಲಕ ಗಿಳಿಯಿಲ್ಲ ಡೊಂಬನಿಗೆ ।
	 ವೃತ್ತಿಯೇ ಇಲ್ಲ ಸರ್ವಜ್ಞ ॥
ಸುಂಕಿಗ
೧೧೯೦. ಸುಂಕದ ಅಣ್ಣಗಳಾ । ಬಿಂಕವನು ಏನೆಂಬೆ ।
	 ಸುಂಕಕ್ಕೆ ಸಟಿಯ ನೆರೆಮಾಡಿ, ಕಡೆಯಲ್ಲಿ ಟೊಂಕ 
	 ಮುರಿದಿಹುದು ಸರ್ವಜ್ಞ ॥

೧೧೯೧. ಸೀತೆಯಿಂ ಹೆಣ್ಣಿಲ್ಲ । ಸೂತನಿಂದಾಳಿಲ್ಲ ।
	 ಮಾತಿನಲಿ ಸೋತಗಿದಿರಿಲ್ಲ ಶೂದ್ರಂಗೆ ।
	 ಭೀತಿಯೇ ಇಲ್ಲ ಸರ್ವಜ್ಞ ॥

೧೧೯೨. ಗಡಿಯ ನಾಡಿನ ಸುಂಕ । ತಡೆಯಲಂಬಿಗೆ ಕೂಲಿ ।
	 ಮುಡಿಯಂಬಂತೆ, ಒಳಲಂಚ, ಇವು ನಾಲ್ಕು ।
	 ಅಡಿಯಿಟ್ಟದಿಲ್ಲ ಸರ್ವಜ್ಞ ॥
ಕೊಂಡೆಯ (ಚಾಡಿಕೋರ, ಗೂಢಚಾರಿ )
೧೧೯೩. ಭಂಡಿಯಾ ನಡೆಚಂದ । ಮಿಂಡಿಯಾ ನುಡಿ ಚಂದ ।
	 ಕೊಂಡಿಯನು ಚಂದ ಅರಸಿಂಗೆ ಜಾರೆಗಂ ।
	 ಮಿಂಡನೇ ಚಂದ ಸರ್ವಜ್ಞ ॥

೧೧೯೪. ಭಂಡಿಯಚ್ಚಿಗೆ ಭಾರ । ಮಿಂಡೆ ಮುದುಕಗೆ ಭಾರ ।
	 ಗುಂಡುಗಳು ಭಾರ ಭೈತ್ರಕ್ಕೆ ಲೋಕಕ್ಕೆ ।
	 ಕೊಂಡೆಯನೆ ಭಾರ ಸರ್ವಜ್ಞ ॥

೧೧೯೫. ಜೋಳವಾಳಿಯು ಹೊಲ್ಲ ಕೀಳಿನೊಳ ಇರಹೊಲ್ಲ ।
	 ಹೇಳದೌತನಕ್ಕೆ ಬರಹೊಲ್ಲ ಕೊಂಡೆಯನ ।
	 ಗಾಳಿಯೇ ಹೊಲ್ಲ ಸರ್ವಜ್ಞ ॥

೧೧೯೬. ನೆಗ್ಗಿ ಲಾನೆಗೆ ಹೊಲ್ಲ । ಸಿಗ್ಗು ಸೂಳೆಗೆ ಹೊಲ್ಲ ।
	 ಸುಗ್ಗಿಯಾ ಮೇಲೆ ಮಳೆಹೊಲ್ಲ , ಕೊಂಡೆಯನ ।
	 ಕಿಗ್ಗಳವೆ ಹೊಲ್ಲ । ಸರ್ವಜ್ಞ ॥

೧೧೯೭. ತೊತ್ತಿನಲಿ ಗುಣವಿಲ್ಲ । ಕತ್ತೆಗಂ ಕೋಡಿಲ್ಲ ಬತ್ತಲಿದ್ದವಗೆ 
	 ಭಯವಿಲ್ಲ ಕೊಂಡೆಯರೊಳು ।
	 ತ್ತಮರೆ ಇಲ್ಲ ಸರ್ವಜ್ಞ ॥
ಕುಂಟಲಗಿತ್ತಿ 
೧೧೯೮. ಹನುಮಂತನಿಂ ಲಂಕೆ । ಫಲ್ಗುಣನಿಂದ ಜಾಂಡವನ ।
	 ತ್ರಿನಯನಿಂ ತ್ರಿಪುರ ಕೆಟ್ಟಂತೆ ಜಗವು ಕುಂ ।
	 ಟಿಣಿಯಿಂದ ಕೆಡಗು ಸರ್ವಜ್ಞ ॥
ಬಡವ
೧೧೯೯. ಬಡವನೊಂದೊಳು ನುಡಿಯ ನುಡಿದಿಹರೆ ನಿಲ್ಲದದು ।
	 ಕೊಡೆಯನೆಳಲಾತ ನುಡಿದಿಹರೆ ನಾಯಕನ ।
	 ನುಡಿಯಂಬರೆಲ್ಲ ಸರ್ವಜ್ಞ ॥

೧೨೦೦. ಹುಣಿಸೆಯಿಂ ನೊರೆಹಾಲು । ಗಣಿಕೆಯಿಂ ಹಿರೆಯತನ 
	 ಮೇಣಿಸಿನಿಂ ಕದಳೆ ಕೆಡುವಂತೆ ಬಡವ ತಾ ।
	 ಸೆಣಸಿನಿಂ ಕೆಡಗು ಸರ್ವಜ್ಞ ॥

೧೨೦೧. ಸಾಲ ಬಡವಂಗೆ ಹೊಲ್ಲ । ನಾಲಗೆಗೆ ಹುಸಿ ಹೊಲ್ಲ ।
	 ಹಾಲಿನಾ ಕೊಡಕೆ ಹುಳಿಹೊಲ್ಲ ಕಾಲಿಗಂ ।
	 ಕೋಲಿ ಹೊಲ್ಲೆಂದ ಸರ್ವಜ್ಞ ॥
ಜ್ಞಾನೋಕ್ತಿ
೧೨೦೨. ಮುರಿದ ಹೊಂಬೆಸೆಯವಡೆ । ಕಿರಿದೊಂದು ರಜ ಬೇಕು ।
	 ಮುರಿದ ಕಾರ್ಯವನು ಬೆಸೆಯುವಡೆ ಮತ್ತೊಂದ ।
	 ನರಿಯದವರು ಬೇಕು ಸರ್ವಜ್ಞ ॥

೧೨೦೩. ಅರಿತವರ ಮುಂದೆ ತ । ನ್ನರಿವನ್ನು ಮೆರೆಯುವದು ।
	 ಅರಿಯದನ ಮುಂದೆ ಮೆರೆದರಾ ಹೊನ್ನೆಂಬ ।
	 ತೊರೆಯ ಲೆಚ್ಚಂತೆ ಸರ್ವಜ್ಞ ॥

೧೨೦೪. ಜ್ಞಾನಿಯಜ್ಞಾನೆಂದು । ಹೀನ ಜರಿದರೇನು ।
	 ಶ್ವಾನ ತಾ ಬೊಗಳುತಿರಲಾನೆಯದನೊಂದು ।
	 ಗಾನವೆಂದಂತೆ ಸರ್ವಜ್ಞ ॥

೧೨೦೫. ಸಪ್ಪನ್ನ ಉಣಹೊಲ್ಲ । ಮುಪ್ಪು ಬಡವಗೆ ಹೊಲ್ಲ ।
	 ತಪ್ಪಿನಲಿಸಿಲುಕಿ ಇರಹೊಲ್ಲ, ಜಾರೆಯನು 
	 ಅಪ್ಪುವದೆ ಹೊಲ್ಲ ಸರ್ವಜ್ಞ ॥

೧೨೦೬. ಕೋಡಗನ ಒಡನಾಟ । ಕೇಡಕ್ಕು ಸಂಸಾರ ।
	 ಕಾದಾಡಿ ಕೆಂಪು ಮಾಣಿಕವ ಕಲ್ಲೆಂದು ।
	 ಈಡಾಡಿದಂತೆ ಸರ್ವಜ್ಞ ॥

೧೨೦೭. ಬಗೆಬಗೆಯ ಭೋಗವಿರೆ । ನಗುತಿಹರು ಸತಿ ಸುತರು ।
	 ನಗೆ ಹೋಗಿ ಹೋಗೆಯು ಬರಲವರು, ಅಡವಿಯಲಿ ।
	 ಒಗೆದು ಬರುತಿಹರು ಸರ್ವಜ್ಞ ॥

೧೨೦೮. ಕಟ್ಟಾಳು ತಾನಾಗಿ । ಬಟ್ಟೆಯಲಿ ನೆರವೇಕೆ ?
	 ಸೆಟ್ಟಿಗಂ ತೊದಲು ನುಡಿಯೇಕೆ ? ಬಲ್ಲಿದಗೆ \
	 ನಿಷ್ಠುರವದೇಕೆ ? ಸರ್ವಜ್ಞ ॥

೧೨೦೯. ಸುಟ್ಟೊಲೆಯು ಬಿಡದೆ ತಾ । ನಟ್ಟ ಮೇಲುರಿದಂತೆ ।
	 ಕೊಟ್ಟಮೇಲುರಿವ ನಳಿಯನೆಂಬೀ ಮಾತು ।
	 ಕಟ್ಟಿ ಇಟ್ಟಂತೆ ಸರ್ವಜ್ಞ ॥

೧೨೧೦. ಅತಿಯಾಶೆ ಮಾಡುವನು । ಗತಿಗೇಡಿಯಾಗುವನು 
	 ಅತಿಯಾಶೆಯಿಂದ ಮತಿ ಕೆಡಗು ರತಿಯಿಂದ ।
	 ಸತಿ-ಸುತರು ಕೆಡಗು ಸರ್ವಜ್ಞ ॥

೧೨೧೧. ಅತ್ತೆ ಮಾಡಿದ ತಪ್ಪು । ಗೊತ್ತಿಲ್ಲದಡಗಿಹುದು ।
	 ತೊತ್ತದನು ಮಾಡಿದಾಕ್ಷಣದಿ ಸುತ್ತಲುಂ ।
	 ಗೊತ್ತಿಹುದು ನೋಡ ಸರ್ವಜ್ಞ ॥

೧೨೧೨. ಅರಿಯೆನೆಂಬುವದೊಂದು । ಅರಸು ಕೆಲಸವು ಕಾಣೋ ।
	 ಅರಿದೆನೆಂದಿಹನು ದೊರೆಗಳಾ ಆಳೆಂದು ।
	 ಮರೆಯಬೇಡೆಂದ ಸರ್ವಜ್ಞ ॥

೧೨೧೩. ಅಲ್ಲಪ್ಪನೂರಲ್ಲಿ । ಬಲ್ಲಪ್ಪನಲ್ಲಪ್ಪ ।
	 ಬಲ್ಲಪ್ಪನಿಪ್ಪ ಊರಲ್ಲಿ ಅಲ್ಲಪ್ಪ ।
	 ಬಲ್ಲಪ್ಪನಪ್ಪ ಸರ್ವಜ್ಞ ॥

೧೨೧೪. ವ್ಯಸನ ದೇಹ । ಮಸಣವನು ಕಾಣುವದು ।
	 ವ್ಯಸನವನು ಬಿಟ್ಟು, ಹಸನಾಗಿ ದುಡಿದರೆ ।
	 ಅಶನ - ವಸನಗಳು ಸರ್ವಜ್ಞ ॥

೧೨೧೫. ಎಲ್ಲವರು ಬಯ್ದರೂ । ಕಲ್ಲು ಕೊಂಡೊಗೆದರೂ ।
	 ಅಲ್ಲದಾ ಮಾತು ನುಡಿದರೂ ಶಿವನಲ್ಲಿ ।
	 ತಲ್ಲಣಿಸು ಬೇಡ ಸರ್ವಜ್ಞ ॥

೧೨೧೬. ಎಲ್ಲ ಬಲ್ಲವರಿಲ್ಲ । ಬಲ್ಲವರು ಬಹಳಿಲ್ಲ ।
	 ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ ।
	 ವೆಲ್ಲವರಿಗಿಲ್ಲ ಸರ್ವಜ್ಞ ॥

೧೨೧೭. ಉರಗನಾ ಮುಖದಲ್ಲಿ । ಇರುತಿಪ್ಪ ಕಪ್ಪೆ ತಾ ।
	 ನೆರಗುವಾ ನೊಣಕೆ, ಹರಿದಂತೆ ಸಂಸಾರ ।
	 ದಿರವು ಕಾಣಯ್ಯ ಸರ್ವಜ್ಞ ॥

೧೨೧೮. ಮುಟ್ಟಿದೆಡರಿಗೆ ಅಭಯ । ಕೊಟ್ಟಾತ ದಾತಾರ ।
	 ಕೆಟ್ಟ ಕಾರ್ಯವನು ತಿದ್ದಿದರೆ ಅವನೊಂದು ।
	 ನೆಟ್ಟನೆಯ ದೈವ ಸರ್ವಜ್ಞ ॥

೧೨೧೯. ಸಿದ್ಧರಿಗೆ ಯೋಗವನು । ಬುದ್ಧಿವಂತಗೆ ಮತಿಯ ।
	 ಬಿದ್ದ ಅಡಿವಿಯಾ ಕಿಚ್ಚನಂ, ಮುಳ್ಳು ಮೊಳೆ ।
	 ತಿದ್ದುವವರಾರು ಸರ್ವಜ್ಞ ॥

೧೨೨೦. ಆಡದಲೆ ಮಾಡುವನು । ರೂಢಿಯೊಳಗುತ್ತಮನು ।
	 ಆಡಿ ಮಾಡುವನು ಮಧ್ಯಮನು । ಅಧಮ ತಾ ।
	 ನಾಡಿ ಮಾಡದವ ಸರ್ವಜ್ಞ ॥
ಚತುರೋಕ್ತಿ
೧೨೨೧. ಆಶೆಯಿಲ್ಲನ ದೋಸೆ । ಮೀಸೆ ಇಲ್ಲದ ಮೋರೆ ।
	 ಬಾಸಿಂಗ ಹರಿದ ಮದುವೆಯು ಇವು ಮೂರೂ 
	 ಹೇಸಿ ಕಾಣಯ್ಯ ಸರ್ವಜ್ಞ ॥

೧೨೨೨. ನಟ್ಟಡವಿಯಾ ಮಳೆಯು । ದುಷ್ಟರಾ ಗೆಳೆತನವು ।
	 ಕಪ್ಪೆಯಾದವಳ ತಲೆಬೇನೆ ಇವು ಮೂರು 
	 ಕೆಟ್ಟರೇ ಲೇಸು ಸರ್ವಜ್ಞ ॥

೧೨೨೩. ಪುಷ್ಪ ವಿಲ್ಲದ ಪೂಜೆ । ಅಶ್ವವಿಲ್ಲದ ಅರಸು ।
	 ಒಪ್ಪಲೊಲ್ಲವಳ ನಗೆನುಡಿಯು ಇವು ಮೂರು ।
	 ಚಪ್ಪೆ ಕಾಣಯ್ಯ ಸರ್ವಜ್ಞ ॥

೧೨೨೪. ಅಚ್ಚು ಇಲ್ಲದ ಭಂಡಿ । ಮೆಚ್ಚು ಇಲ್ಲದ ದೊರೆಯು ।
	 ರಚ್ಚೆಯಲಿ ಇಹನ ಕಿವಿಮಾತು ಎಂದಿಗೂ ।
	 ನೆಚ್ಚಬೇಡೆಂದ ಸರ್ವಜ್ಞ ॥

೧೨೨೫. ಒಕ್ಕಲಿಲ್ಲದ ಊರು । ಮಕ್ಕಳಿಲ್ಲದ ಮನೆಯು ।
	 ಲೆಕ್ಕವಿಲ್ಲದವನ ಬೇಹಾರ ಇವು ಮೂರು ।
	 ದು:ಖ ಕಾಣಯ್ಯ ಸರ್ವಜ್ಞ ॥

೧೨೨೬. ಒಕ್ಕಲಿಕ ನೋದಲ್ಲ । ಬೆಕ್ಕು ಹೆಬ್ಬುಲಿಯಲ್ಲ ।
	 ಎಕ್ಕಿಯಾ ಗಿಡವು ಬನವೆಲ್ಲ ಇವು ಮೂರು ।
	 ಲೆಕ್ಕದೊಳಗೆಲ್ಲ ಸರ್ವಜ್ಞ ॥

೧೨೨೭. ಕತ್ತೆಯೇರಲು ಹೊಲ್ಲ  । ತೊತ್ತು ಸಂಗವು ಹೊಲ್ಲ ।
	 ಬತ್ತಲೆಯ ಜಲವ ಹೊಗಹೊಲ್ಲ ಇವುಗಳಲ್ಲಿ ।
	 ಅತ್ಯಂತ ಹೊಲ್ಲ ಸರ್ವಜ್ಞ ॥

೧೨೨೮. ಉಪ್ಪಿಲ್ಲದೂಟ ಕ । ಣ್ಣೊಪ್ಪವಿಲ್ಲದ ನಾರಿ ।
	 ತೊಪ್ಪಲಾ ನೀರ ಕೊನೆಗಬ್ಬು
	 ಇವು ನಾಲ್ಕು ಸಪ್ಪೆ ಕಾಣಯ್ಯ ಸರ್ವಜ್ಞ ॥

೧೨೨೯. ಸುಂಲಿಗನು, ಹುಲಿ, ಹಾವು । ಬಿಂಕದಾ ಬೆಲೆವೆಣ್ಣು ।
	 ಕಂಕಿಯೂ ಸುಂಕ - ನಸುಗುನ್ನಿ ಇವು ಏಳು ।
	 ಸೊಂಕಿದರೆ ಬಿಡವು ಸರ್ವಜ್ಞ ॥

೧೨೩೦. ಬೆಂಕಿಯಲಿ ದಯೆಯಿಲ್ಲ । ಮಂಕನಲಿ ಮತಿಯಿಲ್ಲ ।
	 ಶಂಖಧ್ವನಿಗೆ ಪ್ರತಿಯಿಲ್ಲ ಸ್ವರ್ಗದಿ ।
	 ಸುಂಕದೇ ಇಲ್ಲ ಸರ್ವಜ್ಞ ॥

೧೨೩೨. ಮಗಳ ಮಕ್ಕಳು ಹೊಲ್ಲ । ಹಗೆಯವರಗೆಣೆ ಹೊಲ್ಲ ।
	 ಜಗಳಾಡುವಳ ನೆರೆ ಹೊಲ್ಲ ಮೂಗಿಂಗೆ ।
	 ನೆಗಡಿಯೇ ಹೊಲ್ಲ ಸರ್ವಜ್ಞ ॥

೧೨೩೩. ಹಾಸು ಇಲ್ಲದ ನಿದ್ರೆ । ಪೂಸು ಇಲ್ಲದ ಮೀಹ ।
	 ಭಾಷೆಯರಿಯದಳ ಗೆಳೆತನವು ಮೋಟಕ್ಕೆ ।
	 ಬೀಸಿ ಕರದಂತೆ ಸರ್ವಜ್ಞ ॥

೧೨೩೪. ಅಬ್ಬೆಗರೆಷಣವೇಕೆ ? ಕಬ್ಬೇಕೆ ಬೋಡಂಗೆ ।
	 ನಿಬ್ಬಣವು ಏಕೆ ಕುರುಡಂಗೆ ವನದೊಳಗೆ ।
	 ಹೆಬ್ಬುಲಿದೇಕೆ ಸರ್ವಜ್ಞ ॥

೧೨೩೫. ಅಪ್ಪ ಹಾಕಿದ ಗಿಡವು । ಒಪ್ಪುತ್ತಲಿರುತಿರಲು ।
	 ತಪ್ಪಿಲ್ಲವೆಂದು ಅದನೇರಿ ಮಗನುರ್ಲ ।
	 ಗೊಪ್ಪಿಕೊಳ್ಳುವನೆ ಸರ್ವಜ್ಞ ॥

೧೨೩೬. ವೀರತನ ವಿತರಣವ । ಸಾಗದ ಚಪಲತೆಯು ।
	 ಚಾರುತರ ರೂಪ, ಚದುರತನವೆಲ್ಲರಿಗೆ ।
	 ಹೋರಿದರೆ ಬಹುವೆ ಸರ್ವಜ್ಞ ॥

೧೨೩೭. ಸೊಡರು ಸುಲಿಗೆಯ ಆಳು । ಪಡೆದುಂಬೆ ಸೂಳೆಯೂ ।
	 ತುಡುಗುಣಿಯ । ನಾಯಿ, ಅಳಿಯನೂ, ಅರಸಾಳು ।
	 ಬಡತನವನರಿಯರು ಸರ್ವಜ್ಞ ॥

೧೨೩೮. ಬಂಧನದಲಿರುವನು ।
	 ಹಂದಿಯಂತಿಹನು ಬಂಧವಿಲ್ಲದವನು ಬಡವನು ದೇಶಿಗನು ।
	 ಎಂದಳಿದರೇನು ಸರ್ವಜ್ಞ ॥

೧೨೩೯. ಕರೆಯದಲೆ ಬರುವವನ ।
	 ಬರೆಯದಲೆ ಓದುವ ಬರಗಾಲಿನಿಂದ ನಡೆವವನ । ಕರೆತಂದು ।
	 ಕೆರೆದಿ ಹೊಡೆಯೆಂದ ಸರ್ವಜ್ಞ ॥

೧೨೪೦. ವಿದ್ಯೆ ಕಲಿಸದ ತಂದೆ । ಬುದ್ಧಿ ಹೇಳದ ಗುರುವು ।
	 ಬಿದ್ದಿರಲು ಬಂದ ನೋಡದಾ ತಾಯಿಯೂ ।
	 ಶುದ್ಧ ವೈರಿಗಳು ಸರ್ವಜ್ಞ ॥

೧೨೪೧. ಕರಿಗೆ ಕೇಸರಿ ವೈರಿ । ದುರಿತಕ್ಕೆ ಹರ ವೈರಿ ।
	 ಉರವಣಿಸಿ ಬರುವ ಸಂಸಾರದ ದುಃಖಕ್ಕೆ ।
	 ಪರಿಣಾಮ ವೈರಿ ಸರ್ವಜ್ಞ ॥

೧೨೪೨. ಆಳು, ಸೂಳೆಯು, ನಾಯಿ । ಕೋಳಿ, ಜೋಯಿಸ, ವೈದ್ಯ ।
	 ಗೂಳಿಯು, ತಗರು ಪ್ರತಿರೂಪ ಕಂಡಲ್ಲಿ ।
	 ಕಾಳಗವು ಎಂದ ಸರ್ವಜ್ಞ ॥

೧೨೪೩. ನಲ್ಲ ಒಲ್ಲಿಯನೊಲ್ಲ । ನೆಲ್ಲಕ್ಕಿ ಬೋನೋಲ್ಲ ।
	 ಅಲ್ಲವನು ಒಲ್ಲ । ಮೊಸರೊಲ್ಲ ಯಾಕೊಲ್ಲ ।
	 ಇಲ್ಲದಕೆ ಒಲ್ಲ ಸರ್ವಜ್ಞ ॥
ಅನುಪಮ ಪದಾರ್ಥಗಳು
೧೨೪೪. ಮೇರುವಿಂಗೆಣೆಯಿಲ್ಲ । ಧಾರುಣಿಕೆ ಸರಿಯಿಲ್ಲ ।
	 ತಾರಕೆನಿಗಿಂತ ಹಿತರಿಲ್ಲ, ದೈವತಾ ।
	 ಬೇರೊಬ್ಬನಿಲ್ಲ ಸರ್ವಜ್ಞ ॥

೧೨೪೫. ಪರಮಾತ್ಮಗೆಣೆಯಿಲ್ಲಂ । ಬರಕನಿಚ್ಚಣಿಕಿಲ್ಲ ।
	 ಹೊರಗಾದ ಮೇಲೆ ಭಯವಿಲ್ಲ ಮೃತ್ಯದೊ ।
	 ಳಿರುವವರು ಇಲ್ಲ ಸರ್ವಜ್ಞ ॥

೧೨೪೬. ಲಿಂಗದಿಂ ಘನವಿಲ್ಲ । ಗಂಗೆಯಿಂ ಶುಚಿಯಿಲ್ಲ ।
	 ಕಂಗಳಿಂದಧಿಕ ಹಿತರಿಲ್ಲ ಭಕ್ತ ತಾ ।
	 ಜಂಗಮನಿಂದಿಲ್ಲ ಸರ್ವಜ್ಞ ॥

೧೨೪೭. ರಾಮನಾಮವೆ ನಾಮ । ಸೋಮ ಶಂಕರ ಗುರುವು 
	 ಆ ಮಹಾರುದ್ರ ಅಧಿದೈವ ಜಗದೊಳಗೆ ।
	 ಭೀಮನೇ ಭಕ್ತ ಸರ್ವಜ್ಞ ॥

೧೨೪೮. ಸತ್ಯಕ್ಕೆ ಸರಿಯಿಲ್ಲ । ಮಿಥ್ಯಕ್ಕೆ ನೆಲೆಯಿಲ್ಲ ।
	 ಹೆತ್ತಮ್ಮನಿಂದ ಹಿತರಿಲ್ಲ ನರರೊಳಗೆ ।
	 ನಿತ್ಯರೇ ಇಲ್ಲ ಸರ್ವಜ್ಞ ॥

೧೨೪೯. ರಾತ್ರಿಯೊಳು ಶಿವರಾತ್ರಿ । ಜಾತ್ರೆಯೊಳು ಶ್ರ್‍ಈಶೈಲ ।
	 ಕ್ಷೇತ್ರದೊಳಗಧಿಕ ಶ್ರೀಕಾಶಿ ಶಿವತತ್ವ ।
	 ಸ್ತೋತ್ರದೊಳಗಧಿಕ ಸರ್ವಜ್ಞ ॥
ಅನುಭವೋಕ್ತಿಗಳು 
೧೨೫೦. ಏರುವಾ ಕುದುರೆಯನು । ಹೇರುವಾ ಎತ್ತನ್ನು ।
	 ಬೇರೂರಲಿದ್ದ ಸತಿಯನ್ನು ಬೇರೋಬ್ಬ ।
	 ಸೇರದೇ ಬಿಡರು ಸರ್ವಜ್ಞ ॥

೧೨೫೧. ಹಲ್ಲಮೇಲಿನ ಕೆಂಪು । ಕಲ್ಲ ಮೇಲಿನ ಹಾಂಸೆ ।
	 ಮಲ್ಲಿಗೆಯ ಅರಳತನಿಗಂಪು ಹೊಸಮೋಹ ।
	 ನಿಲ್ಲವು ಕಾಣಾ ಸರ್ವಜ್ಞ ॥

೧೨೫೨. ದಿನಪತಿಗೆ ಎಣೆಯಿಲ್ಲ । ಧನಪತಿ ಸ್ಥಿರವಲ್ಲ ।
	 ಅನುಭವಿಗೆ ಬೇರೆ ಮತವಿಲ್ಲ ಅರಿದಂಗೆ ।
	 ಮುನಿವವರೆ ಇಲ್ಲ ಸರ್ವಜ್ಞ ॥

೧೨೫೩. ಕಾಯಕವು ಉಳ್ಳವಕ । ನಾಯಕನು ಎನಿಸಿಪ್ಪ ।
	 ಕಾಯಕವು ತೀರ್ದ ಮರುದಿನವೆ, ಸುಡುಗಾಡ ।
	 ನಾಯಕನು ಎನಿಪ ಸರ್ವಜ್ಞ ॥

೧೨೫೪. ಸತ್ತವರಿಗತ್ತು ಬೇ । ಸತ್ತರವರುಳಿವರೇ ।
	 ಹತ್ತೆಂಟು ಕಾಲ ತಡನಕ್ಕು ಬಳಿಕೆಗೆಲ್ಲ ।
	 ರತ್ತಲೇ ಅಕ್ಕು ಸರ್ವಜ್ಞ ॥

೧೨೫೫. ಕೂಡಿ ತಪ್ಪಲು ಬೇಡ । ಓಡಿ ಸಿಕ್ಕಲು ಬೇಡ ।
	 ಆಡಿ ತಪ್ಪಿದರೆ ಇರಬೇಡ ದುರುಳರು ।
	 ಕೂಡಬೇಡೆಂದ ಸರ್ವಜ್ಞ ॥

೧೨೫೬. ಹಂಗಿನರಮನೆಗಿಂತ । ಇಂಗಡದ ಗುಡಿ ಲೇಸು ।
	 ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ ।
	 ತಂಗುಳವೆ ಲೇಸು ಸರ್ವಜ್ಞ ॥

೧೨೫೭. ಜಾರಿ ನೆರೆ ಸೇರುವಗೆ । ತೂರರೊಳು ಹೋರುವಗೆ ।
	 ಊರಿರುಳ ನಾರಿ ಕಳುವಂಗೆ ತಿಳಿಯದಲೆ ।
	 ಮಾರಿ ಬಂದಿಹುದು ಸರ್ವಜ್ಞ ॥

೧೨೫೮. ಹಾಲು ಇಲ್ಲದ ಊಟ । ಬಾಲೆಯರ ಬರಿ ನೋಟ ।
	 ಕಾಲಿಲ್ಲದವನ ಹರಿದಾಟ ಕಂಗಳನ ।
	 ಕೋಲು ಕಳೆದಂತೆ ಸರ್ವಜ್ಞ ॥

೧೨೫೯. ಆಳಾಗಬಲ್ಲವನು । ಆಳುವನು ಅರಸಾಗಿ ।
	 ಆಳಾಗಿ ಬಾಳಲರೆಯದವ ಕಡೆಯಲ್ಲಿ ।
	 ಹಾಳಾಗಿ ಹೋದ ಸರ್ವಜ್ಞ ॥

೧೨೬೦. ಒಬ್ಬರಿದ್ದರೆ ಸ್ವಾಂತ । ಇಬ್ಬರಲಿ ಏಕಾಂತ ।
	 ಇಬ್ಬರಿಂದೊಬ್ಬನರಿದು ಬೇರೊಬ್ಬನಿಂ ।
	 ಹಬಿ ಲೋಕಾಂತ ಸರ್ವಜ್ಞ ॥

೧೨೬೧. ಅಕ್ಕಿಯಿಂ ತೆಂಗು ಜಾ । ನಕಿಯಿಂದ ಲಂಕೆಯೂ ।
	 ಮೆಕ್ಕಿಯಿಂ ಕಣಕ ಕೆಡುವಂತೆ ದುರ್ಬುದ್ಧಿ ।
	 ಹೊಕ್ಕಲ್ಲಿ ಕೇಡು ಸರ್ವಜ್ಞ ॥

೧೨೬೨. ಇಬ್ಬರೊಳಗಿನ ಕಿಚ್ಚು । ಒಬ್ಬರರಿಹದೆ ಹೊತ್ತಿ ।
	 ಹಬ್ಬುತ್ತಲಿಬ್ಬರೊಳಬ್ಬ ಬೆಂದರಿ ।
	 ನ್ನೊಬ್ಬಗದು ಹಬ್ಬ ಸರ್ವಜ್ಞ ॥

೧೨೬೩. ಗಾಳಿಯಿಂ ಮರನುರಳಿ । ಹುಲ್ಲೆಲೆಯು ಉಳಿವಂತೆ ।
	 ಮೇಳಗಳ ಬಲದಿ ಉರಿಯುವಾ ಖಳನಳಿದು \
	 ಕೀಳಿ ಬಾಳುವನು ಸರ್ವಜ್ಞ ॥

೧೨೬೪. ಗವುಡನೊಳು ಹಗೆತನವು । ಕಿವುಡನೊಳು ಏಕಾಂತ ।
	 ಪ್ರವುಢನೊಳೂ ಮೂಡನುಪದೇಶ, ಹಸುವಿಗೆ ।
	 ತವುಡನಿಟ್ಟಂತೆ ಸರ್ವಜ್ಞ ॥

೧೨೬೫. ಬೇಗೆಯೊಳು ಹೋಗದಿರು । ಮೂಕರೊಳು ನುಡಿಯದಿರು ।
	 ಆಗದರ ನಂಬಿ ಕೆಡದೆ ಇರು ನಡುವಿರಳು ।
	 ಹೋಗದಿರು ಪಯಣ ಸರ್ವಜ್ಞ ॥

೧೨೬೬. ಮೆಚ್ಚದಿರು ಪರಸತಿಯ । ರಚ್ಚೆಯೊಳು ಬೆರೆಯದಿರು ।
	 ನಿಚ್ಚ ನೆರೆಯೊಳಗೆ ಕಾದದಿರು, ಒಬ್ಬರಾ ।
	 ಇಚ್ಚೆಯಲಿರದಿರು ಸರ್ವಜ್ಞ ॥

೧೨೬೭. ಮನ ಭಂಗವಾದಂದು । ಘನನಿದ್ರೆ ಹೋದಂದು ।
	 ವನಿತೆಯರು ಸುತರು ಜರಿದಂದು ಮರಣವೇ ।
	 ತನಗೆ ಬಂತೆಂದ ಸರ್ವಜ್ಞ ॥

೧೨೬೮. ತಾಗುವಾ ಮುನ್ನವೇ ಬಾಗುವಾ ತಲೆ ಲೇಸು ।
	 ತಾಗಿ ತಲೆಯೊಡೆದು ಕೆಲಸವಾದ ಬಳಿಕದರ ।
	 ಭೋಗವೇನೆಂದ ಸರ್ವಜ್ಞ ॥

೧೨೬೯. ತಾಗಿ ಬಾಗುವದರಿಂ । ತಾಗದಿಹುದು ಲೇಸು ।
	 ತಾಗಿ ಮೂಗೊಡದು ಬುಗುಟಿದ್ದು ಬಾಗುವದು ।
	 ಹೇಗನಾ ಗುಣವು ಸರ್ವಜ್ಞ ॥

೧೨೭೦. ಸಾವ ಸಂಕಟ ಹೊಲ್ಲ । ಹಾವಿನ ವಿಷವು ಹೊಲ್ಲ ।
	 ನಾವಿಗನ ಕೂಡ ಹಗೆ ಹೊಲ್ಲ ಚಿಕ್ಕವರ ।
	 ಕಾವುದೇ ಹೊಲ್ಲ ಸರ್ವಜ್ಞ ॥

೧೨೭೧. ಬರೆವ ಕರಣೀಕನೊಡನೆ । ಹಿರಿದು ಜಗಳವು ಬೇಡ ।
	 ಗರಗಸದ ಒಡನೆ ಮರನಾಡಿ ತನ್ನತಾ ।
	 ನಿರಿದುಕೊಂಡಂತೆ ಸರ್ವಜ್ಞ  ॥

೧೨೭೨. ಇತ್ತುದನು ಈಯದಗೆ । ಮೃತ್ಯು ಒಲಿಯದೆ ಬಿಡಳು ।
	 ಹತ್ತಿರ್ದಲಕ್ಶ್ಮಿತೊಲಗಲ್ಕೆ ಮುಂದವನ ।
	 ತೊತ್ತಾಗೆ ಬರುವ ಸರ್ವಜ್ಞ ॥

೧೨೭೩. ಸಿರಿಯ ಸಂಸಾರವು । ಸ್ಥಿರವೆಂದು ನಂಬದಿರು ।
	 ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ ।
	 ಹರಿದು ಹೋದಂತೆ ಸರ್ವಜ್ಞ ॥

೧೨೭೪. ನೀರ ಬೊಬ್ಬಳಿನೆಚ್ಚಿ । ಸಾರಿ ಕೆಡದಿರು ಮರುಳೆ ।
	 ಸಾರುಗುಣಿಯಾಗು ನಿಜವ ತಿಳಿ ಸರುವರೊಳು ।
	 ಕಾರುಣಿಕನಾಗು ಸರ್ವಜ್ಞ ॥

೧೨೭೫. ಗಂಧವನು ಇಟ್ಟಮೆ ಲಂದದಲಿ ಇರಬೇಕು ।
	 ನಿಂದೆ ಕುಂದುಗಳ ಸುಟ್ಟವನು ಧರಣಿಯಲಿ ।
	 ಇಂದುಧರನೆಂದ ಸರ್ವಜ್ಞ ॥

೧೨೭೬. ಅಟ್ಟಿಕ್ಕುವಾಕೆಯೊಳು । ಬೆಟ್ಟಿತ್ತು ಹಗೆ ಬೇಡ ।
	 ಸಟ್ಟುಗದೆ ಗೋಣ ಮುರಿಯುವಳೂ ಅಲಗಿಲ್ಲ ।
	 ದಿಟ್ಟಯಾಳವಳು ಸರ್ವಜ್ಞ ॥

೧೨೭೭. ಉಂಡುಂಡು ಕಡೆಕಡೆದು । ಖಂಡೆಯನು ಮಸೆ ಮಸೆದು 
	 ಕಂಡವರ ಕಾಲ ಕೆದರುವಾ ದುರುಳರನು ।
	 ಗುಂಡಿಲಿಕ್ಕೆಂದ ಸರ್ವಜ್ಞ ॥

೧೨೭೮. ಓಲಯಿಸುತಿರುವವನು । ಮೇಲೆನಿಸುತ್ತಿದ್ದರು ।
	 ಸೋಲದಾ ಬುದ್ಧಿಯಿರುವವಲಿ ಭಾಗ್ಯದಾ ।
	 ಕೀಲು ಕಾಣಯ್ಯ ಸರ್ವಜ್ಞ ॥

೧೨೭೯. ನುಡಿಯಲ್ಲಿ ಎಚ್ಚತ್ತು । ನಡೆಯಲ್ಲಿ ತಪ್ಪಿದರೆ ।
	 ಹಿಡಿದಿರ್ಧ ಧರ್ಮ ಹೊಡೆಮರಳಿ ಕಚ್ಚುವಾ ।
	 ಹೆಡೆನಾಗನೋಡು ಸರ್ವಜ್ಞ ॥

೧೨೮೦. ಕರುವ ಕಾವಾಬುದ್ಧಿ । ಗುರುಳಿಗೆ ಇರದಿರಲು ।
	 ಧರಣಿಯಲಿ ಜನರು ಉಳಿವರೇ ? ಇವರೂರ ।
	 ನರಿಗಳೆಂದರಿಗು ? ಸರ್ವಜ್ಞ ॥

೧೨೮೧. ಊರೆಲ್ಲ ನೆಂಟರು । ಕೇರಿಯೆಲ್ಲವು ಬಳಗ ।
	 ಧರಣಿಯಲಿ ಎಲ್ಲ ಕುಲದೈವವಾಗಿನ್ನು ।
	 ಯಾರನ್ನು ಬಿಡಲಿ ? ಸರ್ವಜ್ಞ ॥
ಜ್ಯೋತಿಷ್ಯ ಪದ್ಧತಿ
(ಗಣಿತ ಜ್ಯೋತಿಷ್ಯ)
೧೨೮೨. ರಂಧ್ರ - ಗತಿ - ಆದಿತ್ಯ । ನೊಂದಾಗಿ ಅರ್ಥಿಸುತ ।
	 ಅಂದಿನಾ ತಿಥಿಯನೊಡಗೂಡೆ ನಕ್ಷತ್ರ ।
	 ಮುಂದೆ ಬಂದಕ್ಕು ಸರ್ವಜ್ಞ ॥

೧೨೮೩. ಗತವಾದ ಮಾಸವನು । ಗತಿಯಿಂದ ದ್ವಿಗುಣಿಸುತ ।
	 ಪ್ರತಿಪದದ ತಿಥಿಯನೊಡಗೂಡೆ ಕರಣ ತಾ ।
	 ನತಿಶಯದಿ ಬಕ್ಕು ಸರ್ವಜ್ಞ ॥

೧೨೮೪. ಆದಿಯಾ ಮಾಸವನು । ವೇದದಿಂದಲಿ ಗುಣಿಸಿ ।
	 ಆ ದಿನದ ತಿಥಿಯನೊಡಿಸಲು ಯೋಗ ।
	 ವಾದಿನದ ಬಕ್ಕು ಸರ್ವಜ್ಞ ॥

೧೨೮೫. ಸಂದಿರ್ದ ಮಾಸವನು । ಕುಂದದಿಮ್ಮಡಿ ಮಾಡಿ ।
	 ಅಂದಿನಾ ತಿಥಿಯ ನೊಡಗೂಡಲಾ ತಾರೆ ।
	 ಮುಂದೆ ಬಂದಿಹುದು ಸರ್ವಜ್ಞ ॥

೧೨೮೬. ನಂದೆಯನು ಭದ್ರೆಯನು । ಒಂದಾಗಿ ಅರ್ಧಿಸಲು ।
	 ಅಂದಿನ ತಿಥಿಯ ಸಮನಾಗೆ ಗ್ರಹಣ ತಾ ।
	 ಮುಂದೆ ಬಂದಕ್ಕು ಸರ್ವಜ್ಞ ॥

೧೨೮೭. ಅಡಿಯನಿಮ್ಮಡಿ ಮಾಡಿ ।
	 ಒಡಕೂಡಿ ಹನ್ನೊಂದು ತಡೆಯದಿನ್ನೂರು ಹತ್ತಕ್ಕೆ ಭಾಗಿಸಲು ।
	 ನಡೆವ ಗಳಿಗಕ್ಕು ಸರ್ವಜ್ಞ ॥

೧೨೮೮. ಪಂಚತಾರೆಯ ಮೃಗದ । ಲಾಂಛನವು ಸಹ ತಾರೆ ।
	 ಕಂಚಿಯಿಂದಿತ್ತ ಮಳೆಯಿಲ್ಲ ಭತ್ತವನು ।
	 ಸಂಚಮಡಗುವದು ಸರ್ವಜ್ಞ ॥

೧೨೮೯. ಆಗಿಯ ಹುಣ್ಣಿವೆ ಹೋದ । ಮಿಗೆ ಮೂರ ದಿವಸಕ್ಕೆ ।
	 ಮೃಗಧರನ ಕೂಡೆ ಮೃಗವಿರಲು ಮಳೆಗಾಲ ।
	 ಜಗದಣಿಯಲಕ್ಕು ಸರ್ವಜ್ಞ ॥

೧೨೯೦. ಮೀನಕ್ಕೆ ಶನಿ ಬರಲು । ಶಾನೆ ಕಾಳಗವಕ್ಕು ।
	 ಬೇನೆ ಬಂಧಾನಗಳು ತಾವಕ್ಕು ಬರನಕ್ಕು ಲೋಕಕ್ಕೆ ।
	 ಹಾನಿಯೇ ಬಕ್ಕು ಸರ್ವಜ್ಞ ॥

೧೨೯೧. ಚಂದ್ರ ಮಾರ್ತಾಂಡರನು । ಸಂಧಿಸಿಯೇ ಪರಿವೇಷ ।
	 ಕುಂದದಲೆ ನಿಚ್ಚ ಬರುತ್ತಿರಲು ಜಗವೆಲ್ಲ ।
	 ಕುಂದಿದಂತಿಹುದು ಸರ್ವಜ್ಞ ।\

೧೨೯೨. ವಾಯು-ವಾಯುವ ಕೂಡೆ । ವಹಿಲದಿಂ ಮಳೆಯಕ್ಕು ।
	 ವಾಯು - ನೈಋತ್ಯನೊಡಗೂಡೆ ಮಳೆ ತಾನು ।
	 ವಾಯುವೆ ಅಕ್ಕು ಸರ್ವಜ್ಞ ॥

೧೨೯೩. ಹೊತ್ತಾರೆ ನೆರೆಯುವದು । ಹೊತ್ತೇರಿ ಹರಿಯುವದು ।
	 ಕತ್ತಲೆಯ ಬಣ್ಣ ಮಿಗಿಲಾಗಿ ಮಳೆಗಾಲ ।
	 ವೆತ್ತಣದಯ್ಯ ಸರ್ವಜ್ಞ ॥

೧೨೯೪. ಅಳಿವಣ್ಣದಾಕಾಶ । ಗಿಳಿವಣ್ಣದಾ ಮುಗಿಲು ।
	 ಅಳಿದಳಿದುಮರ್ಕ ನುದಯಿಲು ಮಳೆಯು ತಾ ।
	 ಘಳಿಲನೇ ಬಕ್ಕು ಸರ್ವಜ್ಞ ॥

೧೨೯೫. ಅಡರಿ ಮೂಡಲು ಮಿಂಚು । ಪಣುವಣ್ಗೆ ಧನುವೇಳೆ ।
	 ಬಡಗಣದ ಗಾಳಿ ಕಡುಬೀಸೆ ಮಳೆಯು ತಾ ।
	 ತಡೆಯದಲೆ ಬಕ್ಕು ಸರ್ವಜ್ಞ ॥

೧೨೯೬. ಕುರಿಯನೇರಲು ಗುರುವು । ಧರೆಗೆ ಹೆಮ್ಮೆಳೆಯಕ್ಕು ।
	 ಪರಿಪರಿಯ ಧಾನ್ಯ ಬೆಳೆಯಕ್ಕು ಪ್ರಜೆಗಳೆಗೆ ।
	 ಕರೆಯಲ್ಹಯನಕ್ಕು ಸರ್ವಜ್ಞ ॥

೧೨೯೭. ವೃಷಭನೇರಲು ಗುರುವು । ವಸುಧೆಯೊಳು ಮಳೆಯಕ್ಕು ।
	 ಪಶುಸ್ತ್ರೀಯರಿಗೆ ಜಯವಕ್ಕು ಜನರೆಲ್ಲ ।
	 ಮಿಸುಯಂತಕ್ಕು ಸರ್ವಜ್ಞ ॥

೧೨೯೮. ಮಿಥುನಕ್ಕೆ ಗುರು ಬರಲು । ಮಥನಲೋಕದೊಳಕ್ಕು ।
	 ಪೃಥ್ವಿಯೊಳಗೆಲ್ಲ ರುಜವಕ್ಕು ನರಪಶು ।
	 ಹಿತವಾಗಲಕ್ಕೂ ಸರ್ವಜ್ಞ ॥

೧೨೯೯. ಏಡಿಯೇರಲು ಗುರುವು । ನೋಡೆ ಕಡೆ ಮಳೆಯಕ್ಕು ।
	 ನಾಡೊಳಗೆಲ್ಲ ಬೆಳೆಯಕ್ಕು ಪ್ರಜೆಗಳು ।
	 ಈಡೇರಲಕ್ಕು ಸರ್ವಜ್ಞ ॥

೧೩೦೦. ಸಿಂಗಕ್ಕೆ ಗುರು ಬರಲು ।
	 ಸಂಗರವು ಘನವಕ್ಕು ಅಂಗನೆಯರಿಗೆ ಬಾಧೆ ಪಿರಿದಕ್ಕು ಕಡೆ ಮಳೆ ।
	 ಹಿಂಗಾರಿಯಕ್ಕು ಸರ್ವಜ್ಞ ॥

೧೩೦೧. ಕನ್ಯೆಕ್ಕೆ ಗುರು ಬರಲು । ಚನ್ನಾಗಿ ಮಳೆಯಕ್ಕು ।
	 ಚನ್ನಾಗಿ ಪಶುವು ಕರೆಯಕ್ಕು ಮಂಡನದ ।
	 ಕನ್ಯೆಯರು ಅಕ್ಕು ಸರ್ವಜ್ಞ ॥

೧೩೦೨. ತುಲವನೇರಲು ಗುರುವು । ನೆಲೆಯಾಗಿ ಮಳೆಯಕ್ಕು 
	 ಫಲವು ಧಾನ್ಯಗಳು ಬೆಳೆಯಕ್ಕು ಪ್ರಜೆಗಳಿಗೆ ।
	 ನಿಲಕಾಲಕ್ಕು ಸರ್ವಜ್ಞ ॥

೧೩೦೩. ಚೇಳನೇರಲು ಗುರುವು । ಕಾಳಗವು ಪಿರಿದಕ್ಕು ।
	 ಗಾಳಿಯಿಂ ವೇಳೆಯು ಕಿರಿದಕ್ಕು ಬೆಳೆಯಿಲ್ಲ ।
	 ಕೋಲಾಗವಕ್ಕು ಸರ್ವಜ್ಞ ॥

೧೩೦೪. ಬಿಲ್ಲನೇರಲು ಗುರುವು । ತಲ್ಲಣವು ಜಗಕೆಲ್ಲ ।
	 ಕಲ್ಲು ಮೇಲೆಲ್ಲ ಮಳೆಯಕ್ಕು ನೃಪರಿಗೆ ।
	 ತಲ್ಲಣವೇ ಅಕ್ಕು ಸರ್ವಜ್ಞ ॥

೧೩೦೫. ಮಕರಕ್ಕೆ ಗುರು ಬರಲು ।
	 ಮಕರ ತೋರಣವಕ್ಕು ಸಕಲ ಧಾನ್ಯ ಬೆಳೆಯಕ್ಕು 
	 ಪ್ರಜೆಗಳು ಸುಖವಿರಲು ಅಕ್ಕು ಸರ್ವಜ್ಞ ॥

೧೩೦೬. ಕುಂಭಕ್ಕೆ ಗುರು ಬರಲು । ತುಂಬುವವು ಕೆರೆ - ಭಾವಿ ।
	 ಅಂಬರದ ತನಕ ಬೆಳೆಯಕ್ಕು ಲೋಕಕ್ಕೆ ।
	 ಸಂಭ್ರಮಕ್ಕು ಸರ್ವಜ್ಞ ॥

೧೩೦೭. ಮೀನಕ್ಕೆ ಗುರು ಬರಲು ।
	 ಮಾನಖಂಡಗವಕ್ಕು ಕಾನನವೆಲ್ಲ ಬೆಳೆಯಕ್ಕು ಪ್ರಜೆಗಳಿಗೆ ।
	 ಆನಂದವಕ್ಕು ಸರ್ವಜ್ಞ ॥

೧೩೦೮. ತೆಂಕಣಕೆ ಮುಗಿಲಡರಿ । ಶಂಕರನೆ ದೆಶ ಮಿಂಚೆ ।
	 ಪಂಕಜಾರಾತ ಗುಡಿಗೆಟ್ಟ ಮಳೆಯು ತಾ ।
	 ಭೋಂಕನೇ ಬಕ್ಕು ಸರ್ವಜ್ಞ ॥

೧೩೦೯. ತಳಿಗೆಗಂ ತಲೆಯಿಲ್ಲ । ಮಳೆಗೆ ಜೋಯಿಸರಿಲ್ಲ ।
	 ಬೆಳಗಾಗೆ ಕನ್ನಗಳವಿಲ್ಲ ಲೋಕದೊಳು ।
	 ಉಳಿದಾಳ್ಗಳಿಲ್ಲ ಸರ್ವಜ್ಞ ॥

೧೩೧೦. ಮಗ್ಗಿಯಾ ಗುಣಿಸುವಾ । ಮೊಗ್ಗರದ ಜೋಯಿಸರು ।
	 ಅಗ್ಗವನು ಮಳೆಯನರಿಯದಲೆ ನುಡಿವವರ ।
	 ಹೆಗ್ಗಡೆಯಬಲ್ಲ ಸರ್ವಜ್ಞ ॥
ಸೀನಿನ ಶಕುನ
೧೩೧೧. ಕಟ್ಟಿದರೆ ಸೀತಿಹರೆ । ನೆಟ್ಟನೆಯ ನಿಲಬೇಕು ।
	 ಒಟ್ಟುಯಿಸಿ ಮೀರಿ ನಡೆದಿಹರೆ ಗುರಿನೋಡಿ ।
	 ತೊಟ್ಟನೆಚ್ಚಂತೆ ಸರ್ವಜ್ಞ ॥

೧೩೧೨. ಎಡಬಲವು ಎನಬೇಡ । ಒಡನೆ ಬಹನೆನಬೇಡ ।
	 ಕಡುದೂರ ಸಾರ್ದೆನೆನಬೇಡ ಸೀತರೊಂದಡಿಯ
	 ನಿಡಬೇಡ ಸರ್ವಜ್ಞ ॥

೧೩೧೩. ಮರೆದೊಮ್ಮೆ ನಡೆವುತ್ತ । ಸರಕನೇ ಸೀತಿಹರೆ ।
	 ಅರಿದವರಡಿಯಿಡದೆ ನಿಲ್ಲುವುದು,
	 ಇಲ್ಲದಿರೆ ಇರಿದುಕೊಂಡಂತೆ ಸರ್ವಜ್ಞ ॥

೧೩೧೪. ತಾನಕ್ಕು ಪರನಕ್ಕು ಶ್ವಾನಗರ್ದಭನಕ್ಕು ।
	 ವಾನರನು ಅಕ್ಕು ಪಶುವಕ್ಕು ಪಯಣದಲಿ 
	 ಸೀನೆ ಭಯವಕ್ಕು ಸರ್ವಜ್ಞ ॥

೧೩೧೫. ಒಮ್ಮೆ ಸೀತರೆ ಹೊಲ್ಲ । ಇಮ್ಮೆ ಸೀತರೆ ಲೇಸು
	 ಕೆಮ್ಮಿಕೇಕರಿಸಿ ಉಗುಳುವಾ ಲೇಸು ।
	 ಆ ಬೊಮ್ಮಗು ಇಲ್ಲ ಸರ್ವಜ್ಞ ॥

೧೩೧೬. ಏನು ಮನ್ನಿಸದಿರಲು । ಸೀನು ಮನ್ನಿಸಬೇಕು ।
	 ಸೀನು ಮನ್ನಿಸದೆ ಹೋಗಿಹರೆ ಹೋದಲ್ಲಿ ।
	 ಹಾನಿಯೇ ಬಕ್ಕು ಸರ್ವಜ್ಞ ॥
ದೇಶ ಪದ್ಧತಿ
(ಮೂಡಲು)
೧೩೧೭. ಬಟ್ಟೆ ಬಟ್ಟೆಯೊಳೆಲ್ಲ । ಹೊಟ್ಟೆ ಜಾಲಿಯ ಮುಳ್ಳು ।
	 ಹುಟ್ಟಿದವರೆಲ್ಲ ನಿಜವಾಯಿ ಮೂಡಲ ।
	 ಬಟ್ಟೆ ಬೇಡೆಂದ ಸರ್ವಜ್ಞ ॥

೧೩೧೮. ಅಗ್ಗ ಸುಗ್ಗಿಗಳುಂಟು । ಡೊಗ್ಗೆ ಮಜ್ಜೆಗೆಯುಂಟು ।
	 ಹೆಗ್ಗುಳದ ಕಾಯಿ ಮೆಲಲುಂಟು ಮೂಢನಾ ।
	 ಡೆಗ್ಗೆನ್ನಬಹುದು ಸರ್ವಜ್ಞ ॥
(ಬಡಗಲು)
೧೩೧೯. ಎಲ್ಲಿ ನೋಡಿದಡಲ್ಲಿ । ಟೊಳ್ಳು ಜಾಲಿ ಮುಳ್ಳು ।
	 ಉಳ್ಳವರು ಎಲ್ಲ ಕಿಸವಾಯಿ ಬಡಲಾ ।
	 ತಳ್ಳಿ ಬೇಡೆಂದ ಸರ್ವಜ್ಞ ॥

೧೩೨೦. ಊರು ಸನಿಹದಲಿಲ್ಲ । ನೀರೊಂದು ಗಾವುದವು ।
	 ಸೇರಿ ನೆರ್‍ಅಳಿಲ್ಲ ಬಡಗಲಾ ।
	 ದಾರಿಬೇಡೆಂದ ಸರ್ವಜ್ಞ ॥
(ತೆಂಕಲು)
೧೩೨೧. ಶಂಖ ಹುಟ್ಟಿದ ನಾದ । ಬಿಂಕವನು ಏನೆಂಬೆ ।
	 ಶಂಕರನ ಪೂಜೆ ಮನೆ ಮನೆಗೆ ಮಿಗಿಲಾಗಿ ।
	 ತೆಂಕಲುಂಟೆಂದ ಸರ್ವಜ್ಞ ॥

೧೩೨೨. ರಾಗವೇ ಮೂಡಲು । ಯೋಗವೇ ಬಡಗಲ
	 ರೋಗವೇ ಶುದ್ಧ ಪಡುವಲದು ತೆಂಕಲೇ ।
	 ಭೋಗದಾಬೀಡು ಸರ್ವಜ್ಞ  ॥

೧೩೨೩. ಅಟ್ಟುಂಬುದು ಮೂಡಲದು । ಸುಟ್ಟುಂಬುದು ಬಡಗಲದು ।
	 ತಟ್ಟೆಯಲುಂಬುದು ಪಡುವಲದು ತೆಂಕಲು ।
	 ಮುಷ್ಟಿಲುಂಬು ಸರ್ವಜ್ಞ ॥

೧೩೨೪. ಉಡುಹೀನ ಮೂಡಲುಂ । ನುಡಿಹೇನ ಬಡವಲುಂ ।
	 ಕಡುಕೋಪದವರು ಪಡುವಲಲಿ ತೆಂಕಲೊಳು ।
	 ಸಡಗರದಲಿಹರು ಸರ್ವಜ್ಞ ॥

೧೩೨೫. ಅರೆದಲೆಯು ಮೂಡಲು ಹೊರದಲೆಯು ಬಡಗಲೂ ।
	 ಸರಿಯಲೆಯು ಉದ್ದ ಪಡುವಲುಂ ತೆಂಗಣದಿ ।
	 ಬರಿದಲೆಯಲಿಹರು ಸರ್ವಜ್ಞ ॥
ಬೆಳವಲು 
೧೩೨೬. ಜೋಳದಾ ಬೋನಕ್ಕೆ । ಬೇಳೆಯಾ ತೊಗೆಯಾಗಿ ।
	ಕಾಳೆಮ್ಮೆ ಕರೆದ ಹೈನಾಗಿ ಬೆಳವಲದ ಮೇಳ 
	ನೋಡೆಂದ ಸರ್ವಜ್ಞ ॥

೧೩೨೭. ನವಣೆಯಾ ಬೋನಕ್ಕೆ । ಹವಣಾದ ತೊಗೆಯಾಗಿ ।
	 ಕವಣೆಗಲ್ಲದಷ್ಟು ಬೆಣ್ಣೆಯಿದರೂಟದಾ ।
	 ಹವಣ ನೋಡೆಂದ ಸರ್ವಜ್ಞ ॥

೧೩೨೮. ಕಣಕದಾ ಕಡುಬಾಗಿ । ಮಣಕೆಮ್ಮೆ ಹಯನಾಗಿ ।
	 ಕುಣಿ ಕುಣಿದು ಕಡವ ಸತಿಯಾಗಿ ಬೆಳವಲದ
	 ಅಣಕ ನೋಡೆಂದ ಸರ್ವಜ್ಞ ॥

೧೩೨೯. ಕಡಲೆಯನ್ನು ಗೋದಿಯನು । ಮಡಿಕದ್ದು ಬೆಳೆವರು ।
	 ಸುಡಬೇಕು ನಾಡನೆಂದವನ ಬಾಯೊಳಗೆ ಪುಡಿಗಡುಬು
	 ಬೀಳ್ಗು ಸರ್ವಜ್ಞ ॥
ಮಲೆನಾಡು
೧೩೩೦. ಕಾಡೆಲ ಕಸುಗಾಯಿ । ನಾಡೆಲ್ಲ ಹೆಗ್ಗಿಡವು ।
	 ಆಡಿದ ಮಾತು ನಿಜವಿಲ್ಲ ಮಲೆನಾಡ ।
	 ಕಾಡು ಸಾಕೆಂದ ಸರ್ವಜ್ಞ ॥

೧೩೩೧. ಸೀತಧಾತುಗಳುಂಟು । ಜಾತಿಹವು ಕುಕ್ಷಿಗಳು ।
	 ಪಾತಕರು ಮರದಿ ತಿರಿದುಂಬ ನಾಡಿಗೆ ।
	 ಏತಕ್ಕೆ ಬಹರು ಸರ್ವಜ್ಞ ॥

೧೩೩೨. ಅಲ್ಲವರಷಿಣವುಂಟು । ಬೆಲ್ಲ ಬಿಳೆನಲೆಯುಂಟು ।
	 ಒಳ್ಳೆ ಹಲಸುಂಟು । ಮೆಲ್ಲಲ್ಕೆ ಮಲೆನಾಡು 
	 ನಲ್ಲೆನ್ನ ಬಹುದೇ ಸರ್ವಜ್ಞ ॥

೧೩೩೩. ಕಿಚ್ಚುಂಟು ಕೆಸರುಂಟು । ಬೆಚ್ಚನಾ ಮನೆಯುಂಟು ।
	 ಇಚ್ಚಗೇ ಬರುವ ಸತಿಯುಂಟು ।
	 ಮಲೆನಾಡ ಮೆಚ್ಚ ನೋಡೆಂದ ಸರ್ವಜ್ಞ ॥
ಸ್ತ್ರೀ ಸ್ತುತಿ ಪದ್ಧತಿ (ಸ್ತ್ರೀ ಅವಶ್ಯ)
೧೩೩೪. ಹೆಣ್ಣಿನಿಂದಲೆ ಇಹವು । ಹೆಣ್ಣಿನಿಂದಲೆ ಪರವು ।
	 ಹೆಣ್ಣಿಂದ ಸಕಲಸಂಪದವು ಹೆಣ್ಣೊಲ್ಲ ।
	 ದಣ್ಣಗಳು ಯಾರು ಸರ್ವಜ್ಞ ॥

೧೩೩೫. ಮಗಳಕ್ಕ ತಂಗಿಯು । ಮಿಗೆ ಸೊಸೆಯು ನಾದಿನಿಯು ।
	 ಜಗದ ವನಿತೆಯರು ಜನನಿಯೂ ಇವರೊಳಗೆ ।
	 ಜಗಕೊಬ್ಬಳೆಸೈ ಸರ್ವಜ್ಞ ॥

೧೩೩೬. ಪಲ್ಲಕ್ಕಿ ಏರಿದವ । ರೆಲ್ಲಿಂದ ಬಂದಿಹರು ।
	 ನೆಲ್ಲಕ್ಕಿಯಂತೆ ಸುಲಿವಲ್ಲ ಹಿರಿಯರುಂ ।
	 ನೆಲ್ಲಳಿಂದಲೇ ಸರ್ವಜ್ಞ ॥

೧೩೩೭. ನಲ್ಲೆಯನು ಒಲ್ಲೆಂಬ । ಸೊಲ್ಲು ನಾಲಿಗೆ ಹೊಲೆಯು ।
	 ಬಲ್ಲಿದನು, ಶ್ರವಣ, ಸನ್ಯಾಸಿ ಇವರುಗಳು ।
	 ಎಲ್ಲಿ ಉದಿಸಿಹರು ಸರ್ವಜ್ಞ ॥
ಸ್ತ್ರೀಯರ ನೆಲೆ ತಿಳಿಯದು 
೧೩೩೮. ಅಂಬುದಿಯ ಗಾಢವನು । ಅಂಬರದ ಕಲಹವನು ।
	 ಶಂಭುವಿನ ಮಹಿಮೆ, ಸತಿಯರಾ ಹೃದಯದಾ
	 ಇಂಭರಿದವರಾರು ಸರ್ವಜ್ಞ ॥

೧೩೩೯. ಹೆಣ್ಣಿನಾ ಹೃದಯದಾ । ತಣ್ಣಗಿಹ ನೀರಿನಾ ।
	 ಬಣ್ಣಿಸುತ ಕುಣಿವ ಕುದುರೆಯಾ ನೆಲೆಯ ಬ ।
	 ಲ್ಲಣ್ಣಗಳು ಯಾರು ಸರ್ವಜ್ಞ ॥

೧೩೪೦. ಲೆಕ್ಕಕ್ಕೆ ಕಕ್ಕಿಲ್ಲ । ಬೆಕ್ಕಿಗಂ ವ್ರತವಿಲ್ಲ ।
	 ಸಿಕ್ಕು ಬಂಧನದಿ ಸುಖವಿಲ್ಲ, ನಾರಿಗಂ ।
	 ಸಿಕ್ಕದವರಿಲ್ಲ ಸರ್ವಜ್ಞ ॥
ಸ್ತ್ರೀಯರನ್ನು ಆಶಿಸುವದಿಲ್ಲ
೧೩೪೧. ತವಕದಾತುರದವಳ । ನವರತಿಯು ಒದಗಿದಳ ।
	 ಸವಿಮಾತ ಸೊಬಗು ಸುರಿಯುವಾ ಯುತಿಯನು ।
	 ಅವುಕದವರಾರು ಸರ್ವಜ್ಞ ॥

೧೩೪೨. ರತಿ ಕಲೆಯೊಳತಿಚದುರೆ । ಮಾತಿನೊಳಗತಿಮಿತಿಯು
	 ಖತಿಗಳೆದ ಮೊಗವು ಸೊಬಗಿನಾ ಸುದತಿ ಕಂ ।
	 ಡತಿ ಬಯಸದಿಹರೆ ಸರ್ವಜ್ಞ ॥

೧೩೪೩. ಮೊಲೆಗಳುಗಿದವಳಾಗಿ । ಚಲುವೆ ಒಲಿದವಳಾಗಿ ।
	 ಹಲತೆರದಿ ಕರೆವ ಕಾಮಿನಿಯ ನೆರೆ ಬಿಟ್ಟು 
	 ತೊಲಗುವರಾರು ಸರ್ವಜ್ಞ ॥

೧೩೪೪. ಮತಿಯೊಳತಿಚದುರಾಗಿ । ರತಿ ಕೇಳಿಗೊಳಗಾಗಿ ।
	 ಅತಿಮೋಹ ಮುದ್ದು ಮೊಗವಾಗಿ ಅಂಗನೆಯ ।
	 ನತಿಗಳೆದರಾರು ಸರ್ವಜ್ಞ ॥
ತ್ರಿಮೂರ್ತಿಗಳೂ ಸ್ತ್ರೀವಶರು
೧೩೪೫. ರುದ್ರಕರ್ತನು ತಾನು ।
	 ಅರ್ಧನಾರಿಯು ಆದ ಇದ್ದವರೊಳಾರು ಸತಿಯರಾ ಹೃದಯವನು ।
	 ಗೆದ್ದವನು ಆರು ಸರ್ವಜ್ಞ ॥

೧೩೪೬. ಹರಿಯ ಉರವನು ಮೆಟ್ಟಿ । ಹರಶಿವನು ಏರಿ
	 ಸರಸಿಜೋದ್ಭವನ ಮೊಗಗೆಡಿಸಿ ಮೀರಿದಳು ।
	 ಹಿರಿಯರಿನ್ನಾರು ಸರ್ವಜ್ಞ ॥

೧೩೪೭. ಪುಲ್ಲೆ ಚರ್ಮವನುಟ್ಟು । ಹುಲ್ಲು ಬೆಳ್ಳಗೆ ಬಿಟ್ಟು 
	 ಕಲ್ಲು ಮೇಲಿಪ್ಪ ತಪಸಿಯ ಮನವೆಲ್ಲ ।
	 ನಲ್ಲೆಯಲ್ಲಿಹುದು ಸರ್ವಜ್ಞ ॥

೧೩೪೮. ತೋಟ ಬೆಳೆಯನ್ನು । ದಾಟಿ ನೋಡದವರಾರು ।
	 ಮೀಟು ಜವ್ವನದ ಸೊಬಗೆಯ ನೆರೆ ಕಂಡು ।
	 ದಾಟದವರಾರು ಸರ್ವಜ್ಞ ॥
ಹೊಟ್ಟೆ ಎಲ್ಲವನ್ನೂ ಮಾಡಿಸುವದು
೧೩೪೯. ಕೊಟ್ಟಣವ ಕುಟ್ಟುವದು । ಮೊಟ್ಟೆಯದು ಹೊರಿಸುವದು ।
	 ಬಿಟ್ಟ-ಕೂಲಿಗಳ ಮಾಡಿಸುವದು ಗೇಣು ।
	 ಹೊಟ್ಟೆ ಕಾಣಯ್ಯ ಸರ್ವಜ್ಞ ॥

೧೩೫೦. ಸಾಲವನು ಮಾಡುವದು । ಹೇಲ ತಾ ಬಳಿಸುವದು ।
	 ಕಾಲಿನ ಕೆಳಗೆ ಕೆಡಹುವದು ತುತ್ತಿನಾ ।
	 ಚೀಲ ನೋಡಯ್ಯ ಸರ್ವಜ್ಞ ॥

೧೩೫೧. ಕುಲವನ್ನು ಕೆಡಿಸುವದು । ಛಲವನ್ನು ಬಿಡಿಸುವದು ।
	 ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ ।
	 ಬಲವ ನೋಡೆಂದ ಸರ್ವಜ್ಞ ॥

೧೩೫೨. ಕನ್ನವನ್ನು ಕೊರಿಸುವದು । ಭಿನ್ನವನ್ನು ತರಿಸುವದು ।
	 ಬನ್ನದಾ ಸೆರೆಗೆ ಒಯ್ಯುವದು ಒಂದು ಸೇ ।
	 ರನ್ನ ನೋಡೆಂದ ಸರ್ವಜ್ಞ ॥

೧೩೫೩. ಹೊಟ್ಟೆಯನು ಕಳ್ಳುವದು । ಬಟ್ಟೆಯಲಿ ಬಡಿಸುವದು
	 ಕಟ್ಟಾಳ ಭಂಗಪಡಿಸುವದು ಗೇಣುದ್ದ ।
	 ಹೊಟ್ಟೆ ಕಾಣಯ್ಯ ಸರ್ವಜ್ಞ ॥
ಊಟವಿದ್ದರೆ ಆಟ
೧೩೫೪. ಅಟ್ಟಿ ಹರಿದಾಡುವದು । ಬಟ್ಟೆಯಲಿ ಮೆರೆಯುವದು ।
	 ಹೊಟ್ಟೆ ಹುಣ್ಣಾಗಿ ನಗಿಸುವದು ಒಂದು ಹಿಡಿ ಹಿಟ್ಟು ।
	 ಕಾಣಯ್ಯ ಸರ್ವಜ್ಞ ॥

೧೩೫೫. ಉಗರ ತಿದ್ದಿಸುವದದು । ಮುಗುಳುನಗೆ ನಗಿಸುವದು ।
	 ಹಗರಣದ ಮಾತ ನಡಿಸುವದು ಬೋನದಾ ।
	 ಬಗೆಯ ನೋಡೆಂದ ಸರ್ವಜ್ಞ ॥

೧೩೫೬. ಉಕ್ಕುವದು ಸೊಕ್ಕುವದು । ಕೆಕ್ಕನೆ ಕಲೆಯುವದು ।
	 ರಕ್ಕಸನ ವೋಲು ಮದಿಸುವದು ಒಂದು ಸೆರೆ ।
	 ಯಕ್ಕಿಯಾ ಗುಣವು ಸರ್ವಜ್ಞ ॥
ಕೂಳಿಲ್ಲದೆ ಕೆಲಸ ನಡೆಯದು 
೧೩೫೭. ನೇತ್ರಗಳು ಕಾಣಿಸವು । ಶ್ರೋತ್ರಗಳು ಕೇಳಿಸವು ।
	 ಗಾತ್ರಗಲು ಎದ್ದು ನಡೆಯುವವು ಕೂಳೊಂದು ।
	 ರಾತ್ರಿ ತಪ್ಪಿದರೆ ಸರ್ವಜ್ಞ ॥

೧೩೫೮. ಆಡಿಗಳೆದ್ದೇಳವು । ನುಡಿಗಳೂ ಕೇಳಿಸವು ಮಡದಿಯರ 
	 ಮಾತು ಸೊಗಸದು ಕೂಳೊಂದು ।
	 ತಡೆದರರಗಳಿಗೆ ಸರ್ವಜ್ಞ ॥

೧೩೫೯. ನಿದ್ದೆಗಳು ಬಾರದವು । ಬುದ್ಧಿಗಳೂ ತಿಳಿಯುವವು ।
	 ಮುದ್ದಿನ ಮಾತುಗಳು ಸೊಗಸದದು ಬೋನದಾ ।
	 ಮುದ್ದೆ ತಪ್ಪಿದರೆ ಸರ್ವಜ್ಞ ॥

೧೩೬೦. ಕಣ್ಣುಗಳು ಇಳಿಯುವವು । ಬಣ್ಣಗಳು ಅಳಿಯುವವು ।
	 ಹುಣ್ಣಿಮೆಯು ಹೋದ ಶಶಿಯಂತೆ ಅಶನವನು ।
	 ಉಣ್ಣದವ ನೋಡಲು ಸರ್ವಜ್ಞ ॥

೧೩೬೧. ಆಳು ಇದ್ದರೆ ಅರಸು । ಕೂಳು ಇದ್ದರೆ ಬಿರುಸು ।
	 ಆಳುಕೂಳುಗಳು ಮೇಳವಿಲ್ಲದ ಮನೆಯ ।
	 ಬಾಳುಗೇಡೆಂದ ಸರ್ವಜ್ಞ ॥

೧೩೬೨. ಕೂಳಿಲ್ಲದವನೊಡಲು । ಹಾಳುಮನೆಯಂತಕ್ಕು ।
	 ಹೇಳಿದಲೆ ಹೋಗಲು ರುಜೆಗಳಿಂ ತನುವೊಡೆದು ।
	 ಹಾಳೆಯಂತಕ್ಕು ಸರ್ವಜ್ಞ ॥

೧೩೬೩. ಕೂಳು ಹೋಗುವ ತನಕ । ಗೂಳಿಯಂತಿರುತಿಕ್ಕು ।
	 ಕೂಳು ಹೋಗದಾ ಮುದಿ ಬರಲು ಮನುಜನವ ।
	 ಮೂಳನಾಯಕ್ಕು ಸರ್ವಜ್ಞ ॥

೧೩೬೪. ಕೂಳು ಕುತ್ತವೆ ಕುತ್ತ ಕೂಳು ಮೇಳವೆ ಮೇಳ ।
	 ಕೂಳೊಂದುಗಳಿಗೆ ತಡೆದಿಹರೆ ಪಾತರದ 
	 ಮೇಳ ಮುರಿದಂತೆ ಸರ್ವಜ್ಞ ॥

೧೩೬೫. ತುತ್ತು ತುತ್ತಿಗೆ ಹೊಟ್ಟೆ । ತಿತ್ತಿಯಂತಾಗುವದು ।
	 ತುತ್ತು ಅರಗಳಿಗೆ ತಡೆದಿಹರೆ,
	 ಹೆಡೆಹಾವು ಹುತ್ತು ಬಿಟ್ಟಂತೆ ಸರ್ವಜ್ಞ ॥

೧೩೬೬. ಎತ್ತ ಹೋದರು ಒಂದು । ತುತ್ತು ಕಟ್ಟಿರಬೇಕು ।
	 ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು ।
	 ಎತ್ತಬೇಕೆಂದ ಸರ್ವಜ್ಞ ॥

೧೩೬೭. ತಿತ್ತಿ ಹೊಟ್ಟೆಗೆ ಒಂದು । ತುತ್ತು ತಾ ಹಾಕುವದು ।
	 ತುತ್ತೆಂಬ ಶಿವನ ಬಿಟ್ಟಿಹರೆ ಸುಡುಗಾಡಿ ।
	 ಗೆತ್ತಬೇಕೆಂದ ಸರ್ವಜ್ಞ ॥

೧೩೬೮. ಅನ್ನದೇವರ ಮುಂದೆ । ಇನ್ನು ದೇವರು ಉಂಟೆ ।
	 ಅನ್ನವಿರುವನಕ ಪ್ರಾಣವೀ ಜಗದೊಳಗೆ ।
	 ಅನ್ನದೈವ ಸರ್ವಜ್ಞ ॥
ವೈದ್ಯ ಪದ್ಧತಿ (ಆಚಾರ ಕ್ರಮ)
೧೩೬೯. ಉಂಡು ಕೆಂಡವ ಕಾಸಿ । ಶತಪಥ ನಡೆದು ।
	 ಉಂಡೆಡದ ಮಗ್ಗುಲಲಿ ಮಲಗೆ ವೈದ್ಯನಾ ।
	 ಭಂಡಾಟವಿಲ್ಲ ಸರ್ವಜ್ಞ ॥

೧೩೭೦. ಉಂಡು ನೂರಡಿ ಎಣಸಿ । ಕೆಂಡಕ್ಕೆ ಕೈ ಕಾಸಿ ।
	 ಗಂಡು ಮೇಲಾಗಿ ಮಲಗಿದನು ವೈದ್ಯನಾ ।
	 ಮಿಂಡ ಕಾಣಯ್ಯ ಸರ್ವಜ್ಞ ॥

ಆರೋಗ್ಯದ ಉಪದೇಶ

೧೩೭೧. ಹಸಿಯದಿರೆ ಕಡುಗಾಯ್ದು । ಬಿಸಿನೀರ ಕುಡಿಯುವದು ।
	 ಹಸಿವಕ್ಕು ಸಿಕ್ಕ _ ಮಲವಕ್ಕು ದೇಹವದು ।
	 ಸಸಿಯಾಗಿಹುದು ಸರ್ವಜ್ಞ ॥

೧೩೭೨. ಹಸಿವಿಲ್ಲದುಣಬೇಡ । ಹಸಿದು ಮತ್ತಿರಬೇಡ ।
	 ಬಿಸಿಬೇಡ ತಂಗಳುಣಬೇಡ ವೈದ್ಯನಾ ।
	 ಗಸಣಿಯೇ ಬೇಡ ಸರ್ವಜ್ಞ ॥

೧೩೭೩. ಒಚ್ಚೊತ್ತು ಉಂಬುವದು । ಕಿಚ್ಚತಾ ಕಾಯುವದು ।
	 ಬೆಚ್ಚನಾ ಠಾವಿಲೋಗಿದರೆ ವೈದ್ಯನಾ ।
	 ಕಿಚ್ಚಲಿಕ್ಕೆಂದ ಸರ್ವಜ್ಞ ॥
ಮಿತಿಯಿಂದ ಗತಿ
೧೩೭೪. ನಾಲಿಗೆಯ ಕೀಲವನು । ಶೀಲದಲ್ಲಿ ತಾನರಿದು ।
	 ಶೂಲವದು ರುಚಿಯು ಎಂದಿರುವನು ಮುದಿಯಲ್ಲಿ ।
	 ಬಾಲನಂತಿಹನು ಸರ್ವಜ್ಞ ॥

೧೩೭೫. ನಾಲಿಗೆಯ ಕಟ್ಟಿದನು । ಕಾಲನಿಗೆ ದೂರನಹ ।
	 ನಾಲಿಗೆಯು ರುಚಿಯ ಮೇಲಾಡುತಿರಲವನ ।
	 ಕಾಲ ಹತ್ತಿರವು ಸರ್ವಜ್ಞ ॥

೧೩೭೬. ರುಚಿಗಳಿಗೆ ನೆರೆಗಳೆದು । ಶುಚಿಗಲಿ ಮೆರೆವಂಗೆ
	 ಪಚನವದು ಬೆಳಗಿ ಬಲದಿ ಬಾಳುವನೆಂಬಿ ।
	 ವಚನವೊಂದಿಹುದು ಸರ್ವಜ್ಞ ॥
ಆಹಾರಗಳ ಪರಿಣಾಮ 
೧೩೭೭. ಅಕ್ಕಿಯನು ಉಂಬುವನು । ಹಕ್ಕಿಯಂತಾಗುವನು ।
	 ಸಿಕ್ಕು ರೋಗದಲಿ ರೊಕ್ಕವನು ವೈದ್ಯನಿಗೆ
	 ಇಕ್ಕುತಲಿರುವ ಸರ್ವಜ್ಞ ॥

೧೩೭೮. ಜೋಳವನು ತಿಂಬುವನು । ತೋಳದಂತಾಗುವನು ।
	 ಬೇಳೆ-ಬೆಲ್ಲಗಳನುಂಬವನು ಬಹು
	 ಬಾಳನೆಂದರಿಗು ಸರ್ವಜ್ಞ ॥

೧೩೭೯. ನವಣೆಯನು ತಿಂಬುವನು ।
	 ಹವಣಾಗಿ ಇರುತಿಹನು ಭವಣಿಗಳಿಗವನು ಒಳಬೀಳನೀ ಮಾತು ।
	 ಠವಣೆಯಲ್ಲೆಂದ ಸರ್ವಜ್ಞ ॥

೧೩೮೦. ರಾಗಿಯನ್ನು ಉಂಬುವ ನಿ । ರೋಗಿ ಎಂದೆನಿಸುವನು ।
	 ರಾಗಿಯು ಭೋಗಿಗಳಿಗಲ್ಲ ಬಡವರಿಂ ।
	 ಗಾಗಿ ಬೆಳೆದಿಹುದು ಸರ್ವಜ್ಞ ॥

೧೩೮೧. ಒಮ್ಮೆಯುಂಡವ ತ್ಯಾಗಿ । ಇನ್ನೊಮ್ಮೆಯುಂಡವ ಭೋಗಿ ।
	 ಬಿಮ್ಮೆಗುಂಡವನು ನೆರೆಹೋಗಿ ।
	 ಯೋಗಿ ತಾ ಸುಮ್ಮನಿರುತಿ ಸರ್ವಜ್ಞ ॥
ಬೆಡಗಿನ ಪದ್ಧತಿ (ಒಗಟುಗಳು)
೧೩೮೨. ಕಲ್ಲರಳೀ ಹೂವಾಗಿ । ಎಲ್ಲರಿಗೆ ಬೇಕಾಗಿ ।
	 ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ ।
	 ಬಲ್ಲವರು ಹೇಳಿ ಸರ್ವಜ್ಞ ॥

೧೩೮೩. ಮರನೊತ್ತಿಬೇಯುವದು । ಉರಿತಾಕಿ ಬೇಯದದು ?
	 ಪುರಗಳ ನುಂಗಿ ಬೆಳಗುವದು ಲೋಕದಲಿ ।
	 ನರನಿದೇನೆಂಬೆ ಸರ್ವಜ್ಞ ॥

೧೩೮೪. ಉರಿ ಬಂದು ಬೇಲಿಯನು ।
	 ಹರಿದು ಹೊಕ್ಕದ ಕಂಡೆ ಅರಿಯದಿದರ ಬಗೆಗೆ ಕವಿಕುಲ 
	 ಶೇಷ್ಠರುಗಳೆಂದರಿದು ಪೇಳಿ । ಸರ್ವಜ್ಞ ॥

೧೩೮೫. ಕಾಲಿಲ್ಲದಲೆ ಹರಿಗು । ತೋಳಿಲ್ಲದಲೆ ಹೊರುಗು ।
	 ನಾಲಿಗೆಯಿಲ್ಲದಲೆ ಉಲಿಯುವದು ಕವಿಕುಲದ ।
	 ಮೇಲುಗಳೇ ಪೇಳಿ ಸರ್ವಜ್ಞ ॥

೧೩೮೬. ಇರಿದರೆಯು ಏರಿಲ್ಲ ।
	 ಹರಿದರೆಯು ಸೀಳಿಲ್ಲ ತಿರಗೊಳಕೊಂಡು ಋಣವಿಲ್ಲ ಕವಿಗಳಲಿ ।
	 ಅರಿದಿರಿದ ಪೇಳಿ ಸರ್ವಜ್ಞ ॥

೧೩೮೭. ಆಡಿದರೆ ಹಾಡುವದು । ಓಡಿ ಮರವನೇರುವದು ।
	 ಕೂಡದೆ ಕೊಂಕಿ ನಡೆಯುವದು ಹರಿದರದು ।
	 ಬಾಡದು ಸರ್ವಜ್ಞ ॥

೧೩೮೮. ಕುತ್ತಿಗದು ಹರಿದಿಹುದು । ಮತ್ತೆ ಬರುತರೇಳುವದು ।
	 ಕಿತ್ತು ಬಿಸುಡಲು ನಡೆಯುವದು ಕವಿಜನರ ।
	 ಅರ್ತಿಯಿಂ ಪೇಳಿ ಸರ್ವಜ್ಞ ॥

೧೩೮೯. ಕಚ್ಚಿದರೆ ಕಚ್ಚುವದು । ಕಿಚ್ಚಲ್ಲ ಚೇಳಲ್ಲ ।
	 ಆಶ್ಚರ್ಯವಲ್ಲ ಅರಿದಲ್ಲ ಈ ಮಾತು ।
	 ನಿಚ್ಚಯಂ ಬಲ್ಲೆ ಸರ್ವಜ್ಞ ॥

೧೩೯೦. ಹತ್ತು ಸಾವಿರ ಕಣ್ಣು । ನೆತ್ತಿಲಾದರು ।
	 ಬಾಲ ಹುತ್ತಿನಾ ಹುಳವ ಹಿಡಿಯುವದು ಕವಿಜನರೆ ।
	 ಮೊತ್ತವಿದನ್ಹೇಳಿ ಸರ್ವಜ್ಞ ॥

೧೩೯೧. ತನ್ನ ಸುತ್ತಲು ಮಣಿಯು ।
	 ಬೆಣ್ಣೆ ಕುಡಿವಾಲುಗಳು ತಿನ್ನದೆ ಹಿಡಿದು ತರುತಿಹುದು
	 ಕವಿಗಳಿಂದ ನನ್ನಿಯಿಂ ಪೇಳಿ ಸರ್ವಜ್ಞ ॥

೧೩೯೨. ಬಟ್ಟಲದ ಬಾಯಂತೆ । ಹುಟ್ಟುವದು ಲೋಕದೊಳು ।
	 ಮುಟ್ಟದದು ತನ್ನ ಹೆಂಡಿರನು ಕವಿಗಳಲಿ ।
	 ದಿಟ್ಟರಿದ ಪೇಳಿ ಸರ್ವಜ್ಞ ॥

೧೩೯೩. ಹಲ್ಲು ನಾಲಿಗೆಯಿಲ್ಲ । ಸೊಲ್ಲು ಸೋಜಿಗವಲ್ಲ ।
	 ಕೊಲ್ಲದೇ ಮೃಗವ ಹಿಡಿಯುವದು ಲೋಕದೊಳ । 	
	 ಗೆಲ್ಲ ಠಾವಿನಲಿ ಸರ್ವಜ್ಞ ॥

೧೩೯೪. ಆಸನದಲುಂಬುವದು । ಸೂಸುವದು ಬಾಯಲ್ಲಿ ।
	 ಬೇಸರದ ಹೊತ್ತು ಕೊಲುವದು ಕವಿಗಳೊಳು ।
	 ಸಾಸಿಗರು ಪೇಳಿ ಸರ್ವಜ್ಞ ॥

೧೩೯೫. ಹಲವು ಮಕ್ಕಳ ತಂದೆ । ತಲೆಯಲ್ಲಿ ಜುಟ್ಟವದೆ ।
	 ಸತಿಗಳಿಗೆ ಜಾವವರಿವವನ 
	 ಹೆಂಡತಿಗೆ ಮೊಲೆಯಿಲ್ಲ ನೋಡಾ ಸರ್ವಜ್ಞ ॥

೧೩೯೬. ಮಲ್ಲಿಗೆಗೆ ಹುಳಿಯಕ್ಕು । ಕಲ್ಲಿಗೇ ಗಂಟಕ್ಕು ।
	 ಹಲ್ಲಿಗಂ ನೊಣನು ಸವಿಯಕ್ಕು ಕನ್ನಡದ ।
	 ಸೊಲ್ಲಗಳ ನೋಡಿ ಸರ್ವಜ್ಞ ॥

೧೩೯೭. ಮಣಿಯ ಮಾಡಿದನೊಬ್ಬ ।
	 ಹೆಣಿದು ಕಟ್ಟಿದನೊಬ್ಬ ಕುಣಿದಾಡಿ ಸತ್ತವನೊಬ್ಬ, ಸಂತೆಯೊಳು ।
	 ಹೆಣನ ಮಾರಿದರು ಸರ್ವಜ್ಞ ॥

೧೩೯೮. ಎಂಟು ಬಳ್ಳದ ನಾಮ । ಗಂಟಲಲಿ ಮುಳ್ಳುಂಟು ।
	 ಬಂಟರನು ಪಿಡಿದು ಬಡಿಸುವದು, ಕವಿಗಳಲಿ ।
	 ಬಂಟರಿದಪೇಳಿ ಸರ್ವಜ್ಞ ॥

೧೩೯೯. ಬಂದಿಹೆನು ನಾನೊಮ್ಮೆ । ಬಂದು ಹೋಗುವೆನೊಮ್ಮೆ
	 ಬಂದೊಮ್ಮೆ ಹೋಗೆ ಬಾರೆ ನಾಂ ಕವಿಗಳಲಿ ।
	 ವಂದ್ಯರಿಗೆ ಪೇಳಿ ಸರ್ವಜ್ಞ ॥

೧೪೦೦. ಕಾಲುಂಟು ನಡೆಯದದು । ಮೂಲೆಯಲಿ ಕಟ್ಟಿಹುದು ।
	 ಬಾಲಕರ ಸೊಮ್ಮು ಹೊರತಿಹುದು ಕವಿಗಳಲಿ ।
	 ಬಾಲರಿದ ಪೇಳಿ ಸರ್ವಜ್ಞ ॥

೧೪೦೧. ಕಡೆ ಬಿಳಿದು ನಡಗಪ್ಪು । ಉಡುವ ವಸ್ತ್ರವದಲ್ಲ್ ।
	 ಬಿಡದೆ ನೀರುಂಟು ಮಡುವಲ್ಲ ಕವಿಗಳೇ
	 ಬೆಡಗು ಪೇಳುವರು ಸರ್ವಜ್ಞ ॥

೧೪೦೨. ಮೂರು ಕಾಲಲಿ ನಿಂದು । ಗೀರಿ ತಿಂಬುವದು ಮರವ ।
	 ಆರಾರು ನೀರು ಕುಡಿಯುವದು ಕವಿಗಳಲಿ ।
	 ಧೀರರಿದ ಪೇಳಿ ಸರ್ವಜ್ಞ ॥

೧೪೦೩. ಒಣಗಿದಾ ಮರ ಚಿಗಿತು । ಬಿಣಿಲು ಬಿಡುವುದ ಕಂಡೆ ।
	 ತಣಿಗೆಯಾ ತಾಣಕದು ಬಹುದು ಕವಿಗಳಲಿ 
	 ಗುಣಯುತರು ಪೇಳಿ ಸರ್ವಜ್ಞ ॥

೧೪೦೪. ನೆತ್ತಿಯಲೆ ಉಂಬುವದು । ಸುತ್ತಲೂ ಸುರಿಸುವದು ।
	 ಎತ್ತಿದರೆ ಎರಡು ಹೋಳಹುದು ಕವಿಗಳಿಂದ
	 ಕುತ್ತರವ ಪೇಳಿ ಸರ್ವಜ್ಞ ॥

೧೪೦೫. ಅರೆವ ಕಲ್ಲಿನ ಮೇಲೆ ಮರ ಮೂಡಿದುದ ಕಂಡೆ ।
	 ಮರದ ಮೇಲೆರಡು ಕೈಕಂಡೆ ಚನ್ನಾಗಿ ।
	 ಇರುವುದಾ ಕಂಡೆ ಸರ್ವಜ್ಞ ॥

೧೪೦೬. ಹತ್ತು ಸಾವಿರ ಕಣ್ಣು । ನೆತ್ತಿಯಲಿ ಬಾಲವು ।
	 ಹತ್ತೆಂಟು ಮಿಕವ ಹಿಡಿಯುವದು
	 ಕವಿಗಳಿದರರ್ಥವನು ಪೇಳಿ ಸರ್ವಜ್ಞ ॥

೧೪೦೮. ಮುಗೈಯ ಲಾಡುವದು । ಹಿಂಗುವದು ಹೊಂಗುವದು
	 ಸಿಂಗಿಯಲಿ ಸೀಳಿ ಬಿಡುತಿಹುದು ಆ ಮಿಗದ
	 ಸಂಗವನು ನೋಡು ಸರ್ವಜ್ಞ ॥

೧೪೦೯. ಹತ್ತುತಲೆ ಕೆಂಪು । ಮತ್ತಾರುತಲೆ ಕರಿದು ।
	 ಹೆತ್ತವ ನೊಡಲ ನುರಿಸುವದು ।
	 ಕವಿಗಳಿದರರ್ಥವನು ಪೇಳಿ ಸರ್ವಜ್ಞ ॥

೧೪೧೦. ಅರಮನೆಯಲಿರುತಿಹುದು । ಕರದಲ್ಲಿ ಬರುತಿಹುದು ।
	 ಕೊರೆದು ವಂಶಜರ ತಿನುತಿಹುದು । ಕವಿಗಳಲಿ ।
	 ದೊರೆಗಳಿದ ಪೇಳಿ ಸರ್ವಜ್ಞ ॥

೧೪೧೧. ಧರೆಯಲ್ಲಿ ಹುಟ್ಟಿ ಅಂ । ತರದಲ್ಲಿ ಓಡುವದು ।
	 ಮೊರೆದೇರಿ ಕಿಡಿಯನುಗುಳುವದು ಕವಿಗಳೇ ।
	 ಅರಿದರಿದು ಪೇಳಿ ಸರ್ವಜ್ಞ ॥

೧೪೧೨. ಅತ್ತಲಂಬಲಿಯೊಳಗೆ ಇತ್ತೊಬ್ಬನಿದ್ದಾನೆ ।
	 ಅತ್ತವನ ನೋಡು ಜನರೆಲ್ಲ ಈ ತುತ್ತ ।
	 ನೆಂತುಂಬರಯ್ಯ ಸರ್ವಜ್ಞ ॥

೧೪೧೩. ಸಂದ ಮೇಲ್ಸುಡುವದು । ಬೆಂದಮೇಲುರಿವುದು ।
	 ಬಂಧಗಳನೆದ್ದು ಬಡಿವುದು ನೀವದರ ।
	 ದಂದುಗವ ನೋಡಿ ಸರ್ವಜ್ಞ ॥

೧೪೧೪. ಅಟ್ಟರಿ ಅದರ ಘನ । ಸುಟ್ಟರೂ ಕುಂಟಣಿ ಘನ ।
	 ಇಟ್ಟಗೆಯ ಮೂಗನರಿದರೂ ಮೂರುಭವ ।
	 ಕಟ್ಟು ಕೂಡುವವು ಸರ್ವಜ್ಞ ॥

೧೪೧೫. ನಾಡೆಲೆಯ ಮೆಲ್ಲುವಳ । ಕೂಡೆ ಬಯಸುತ ಹೋಗೆ 
	 ಕೂಡ ಗೂಡ ಸೀರೆ ಮೊಲೆಗಟ್ಟಿನಾ ಯಕಿಯ ।
	 ಕುಂಡೆಯಾಡೆಂದ ಸರ್ವಜ್ಞ ॥

೧೪೧೬. ನೋಡಯ್ಯ ದೇವ ಸಲೆ । ನಾಡೆಲ್ಲ ಗಾಡಿಗನು ।
	 ವಾಡೆಯನೊಡೆದ ಮಡಕಿಯ ತೆರನಂತೆ ।
	 ಪಾಡಾಯಿತೆಂದ ಸರ್ವಜ್ಞ ॥

೧೪೧೭. ಇನ್ನು ಬಲ್ಲರೆ ಕಾಯಿ । ಮುನ್ನಾರಾ ಅರವತ್ತು ।
	 ಹಣ್ಣು ಹನ್ನೆರಡು ಗೊನೆ ಮೂರು ತೊಟ್ಟೊಂದು ।
	 ಚನ್ನಾಗಿ ಪೇಳಿ ಸರ್ವಜ್ಞ ॥

೧೪೧೮. ಆಸನದ ಲುಂಬುವದು । ಸೂಸುವದು ಬಾಯಲ್ಲಿ ।
	 ಬೇಸರದ ಹೊತ್ತು ಕೊಲುವದು, ಕವಿಗಳೊಳು ।
	 ಸಾಸಿಗರು ಪೇಳಿ ಸರ್ವಜ್ಞ ॥

೧೪೧೯. ಕಚ್ಚಿದರೆ ಕಚ್ಚುವದು । ಕಿಚ್ಚಲ್ಲ ಕೊಳ್ಳೆಯಲ್ಲ ।
	 ಆಶ್ಚರ್ಯವಲ್ಲ, ಅರಿದಲ್ಲವೀ ಮಾತು ।
	 ನಿಶ್ಚರ್ಯವಲ್ಲ ಸರ್ವಜ್ಞ ॥

೧೪೨೦. ಎಂಟು ಬಳ್ಳದ ನಾಮ । ಗಂಟಲಲಿ ಮುಳ್ಳುಂಟು ।
	 ಬಂದರನು ಹಿಡಿದು ಬಡಿಸುವದು ಕವಿಯೆಂಬ ।
	 ತೋಂಟರಿದನ್ಹೇಳಿ ಸರ್ವಜ್ಞ ॥

೧೪೨೧. ಹತ್ತು ಸಾವಿರ ಕಣ್ಣು । ಕತ್ತಿನಲಿ ಕಿರಿಬಾಲ ।
	 ತುತ್ತನೇ ಹಿಡಿದು ತರುತಿಹದು ಕವಿಗಳಿದ ।
	 ರರ್ಥವೇನು ಪೇಳಿ ಸರ್ವಜ್ಞ ॥

ಕನ್ನಡ ವಿಕಿಸೋರ್ಸ್
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ |   ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ | ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ |  ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ|
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ 
</div>

Category: ವಿಕಿಸೋರ್ಸ್ ಪುಟಗಳು
ವರ್ಗ:ಸರ್ವಜ್ಞ